IPL 2023: ಐಪಿಎಲ್ ಗೆ ಭರ್ಜರಿ ನಿಯಮ ರೂಪಿಸಿದ ಬಿಸಿಸಿಐ: ಹೊಸ ರೂಲ್ಸ್ ಬಂದ್ಮೇಲೆ ಮತ್ತಷ್ಟು ರಂಗು ಫಿಕ್ಸ್. ಪ್ಲೇಯರ್ಸ್ ಆಯ್ಕೆಯಲ್ಲಿ ಹೊಸ ರೂಲ್ಸ್.

IPL 2023: ಐಪಿಎಲ್ ಗೆ ಭರ್ಜರಿ ನಿಯಮ ರೂಪಿಸಿದ ಬಿಸಿಸಿಐ: ಹೊಸ ರೂಲ್ಸ್ ಬಂದ್ಮೇಲೆ ಮತ್ತಷ್ಟು ರಂಗು ಫಿಕ್ಸ್. ಪ್ಲೇಯರ್ಸ್ ಆಯ್ಕೆಯಲ್ಲಿ ಹೊಸ ರೂಲ್ಸ್.

IPL 2023: ಐಪಿಎಲ್ 2023 ಮುಂದಿನ ವರ್ಷ ಏಪ್ರಿಲ್ ಇಂದ ಶುರುವಾಗಲಿದೆ, ಈ ವರ್ಷದ ಆಕ್ಷನ್ (IPL Auction) ಈ ತಿಂಗಳು 23ರಂದು ಕೊಚ್ಚಿಯಲ್ಲಿ ನಡೆಯಲಿದ್ದು, ಈಗಾಗಲೇ ಎಲ್ಲರಿಗೂ ಕುತೂಹಲ ಹೆಚ್ಚಾಗಿದೆ. ಇದರ ಜೊತೆಗೆ ಐಪಿಎಲ್ ನಲ್ಲಿ ಬಿಸಿಸಿಐ (BCCI) ಈಗ ಹೊಸ ರೂಲ್ಸ್ ಜಾರಿಗೆ ತಂದಿದ್ದು, ಈ ಹೊಸ ರೂಲ್ಸ್ ಇಂದ ಐಪಿಎಲ್ ಇನ್ನಷ್ಟು ರೋಚಕವಾಗುವುದು ಪಕ್ಕಾ ಆಗಿದೆ. ಈಗಾಗಲೇ 2022ರ ಮುಸ್ತಾಕ್ ಅಲಿ ಟ್ರೋಫಿಯಲ್ಲಿ (Mushtaq Ali Trophy) ಈ ರೂಲ್ಸ್ ಬಳಸಿ, ಅದು ಯಶಸ್ವಿಯಾಗಿರುವ ಕಾರಣ ಐಪಿಎಲ್ ನಲ್ಲಿ ಸಹ ಬಳಸಲಾಗುತ್ತಿದೆ. ಇದು ಇಂಪ್ಯಾಕ್ಟ್ ಪ್ಲೇಯರ್ (Impact Player) ಪ್ರಭಾವಿ ಆಟಗಾರನ ರೂಲ್ಸ್ ಆಗಿದೆ, ಈಗಾಗಲೇ ಫುಟ್ ಬಾಲ್ (Football) ಮತ್ತು ಕಬಡ್ಡಿ (Kabaddi) ಆಟಗಳಲ್ಲಿ ಈ ರೂಲ್ ಇದ್ದು, ಕ್ರಿಕೆಟ್ ಸಹ ತರಲಾಗುತ್ತಿದೆ.

ಇಂಪ್ಯಾಕ್ಟ್ ಪ್ಲೇಯರ್ ಅಥವಾ ಪ್ರಭಾವಿ ಆಟಗಾರ ಎಂದರೆ, ತಂಡದಲ್ಲಿ ಪ್ಲೇಯಿಂಗ್ 11 ಬಿಟ್ಟು, ಹೆಚ್ಚುವರಿ ಆಟಗಾರ, ಒಂದು ವೇಳೆ ಪಂದ್ಯ ನಡೆಯುವಾಗ, ಯಾವುದಾದರೂ ಒಬ್ಬ ಆಟಗಾರನಿಗೆ ತೊಂದರೆ ಆದರೆ ಇಂಪ್ಯಾಕ್ಟ್ ಪ್ಲೇಯಿಂಗ್ ಬರುವ ಅನುಮತಿ ಇತ್ತು, ಆದರೆ ಅವರು ಫೀಲ್ಡಿಂಗ್ ಗೆ ಮಾತ್ರ ಸೀಮಿತವಾಗಿದ್ದರು, ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶ ಇರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ ಇಂಪ್ಯಾಕ್ಟ್ ಪ್ಲೇಯರ್ ಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶ ಸಹ ಇರುತ್ತದೆ. ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಟಾಸ್ ನಂತರ ಪ್ಲೇಯಿಂಗ್ 11 (Playing 11) ಜೊತೆಗೆ 4 ಇಂಪ್ಯಾಕ್ಟ್ ಆಟಗಾರರನ್ನು ಸಹ ಘೋಷಿಸಬೇಕು, ಪಂದ್ಯ ನಡೆಯುವಾಗ ಮಧ್ಯದಲ್ಲಿ ಒಬ್ಬರು ಇಂಪ್ಯಾಕ್ಟ್ ಆಟಗಾರನನ್ನು ಮಾತ್ರ ಬಳಸಬಹುದು. ಇದನ್ನು ಓದಿ..Cricket News: ರೋಹಿತ್ ರವರನ್ನು ತೆಗೆದು ಹಾಕಿ, ಪಾಂಡ್ಯ ರವರಿಗೆ ಯಾಕೆ ನಾಯಕತ್ವ ನೀಡಬೇಕು ಗೊತ್ತೆ?? ಟಾಪ್ 5 ಕಾರಣಗಳು ಯಾವ್ಯಾವು ಗೊತ್ತೆ?

ಇಂಪ್ಯಾಕ್ಟ್ ಪ್ಲೇಯರ್ ರನ್ನು ಕರೆತರುವ ಮೊದಲು ಫೀಲ್ಡ್ ಅಂಪೈರ್ ಅಥವಾ ನಾಲ್ಕನೇ ಅಂಪೈರ್ ಗೆ ತಿಳಿಸಬೇಕು, ಬಂದವರು ಬ್ಯಾಟಿಂಗ್ ಅಥವಾ ಬೌಲಿಂಗ್ ಕೂಡ ಮಾಡಬಹುದು. ಬ್ಯಾಟಿಂಗ್ ಮಾಡುತ್ತಿರುವ ತಂಡ 14 ಓವರ್ ಗಳ ಒಳಗೆ ಇಂಪ್ಯಾಕ್ಟ್ ಅಂಪೈರ್ ಅನ್ನು ಬಳಸಬಹುದು, ಅದಾಗಲೇ ಔಟ್ ಆಗಿರುವ ಬ್ಯಾಟ್ಸ್ಮನ್ ಅನ್ನು ಕೂಡ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸುವ ಅವಕಾಶ ಇರುತ್ತದೆ. ಬೌಲಿಂಗ್ ಮಾಡುವವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೆ, ಒಂದು ವೇಳೆ ಹಿಂದಿನ ಬೌಲರ್ 2 ಓವರ್ ಬೌಲಿಂಗ್ ಮಾಡಿದ್ದರೆ, ಹೊಸದಾಗಿ ಅವರ ಬದಲಿಯಾಗಿ ಬರುವವರು 4 ಓವರ್ ಬೌಲಿಂಗ್ ಮಾಡಬಹುದು. ಈ ಹೊಸ ನಿಯಮ ಐಪಿಎಲ್ ಗೆ ಹೆಚ್ಚು ಸಹಾಯಕಾರಿ ಆಗುವುದಂತೂ ಪಕ್ಕಾ ಆಗಿದೆ. ಇದನ್ನು ಓದಿ.. Cricket News: ಆತನೊಬ್ಬ ಖಂಡಿತಾ ಭಾರತಕ್ಕೆ ಮುಂದೊಂದು ದಿನ ವಿಶ್ವಕಪ್ ಗೆಲ್ಲಿಸಿ ಕೊಡುತ್ತಾನೆ ಎಂದ ಬ್ರೆಟ್ ಲೀ: ಯಾರು ಆ ಆಟಗಾರ ಅಂತೇ ಗೊತ್ತೇ??