Cricket News: ಬಾಂಗ್ಲಾ ವಿರುದ್ಧ ಹೀನಾಯಾವಾಗಿ ಪಂದ್ಯ ಸೋತ ಬಳಿಕ ಮಾತನಾಡಿದ ರೋಹಿತ್ ಶರ್ಮ ಸೋಲಿಗೆ ನೀಡಿದ ಕಾರಣ ಏನು ಗೊತ್ತೇ?

Cricket News: ಬಾಂಗ್ಲಾ ವಿರುದ್ಧ ಹೀನಾಯಾವಾಗಿ ಪಂದ್ಯ ಸೋತ ಬಳಿಕ ಮಾತನಾಡಿದ ರೋಹಿತ್ ಶರ್ಮ ಸೋಲಿಗೆ ನೀಡಿದ ಕಾರಣ ಏನು ಗೊತ್ತೇ?

Cricket News: ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಏಕದಿನ ಸರಣಿ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ (Team India) ಹೀನಾಯವಾಗಿ ಸೋತಿದೆ. ಟಾಸ್ ಸೋತ ಭಾರತ ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿತು. ಆದರೆ ಕಳಪೆ ಪ್ರದರ್ಶನದಿಂದ 41.2 ಓವರ್ ನಲ್ಲಿ 186 ರನ್ಸ್ ಗಳಿಸಿ ಆಲೌಟ್ ಆಗಿತ್ತು. ಇದು ಬಹಳ ಕಡಿಮೆ ಸ್ಕೋರ್ ಆಗಿತ್ತು, ಬಾಂಗ್ಲಾದೇಶ್ ತಂಡವು, 10ನೇ ವಿಕೆಟ್ ಇದ್ದಾಗ, 52 ರನ್ಸ್ ಗಳ ಪಾರ್ಟ್ನರ್ಶಿಪ್ ನಲ್ಲೋ ಅತ್ಯುತ್ತಮವಾಗಿ ಆಡಿ, ಈ ವಿಕೆಟ್ ನ ಭರ್ಜರಿ ಜಯ ಸಾಧಿಸಿತು. ಮೆಹಿದಿ ಹಸನ್ (Mehedi Hasan) ಮತ್ತು ಮುಸ್ತಾಫಿಜುರ್ ರೆಹಮಾನ್ (Mustafizur Rahman) ಇಬ್ಬರು ಬಾಂಗ್ಲಾದೇಶ್ ಗೆಲುವಿಗೆ ಪ್ರಮುಖ ಕಾರಣವಾದರು. ಭಾರತ ತಂಡ ಉತ್ತಮವಾದ ಬೌಲಿಂಗ್ ಪ್ರದರ್ಶನ ನೀಡಿತಾದರು, ಬ್ಯಾಟಿಂಗ್ ಕಳಪೆ ಆಗಿತ್ತು. ಇತ್ತ ಬಾಂಗ್ಲಾದೇಶ್ ತಂಡದ ಬೌಲಿಂಗ್ ಅದ್ಭುತವಾಗಿತ್ತು, ಆಲ್ ರೌಂಡರ್ ಶಕೀಬ್ ಅಲ್ ಹಸನ್ (Shalib Ul-Hasan) 5 ವಿಕೆಟ್ಸ್ ಪಡೆದರು, ಎಬಾಡೋಟ್ ಹೊಸೈನ್ (Ebadot Hossain) 4 ವಿಕೆಟ್ಸ್ ಪಡೆದರು.

ಮೊದಲ ಪಂದ್ಯದಲ್ಲಿ ಸೋತ ನಂತರ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಮಾತನಾಡಿ, ತಂಡದ ಗೆಲುವಿಗೆ ಕಾರಣ ತಿಳಿಸಿದ್ದಾರೆ, ಬ್ಯಾಟಿಂಗ್ ಇಂದಲೇ ಪಂದ್ಯ ಸೋತದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ರೋಹಿತ್ ಶರ್ಮ. “ನಮ್ಮ ತಂಡ 50 ಓವರ್ ಪೂರ್ತಿ ಬ್ಯಾಟಿಂಗ್ ಮಾಡಬೇಕಿತ್ತು, ಆದರೆ ನಮ್ಮಿಂದ ಅದು ಆಗಲಿಲ್ಲ, 41 ಓವರ್ ಗೆ, 186 ರನ್ಸ್ ಗೆ ಆಲ್ ಔಟ್ ಆದೆವು, ಪೂರ್ತಿ ಬ್ಯಾಟಿಂಗ್ ಮಾಡಿದ್ದರೆ ಇನ್ನು ಕೆಲವು ರನ್ಸ್ ಸ್ಕೋರ್ ಮಾಡಿರುತ್ತಿದ್ದೆವು. ಬಾಂಗ್ಲಾದೇಶ್ ನಲ್ಲಿ ಇದು ಒಳ್ಳೆಯ ಸ್ಕೋರ್ ಆಗಿರಲಿಲ್ಲ. ನಮ್ಮ ತಂಡ ಇನ್ನು 30 ರಿಂದ 40 ರನ್ಸ್ ಹೆಚ್ಚಾಗಿ ಸ್ಕೋರ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು, ಆಗ ಮ್ಯಾಚ್ ನ ಫಲಿತಾಂಶ ಬೇರೆಯೇ ಇರುತ್ತಿತ್ತು.. ಇದನ್ನು ಓದಿ.. Cricket News: ಆತನೊಬ್ಬ ಖಂಡಿತಾ ಭಾರತಕ್ಕೆ ಮುಂದೊಂದು ದಿನ ವಿಶ್ವಕಪ್ ಗೆಲ್ಲಿಸಿ ಕೊಡುತ್ತಾನೆ ಎಂದ ಬ್ರೆಟ್ ಲೀ: ಯಾರು ಆ ಆಟಗಾರ ಅಂತೇ ಗೊತ್ತೇ??

ಕೆ.ಎಲ್.ರಾಹುಲ್ (K L Rahul) ಮತ್ತು ವಾಷಿಂಗ್ಟನ್ ಸುಂದರ್ (Washington Sundar) ಇಬ್ಬರು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ, ವಿಕೆಟ್ಸ್ ಗಳು ಬೇಗ ಹೋದ ಕಾರಣ ಅವರಿಬ್ಬರು ಒತ್ತಡದಲ್ಲಿದ್ದರು. ಇಲ್ಲಿನ ಪಿಚ್ ಚಾಲೆಂಜಿಂಗ್ ಆಗಿತ್ತು. ಎಸೆತಗಳು ಸ್ಪಿನ್ ಆಗುತ್ತಿದ್ದವು, ಇಲ್ಲಿ ಆಡುವುದು ಹೇಗೆ ಎಂದು ಅರ್ಥಮಾಡಿಕೊಳ್ಳಬೇಕಿತ್ತು. ಇದರಿಂದ ನಮಗೆ ಕ್ಷಮೆ ಸಿಗುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ನಾವು ಬಂಗ್ಲಾದೇಶ್ ಸ್ಪಿನ್ನರ್ ಗಳ ಬೌಲಿಂಗ್ ಗೆ ಹೇಗೆ ಬ್ಯಾಟಿಂಗ್ ಮಾಡಬೇಕು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇಂಥ ಪರಿಸ್ಥಿತಿಯಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ, ಸ್ಟ್ರೆಸ್ ಮ್ಯಾನೇಜ್ಮೆಂಟ್ ಬಗ್ಗೆ ನಾವು ಕಲಿಯಬೇಕು. ಒತ್ತಡದ ಸಮಯದಲ್ಲಿ ಉತ್ತಮವಾಗಿ ಆಡಿದರೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮುಂಬರುವ ಪಂದ್ಯಕ್ಕೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ..” ಎಂದಿದ್ದಾರೆ ರೋಹಿತ್ ಶರ್ಮಾ. ಇದನ್ನು ಓದಿ..Cricket News: ವಿರಾಟ್ ನಾಯಕನಾಗಿದ್ದಾಗ ಭರ್ಜರಿಯಾಗಿ ಮಿಂಚಿ, ರೋಹಿತ್ ನಾಯಕನಾದ ಮೇಲೆ ಕೈ ಕೊಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??