Cricket News: ಆತನೊಬ್ಬ ಖಂಡಿತಾ ಭಾರತಕ್ಕೆ ಮುಂದೊಂದು ದಿನ ವಿಶ್ವಕಪ್ ಗೆಲ್ಲಿಸಿ ಕೊಡುತ್ತಾನೆ ಎಂದ ಬ್ರೆಟ್ ಲೀ: ಯಾರು ಆ ಆಟಗಾರ ಅಂತೇ ಗೊತ್ತೇ??
Cricket News: ಆತನೊಬ್ಬ ಖಂಡಿತಾ ಭಾರತಕ್ಕೆ ಮುಂದೊಂದು ದಿನ ವಿಶ್ವಕಪ್ ಗೆಲ್ಲಿಸಿ ಕೊಡುತ್ತಾನೆ ಎಂದ ಬ್ರೆಟ್ ಲೀ: ಯಾರು ಆ ಆಟಗಾರ ಅಂತೇ ಗೊತ್ತೇ??
Cricket News: ಈ ವರ್ಷದ ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡವು (Team India) ಸೋತ ನಂತರ, ಕೆಲವು ಟೀಕೆಗಳು ಕೇಳಿಬಂದವು. 2011ರಲ್ಲಿ ಧೋನಿ (Dhoni) ಅವರ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆದ್ದ ನಂತರ ಭಾರತ ತಂಡ ಐಸಿಸಿ ಟ್ರೋಫಿ ಗೆದ್ದಿಲ್ಲ, ಹಾಗಾಗಿ ಮುಂದಿನ ಸಾರಿ ಆದರು ಐಸಿಸಿ ಟ್ರೋಫಿ (ICC Trophy) ಗೆಲ್ಲಲೇಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಭಾರತ ತಂಡ ವಿಶ್ವಕಪ್ ಗೆಲ್ಲದೆ ಹೋದರು ಸಹ ಬ್ಯಾಟ್ಸ್ಮನ್ ಗಳ ವಿಶೇಷವಾಗಿ ವಿರಾಟ್ ಕೊಹ್ಲಿ, (Virat Kohli) ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಆಟಕ್ಕೆ ಎಲ್ಲರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಇದೀಗ ಭಾರತ ತಂಡದ ಆ ಒಬ್ಬ ಆಟಗಾರನ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ (Brett Lee) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೆಟ್ ಲೀ ಅವರು ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಆ ಒಬ್ಬ ಆಟಗಾರನ ಬಗ್ಗೆ ಹಾಡಿ ಹೊಗಳಿದ್ದು, ಆತ ಮತ್ಯಾರು ಅಲ್ಲಾ, ಮಿ.360 ಎಂದು ಹೆಸರು ಪಡೆದುಕೊಂಡಿರುವ ಸೂರ್ಯಕುಮಾರ್ ಯಾದವ್ ಅವರು, ವಿಶ್ವಕಪ್ ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಪ್ರದರ್ಶನ ಮತ್ತು ಅವರು ಮೈದಾನದ ಎಲ್ಲಾ ಮೂಲೆಗಳಿಗೂ ಹೇಗೆ ಚೆಂಡನ್ನು ಕಳಿಸಿ ಬೌಂಡರಿ ಮತ್ತು ಸಿಕ್ಸರ್ ಪಡೆಯುತ್ತಿದ್ದರು ಎಂದು ಎಲ್ಲರೂ ನೋಡಿ, ವಿಶ್ವಮಟ್ಟದ ಆಟಗಾರ ಎಂದು ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದರು. ಐಸಿಸಿ ಹೊರಬಿಟ್ಟ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಸ್ತಾನದಲ್ಲಿದ್ದಾರೆ. ಇವರ ಬಗ್ಗೆ ಬ್ರೆಟ್ ಲೀ ಅವರು ಹೇಳಿದ್ದು ಹೀಗೆ.. ಇದನ್ನು ಓದಿ.. Pro Kabaddi League: ಇನ್ನೇನು ಕೊನೆಯ ಹಂತಕ್ಕೆ ಬಂದ ಪ್ರೊ ಕಬ್ಬಡ್ಡಿ; ಪ್ಲೇ ಆಫ್ ನಂತರ ಪಂದ್ಯಗಳು ಹೇಗೆ ನಡೆಯಲಿವೆ ಗೊತ್ತೇ? ಯಾರು ನೇರ ಸೆಮಿ ಫೈನಲ್ ಗೆ ಎಂಟ್ರಿ??
“ಇಂಡಿಯಾ ವರ್ಲ್ಡ್ ಕಪ್ ಗೆಲ್ಲದೆ ಹೋದರು, ಸೂರ್ಯ ಶೈನ್ ಆಗಿದ್ದಾರೆ. ನಾನು ಹೇಳ್ತಿರೋದು ಸೂರ್ಯಕುಮಾರ್ ಯಾದವ್ ಬಗ್ಗೆ. ಅವರು ಟಿ20 ಪ್ರಪಂಚದ ಹೊಸ ಸೂಪರ್ ಸ್ಟಾರ್. ಹಿಂದಿನ 12 ರಿಂದ 15 ತಿಂಗಳುಗಳಲ್ಲಿ ವಿಶ್ವಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಅಂತಹ ಕಷ್ಟವಾದ ಪಿಚ್ ನಲ್ಲಿ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ. ಯಾವುದೇ ಭಯವಿಲ್ಲದೆ ಅವರು ಚೆಂಡುಗಳನ್ನು ಹೊಡೆಯುವ ರೀತಿ ನೋಡಿದರೆ, ಚೆಸ್ ಗ್ರ್ಯಾಂಡ್ ಮಾಸ್ಟರ್ ಥರ ಕಾಣಿಸುತ್ತಾರೆ. ವಿಶ್ವಕಪ್ ನ ಆಕರ್ಷಣೆ ಅವರೇ ಆಗಿದ್ದರು. ಸೂರ್ಯಕುಮಾರ್ ಯಾದವ್ ಅವರು ರನ್ಸ್ ಗಳಿಸುವುದು ಮಾತ್ರವಲ್ಲ, ಭಾರತ ತಂಡಕ್ಕೆ ಖಂಡಿತವಾಗಿ ವಿಶ್ವಕಪ್ ಗೆದ್ದುಕೊಡುತ್ತಾರೆ. ಅವರಿಗೆ ನಾನು ಒಂದು ಸಲಹೆ ನೀಡುತ್ತೇನೆ, ಇದೆ ರೀತಿ ಆಡುವುದನ್ನು ಮುಂದುವರೆಸಿ, ಯಾವುದನ್ನು ಬಡಲಾಯಿಸಬೇಡಿ, ನಿಮ್ಮನ್ನು ನೀವು ಬೆಂಬಲಿಸಿ..” ಎಂದು ಹೇಳಿದ್ದಾರೆ ಬ್ರೆಟ್ ಲೀ. ಇದನ್ನು ಓದಿ.. Cricket News: ರೋಹಿತ್ ರವರನ್ನು ತೆಗೆದು ಹಾಕಿ, ಪಾಂಡ್ಯ ರವರಿಗೆ ಯಾಕೆ ನಾಯಕತ್ವ ನೀಡಬೇಕು ಗೊತ್ತೆ?? ಟಾಪ್ 5 ಕಾರಣಗಳು ಯಾವ್ಯಾವು ಗೊತ್ತೆ?