Pro Kabaddi League: ಇನ್ನೇನು ಕೊನೆಯ ಹಂತಕ್ಕೆ ಬಂದ ಪ್ರೊ ಕಬ್ಬಡ್ಡಿ; ಪ್ಲೇ ಆಫ್ ನಂತರ ಪಂದ್ಯಗಳು ಹೇಗೆ ನಡೆಯಲಿವೆ ಗೊತ್ತೇ? ಯಾರು ನೇರ ಸೆಮಿ ಫೈನಲ್ ಗೆ ಎಂಟ್ರಿ??
Pro Kabaddi League: ಇನ್ನೇನು ಕೊನೆಯ ಹಂತಕ್ಕೆ ಬಂದ ಪ್ರೊ ಕಬ್ಬಡ್ಡಿ; ಪ್ಲೇ ಆಫ್ ನಂತರ ಪಂದ್ಯಗಳು ಹೇಗೆ ನಡೆಯಲಿವೆ ಗೊತ್ತೇ? ಯಾರು ನೇರ ಸೆಮಿ ಫೈನಲ್ ಗೆ ಎಂಟ್ರಿ??
Pro Kabaddi League: ಭಾರಿ ರೋಚಕತೆ ಮತ್ತು ಕುತೂಹಲದಿಂದ ಕೂಡಿರುವ ಪ್ರೊ ಕಬಡ್ಡಿ ಲೀಗ್ (Pro Kabaddi League) ಈಗ ಪ್ಲೇ ಆಫ್ಸ್ ಹಂತಕ್ಕೆ ಬಂದು ತಲುಪಿದೆ. ಇಲ್ಲಿ ಪ್ಲೇ ಆಫ್ಸ್ ಗೆ ನೇರವಾಗಿ ಕ್ವಾಲಿಫೈ ಆಗಿರುವ ತಂಡಗಳು ಯಾವುವು? ಯಾವ ತಂಡ ಪ್ಲೇ ಆಫ್ಸ್ ಗೆ ಕ್ವಾಲಿಫೈ ಆಗಬಹುದು? ಇದೆಲ್ಲದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಪ್ರೊಕಬಡ್ಡಿ ಲೀಗ್ ನಲ್ಲಿ ನಮ್ಮ ಬೆಂಗಳೂರು ಬುಲ್ಸ್ ತಂಡ ಆರಂಭದಿಂದಲೂ ಉತ್ತಮವಾದ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಈ ಟೂರ್ನಿಯ ನಿರ್ಣಾಯಕ ಘಟ್ಟದಲ್ಲಿ, 19 ಪಂದ್ಯಗಳನ್ನು ಆಡಿ 69 ಪಾಯಿಂಟ್ಸ್ ಪಡೆದಿದೆ ಜೈಪುರ್ ಪಿಂಕ್ ಪ್ಯಾಂಥರ್ಸ್ (Jaipur Pink Panthers) ತಂಡನ್..
19ಬಪಂದ್ಯಗಳಲ್ಲಿ 69 ಪಾಯಿಂಟ್ಸ್ ಪಡೆದ ಮತ್ತೊಂದು ತಂಡ ಪುಣೇರಿ ಪಲ್ಟನ್ (Puneri Paltan) ಮತ್ತು 19 ಪಂದ್ಯಗಳಲ್ಲಿ ನಮ್ಮ ಬೆಂಗಳೂರು ಬುಲ್ಸ್ (Bengaluru Bulls) ತಂಡ 63 ಪಾಯಿಂಟ್ಸ್ ಪಡೆದು ಪ್ಲೇ ಆಫ್ಸ್ ಗೆ ಬಹುತೇಕ ಸೆಲೆಕ್ಟ್ ಆದ ಹಾಗೆ ಆಗಿದೆ. ಪ್ಲೇಆಫ್ಸ್ ನಲ್ಲಿ ಇನ್ನು ಮೂರು ಸ್ಥಾನಗಳಿದ್ದು, ಅವುಗಲುಗೆ 19 ಪಂದ್ಯಗಳಲ್ಲಿ 60 ಪಾಯಿಂಟ್ಸ್ ಪಡೆದ ಯುಪಿ ಯೋಧ ತಂಡ, 19 ಪಂದ್ಯಗಳಲ್ಲಿ 56 ಪಾಯಿಂಟ್ಸ್ ಪಡೆದ ತಮಿಳ್ ತಲೈವಾದ್ (Tamil Thalaivas)ತಂಡ, 19 ಪಂದ್ಯಗಳಲ್ಲಿ 54 ಪಾಯಿಂಟ್ಸ್ ಪಡೆದ ದಬಾಂಗ್ ಡೆಲ್ಲಿ (Dabang Delhi) ತಂಡ, 18 ಪಂದ್ಯಗಳಲ್ಲಿ 50 ಪಾಯಿಂಸ್ಟ್ ಯು ಮುಂಬಾ ತಂಡ, 18 ಪಂದ್ಯಗಳಲ್ಲಿ 49 ಪಾಯಿಂಟ್ಸ್ ಪಡೆದ ಬೆಂಗಾಲ್ ವಾರಿಯರ್ಸ್ (Bengal Warriors) ತಂಡ, 18 ಪಂದ್ಯಗಳಲ್ಲಿ 48 ಪಾಯಿಂಟ್ಸ್ ಪಡೆದ ಪಾಟ್ನಾ ಪೈರೇಟ್ಸ್ (Patna Pirates) ತಂಡ, 18 ಪಂದ್ಯಗಳಲ್ಲಿ 46 ಪಾಯಿಂಟ್ಸ್ ಪಡೆದ ಹರಿಯಾಣ ಸ್ಟೀಲರ್ಸ್ (Haryana Steelers) ತಂಡ ಮತ್ತು 18 ಪಂದ್ಯಗಳಲ್ಲಿ 46 ಪಾಯಿಂಟ್ಸ್ ಪಡೆದ ಗುಜರಾತ್ ಜೈಂಟ್ಸ್ (Gujarat Giants) ತಂಡಗಳ ನಡುವೆ ಭಾರಿ ಪೈಪೋಟಿ ಇದೆ. ಇದನ್ನು ಓದಿ.. Post Office Saving Schemes: ಈ ಚಿಕ್ಕ ಯೋಜನೆಯಲ್ಲಿ 50 ರೂಪಾಯಿ ಹೂಡಿಕೆ ಮಾಡಿದರೆ, 35 ಲಕ್ಷ ರೂಪಾಯಿ ಲಾಭ. ಯಾವ ಸ್ಕೀಮ್ ಗೊತ್ತೇ?
ಪ್ಲೇಆಫ್ಸ್ ಪಂದ್ಯಗಳ ಡಿಸೆಂಬರ್ 13ರಿಂದ ಮುಂಬೈ ನಲ್ಲಿ ನಡೆಯಲಿದೆ, ಈ ಪಂದ್ಯಗಳಲ್ಲಿ ಗೆದ್ದು ಮೊದಲ ಎರಡು ಸ್ಥಾನದಲ್ಲಿ ಬರುವ ತಂಡಗಳು ಸೆಮಿಫೈನಲ್ಸ್ ಗೆ ಪ್ರವೇಶ ಪಡೆಯಲಿದೆ. ಇನ್ನುಳಿದ 4 ಸ್ಥಾನಗಳಲ್ಲಿ ಬರುವ ತಂಡಗಳು, ಎಲಿಮಿನೇಟರ್ ಪಂದ್ಯವನ್ನಾಡಿ, ಅದರಲ್ಲಿ ಗೆದ್ದ ತಂಡಗಳು ಸೆಮಿಫೈನಲ್ಸ್ ಪ್ರವೇಶ ಮಾಡಲಿದೆ. ಪ್ಲೇಆಫ್ಸ್ ವೇಳಾಪಟ್ಟಿ ಹೀಗಿದೆ, ಡಿಸೆಂಬರ್ 13ರಂದು ಎರಡು ಪ್ಲೇಆಫ್ಸ್ ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯ 3 ವರ್ಸಸ್ 6ನೇ ಸ್ಥಾನದವರ ಜೊತೆಗೆ, ಎರಡನೇ ಪಂದ್ಯ 4 ವರ್ಸಸ್ ಐದನೇ ಸ್ಥಾನದವರ ಜೊತೆಗೆ. ಡಿಸೆಂಬರ್ 15 ರಂದು ಸೆಮಿಫೈನಲ್ಸ್ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಅಗ್ರಸ್ತಾನ ವರ್ಸಸ್ ಮೊದಲ ಎಲಿಮಿನೇಟರ್ ಪಂದ್ಯದ ವಿನ್ನರ್, ಎರಡನೇ ಸೆಮಿಫೈನಲ್ಸ್ ನಲ್ಲಿ 2ನೇ ಸ್ಥಾನದ ತಂಡ ವರ್ಸಸ್ ಎರಡನೇ ಎಲಿಮಿನೇಟರ್ ಪಂದ್ಯದ ವಿನ್ನರ್. ಡಿಸೆಂಬರ್ 17ರಂದು ಫೈನಲ್ಸ್ ಪಂದ್ಯವು ಮುಂಬೈನಲ್ಲಿ ನಡೆಯಲಿದೆ.. ಇದನ್ನು ಓದಿ..Cricket News: ರೋಹಿತ್ ರವರನ್ನು ತೆಗೆದು ಹಾಕಿ, ಪಾಂಡ್ಯ ರವರಿಗೆ ಯಾಕೆ ನಾಯಕತ್ವ ನೀಡಬೇಕು ಗೊತ್ತೆ?? ಟಾಪ್ 5 ಕಾರಣಗಳು ಯಾವ್ಯಾವು ಗೊತ್ತೆ?