Rashmika Mandanna: ರಶ್ಮಿಕಾ ಮಂದಣ್ಣ ರವರ ಬ್ಯಾನ್ ಕುರಿತು ಹಾರಿದಾಡುತ್ತಿರುವ ಸುದ್ದಿಗಳಿಗೆ ಬ್ರೇಕ್ ಹಾಕಿದ ಕನ್ನಡ ಚಲನಚಿತ್ರ ಅಧ್ಯಕ್ಷ ಹೇಳಿದ್ದೇನು ಗೊತ್ತೇ??
Rashmika Mandanna: ರಶ್ಮಿಕಾ ಮಂದಣ್ಣ ರವರ ಬ್ಯಾನ್ ಕುರಿತು ಹಾರಿದಾಡುತ್ತಿರುವ ಸುದ್ದಿಗಳಿಗೆ ಬ್ರೇಕ್ ಹಾಕಿದ ಕನ್ನಡ ಚಲನಚಿತ್ರ ಅಧ್ಯಕ್ಷ ಹೇಳಿದ್ದೇನು ಗೊತ್ತೇ??
Rashmika Mandanna: ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇಂದು ನ್ಯಾಷನಲ್ ಕ್ರಶ್ ಆಗಿ ಬೆಳೆದು ನಿಂತಿದ್ದಾರೆ. ಪುಷ್ಪ ಸಕ್ಸಸ್ ಇಂದ ಉತ್ತುಂಗದಲ್ಲಿರುವ ರಶ್ಮಿಕಾ (Rashmika Mandanna) ಅವರು ಬಾಲಿವುಡ್ (Bollywood) ಗು ಎಂಟ್ರಿ ಕೊಟ್ಟಿದ್ದಾರೆ. ತಮಿಳಿನ ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರೊಡನೆ ನಟಿಸಿರುವ ಸಿನಿಮಾ ವಾರಿಸು (Varisu) ಮುಂದಿನ ವರ್ಷವಷ್ಟೇ ತೆರೆಕಾಣಲಿದೆ. ಎಲ್ಲಾ ಚಿತ್ರರಂಗದಲ್ಲೂ ಯಶಸ್ಸು ಪಡೆದಿರುವ ರಶ್ಮಿಕಾ ಅವರ ಬಗ್ಗೆ ಈಗ ಒಂದು ಸುದ್ದಿ ಭಾರಿ ವೈರಲ್ ಆಗಿತ್ತು. ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗ ಬ್ಯಾನ್ ಮಾಡಿದೆ ಎಂದು ಹೇಳಲಾಗಿತ್ತು.
ರಶ್ಮಿಕಾ ಅವರು ಇತ್ತೀಚೆಗೆ ನೀಡಿದ ಹಿಂದಿ ಸಂದರ್ಶನದಲ್ಲಿ ತಮ್ಮ ಮೊದಲ ಸಿನಿಮಾ ಬಗ್ಗೆ ಮಾತನಾಡುವಾಗ, ಸಿನಿಮಾ ನಿರ್ದೇಶಕ ಮತ್ತು ಪ್ರೊಡಕ್ಷನ್ ಹೌಸ್ ನ ಹೆಸರನ್ನು ಹೇಳಲು ಹಿಂಜರಿದರು. ಇದರಿಂದ ಕನ್ನಡದ ಅಭಿಮಾನಿಗಳು ಆಕ್ರೋಶಗೊಂಡಿದ್ದಂತೂ ನಿಜ. ಇದರಿಂದಾಗಿ ರಶ್ಮಿಕಾ ಅವರು ಕರ್ನಾಟಕಕ್ಕೆ ಮತ್ತು ಕನ್ನಡ ಭಾಷೆಗೆ ಮರಿಯಾದೆ ಗೌರವ ಕೊಡುತ್ತಿಲ್ಲ, ಆಕೆಗೆ ಕನ್ನಡದ ಬಗ್ಗೆ ಮರಿಯಾದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಅದರ ಬೆನ್ನಲ್ಲೇ ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಎಲ್ಲಾ ಕಡೆ ಈಗ ಇದೇ ವಿಷಯ ಚರ್ಚೆಯಾಗುತ್ತಿದೆ. ಇದನ್ನು ಓದಿ.. Cricket News: ವಿಶ್ವಕಪ್ ಗೆಲ್ಲೆಬೇಕು ಎಂದರೆ, ಅದೊಂದು ಕೆಲಸ ಮಾಡಬೇಡಿ ಎಂದ ರೋಹಿತ್ ಶರ್ಮ ಬಾಲ್ಯದ ಕೋಚ್: ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರಾ ರೋಹಿತ್??
ರಶ್ಮಿಕಾ ಅವರನ್ನು ಬ್ಯಾನ್ ಮಾಡಲಾಗಿದೆ, ಮುಂಬರುವ ಅವರ ಸಿನಿಮಾಗಳಿಗೆ ಇದರಿಂದ ಸಂಕಷ್ಟ ತಪ್ಪಿದ್ದಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಇದೆಲ್ಲದಕ್ಕೂ ಉತ್ತರ ಸಿಕ್ಕಿದೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾಮಾ ಹರೀಶ್ (Bhama Harish) ಅವರು ಈ ವಿಚಾರದ ಬಗ್ಗೆ ಮಾತನಾಡಿ, “ರಶ್ಮಿಕಾ ಅವರನ್ನು ಬ್ಯಾನ್ ಮಾಡುವ ಅಧಿಕಾರ ನಮಗೆ ಇಲ್ಲ. ರಶ್ಮಿಕಾ ಅವರು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು, ಅವರ ಬಗ್ಗೆ ನಮ್ಮ ಮಂಡಳಿಗೆ ಯಾವುದೇ ದೂರು ಬಂದಿಲ್ಲ. ರಶ್ಮಿಕಾ ಅವರನ್ನು ಬ್ಯಾನ್ ಮಾಡೋದಿಲ್ಲ..” ಎಂದಿದ್ದಾರೆ ಭಾಮಾ ಹರೀಶ್. ಈ ಮೂಲಕ ಬ್ಯಾನ್ ವಿಷಯಕ್ಕೆ ಕ್ಲಾರಿಟಿ ನೀಡಿದ್ದಾರೆ. ಇದನ್ನು ಓದಿ.. Darshan: ಒಂದು ಕಡೆ ಮಾಧ್ಯಮದವರ ಬ್ಯಾನ್, ಮತ್ತೊಂದು ಕಡೆ ಕ್ರಾಂತಿ ಸಿನಿಮಾ. ಇದೆಲ್ಲದರ ನಡುವೆ ನಿವೃತ್ತಿ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತೇ??