Cricket News: ತಂಡದಲ್ಲಿಯೇ ಉಳಿಬೇಕು ಎಂದರೆ, ರಾಹುಲ್ ಗೆ ಹೊಸ ಸಂದೇಶ ಕೊಟ್ಟು, ಜವಾಬ್ದಾರಿ ಕೊಟ್ಟ ತಂಡದ ಮ್ಯಾನೇಜ್ಮೆಂಟ್. ಇನ್ಮುಂದೆ ಏನು ಮಾಡಬೇಕಂತೆ ಗೊತ್ತೇ?
Cricket News: ತಂಡದಲ್ಲಿಯೇ ಉಳಿಬೇಕು ಎಂದರೆ, ರಾಹುಲ್ ಗೆ ಹೊಸ ಸಂದೇಶ ಕೊಟ್ಟು, ಜವಾಬ್ದಾರಿ ಕೊಟ್ಟ ತಂಡದ ಮ್ಯಾನೇಜ್ಮೆಂಟ್. ಇನ್ಮುಂದೆ ಏನು ಮಾಡಬೇಕಂತೆ ಗೊತ್ತೇ?
Cricket News: ಭಾರತ ತಂಡ (Team India) ಸತತವಾಗಿ ಸೋಲನ್ನು ಅನುಭವಿಸುತ್ತಿದೆ, ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 186 ರನ್ ಗಳ ಗುರಿ ನೀಡಿ, ಬಾಂಗ್ಲಾದೇಶ್ ತಂಡ 1 ವಿಕೆಟ್ ನಲ್ಲಿ ಗೆದ್ದಿತು. ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನ ಕಳಪೆಯಾಗಿತ್ತು ಎಂದೇ ಎಲ್ಲರೂ ಭಾವಿಸುತ್ತಿದ್ದಾರೆ. ಪ್ರಸ್ತುತ ತಂಡದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ (K L Rahul) ಅವರು ಮ್ಯಾನೇಜ್ಮೆಂಟ್ ತಮಗೆ ನೀಡಿರುವ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಆ ಹೊಸ ಜವಾಬ್ದಾರಿ ಏನು ಎಂದು ತಿಳಿಸುತ್ತೇವೆ ನೋಡಿ..
“ಕಳೆದ 8 ರಿಂದ 9 ತಿಂಗಳುಗಳಲ್ಲಿ ನಾವು ಹೆಚ್ಚು ಓಡಿಐ (ODI) ಪಂದ್ಯಗಳನ್ನು ಆಡಿಲ್ಲ, ಈ ಹಿಂದೆ 2020 ಮತ್ತು 2021ಪಂದ್ಯಗಳಲ್ಲಿ ನೋಡಿದರೆ, ನಾನು 4 ಮತ್ತು 5ನೇ ಕ್ರಮಾಂಕದಲ್ಲಿ ಆಡಿದ್ದೇನೆ, ಈ ರೋಲ್ ಅನ್ನು ಪ್ಲೇ ಮಾಡುವ ಮತ್ತು ವಿಕೆಟ್ಸ್ ಗಳನ್ನು ತೆಗೆದಿದ್ದೇನೆ, ಇದೆಲ್ಲವನ್ನು ನಾನು ಈ ಮೊದಲೇ ಮಾಡಿರುವುದರಿಂದ ವೈಟ್ ಬಾಲ್ ಕ್ರಿಕೆಟ್ ನಲ್ಲಿ ನಾನು ಇದನ್ನು ಮುಂದುವರೆಸಿಕೊಂಡು ಹೋಗಲು ತಯಾರಾಗಿರಬೇಕು ಎಂದು ಮ್ಯಾನೇಜ್ಮೆಂಟ್ ನನಗೆ ಹೇಳಿದೆ…” ಎಂದು ಕೆ.ಎಲ್.ರಾಹುಲ್ ಹೇಳಿದ್ದಾರೆ. ಇದನ್ನು ಓದಿ..Cricket News: ವಿರಾಟ್ ನಾಯಕನಾಗಿದ್ದಾಗ ಭರ್ಜರಿಯಾಗಿ ಮಿಂಚಿ, ರೋಹಿತ್ ನಾಯಕನಾದ ಮೇಲೆ ಕೈ ಕೊಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??
ನಿನ್ನೆಯ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರು ಒಂದು ಕ್ಯಾಚ್ ಅನ್ನು ಕೈಬಿಟ್ಟರು, ಅದು ಮೆಹೇದಿ (Mehedi) ಅವರ ಕ್ಯಾಚ್ ಆಗಿತ್ತು, ಅದನ್ನು ಹಿಡಿದಿದ್ದರೆ ಬಹುಶಃ ಟೀಮ್ ಇಂಡಿಯಾ ಗೆಲ್ಲಲು ಸುಲಭವಾಗುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪಂದ್ಯದ ಸೋಲಿನ ಬಗ್ಗೆ ಕೂಡ ಮಾತನಾಡಿದ ಕೆ.ಎಲ್.ರಾಹುಲ್ ಅವರು, “ಇದು ಕ್ರಿಕೆಟ್ ಅಲ್ವಾ, ಇಲ್ಲಿ ಅನಿರೀಕ್ಷಿತವಾದದನ್ನೇ ನಿರೀಕ್ಷೆ ಮಾಡಬೇಕು. ಕ್ರಿಕೆಟ್ ಇರುವವರೆಗೂ ಇದು ನಡೆಯುತ್ತಿರುತ್ತದೆ. ಅವರು ಕೊನೆಯವರೆಗೂ ಒಳ್ಳೆಯ ಫೈಟ್ ಕೊಟ್ಟರು, ನಾವು ಕೆಲವು ಕ್ಯಾಚ್ ಗಳನ್ನು ಡ್ರಾಪ್ ಮಾಡಿದ್ದು ಅವರಿಗೆ ಸುಲಭವಾಯಿತು..” ಎಂದು ಕೆ.ಎಲ್.ರಾಹುಲ್ ಹೇಳಿದ್ದಾರೆ. ಇದನ್ನು ಓದಿ.. Cricket News: ಬಾಂಗ್ಲಾ ವಿರುದ್ಧ ಹೀನಾಯಾವಾಗಿ ಪಂದ್ಯ ಸೋತ ಬಳಿಕ ಮಾತನಾಡಿದ ರೋಹಿತ್ ಶರ್ಮ ಸೋಲಿಗೆ ನೀಡಿದ ಕಾರಣ ಏನು ಗೊತ್ತೇ?