Darshan: ಒಂದು ಕಡೆ ಮಾಧ್ಯಮದವರ ಬ್ಯಾನ್, ಮತ್ತೊಂದು ಕಡೆ ಕ್ರಾಂತಿ ಸಿನಿಮಾ. ಇದೆಲ್ಲದರ ನಡುವೆ ನಿವೃತ್ತಿ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತೇ??
Darshan: ಒಂದು ಕಡೆ ಮಾಧ್ಯಮದವರ ಬ್ಯಾನ್, ಮತ್ತೊಂದು ಕಡೆ ಕ್ರಾಂತಿ ಸಿನಿಮಾ. ಇದೆಲ್ಲದರ ನಡುವೆ ನಿವೃತ್ತಿ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತೇ??
Darshan: ಡಿಬಾಸ್ ದರ್ಶನ್ (Dboss Darshan) ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ, ಮೆಜೆಸ್ಟಿಕ್ (Majestic) ಸಿನಿಮಾ ಇಂದ ನಾಯಕನಾದ ದರ್ಶನ್ ಅವರು, ಇಂದು ಕ್ರಾಂತಿ (Kranthi) ಸಿನಿಮಾವರೆಗು ಬೆಳೆದಿದ್ದಾರೆ. ದರ್ಶನ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ಕಳೆದಿವೆ. ಈ ಸಮಯದಲ್ಲಿ ದರ್ಶನ್ ಅವರ ಕ್ರಾಂತಿ ಸಿನಿಮಾ ತೆರೆಕಾಣಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಈ ಸಿನಿಮಾ ನವೆಂಬರ್ 1ಕ್ಕೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತೆರೆಕಾಣಬೇಕಿತ್ತು, ಆದರೆ ಚಿತ್ರೀಕರಣ ಲೇಟ್ ಅದ ಕಾರಣ ಮುಂದಿನ ವರ್ಷ ಜನವರಿ 26ರಂದು ಕ್ರಾಂತಿ ಸಿನಿಮಾ ಬಿಡುಗಡೆ ಆಗಲಿದೆ.
ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿರುವುದರಿಂದ ಕ್ರಾಂತಿ ಸಿನಿಮಾ ಪ್ರೊಮೋಷನ್ ನಡೆಯುತ್ತಿರುವುದು, ಯೂಟ್ಯೂಟ್ ಚಾನೆಲ್ ಗಳ ಮೂಲಕ ಹಾಗೆಯೇ ಅಭಿಮಾನಿಗಳ ಮೂಲಕ. ದರ್ಶನ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ತುಂಬಿದ ಕಾರಣ ವಿಶೇಷವಾದ ಸಂದರ್ಶನ ಒಂದನ್ನು ಮಾಡಲಾಯಿತು. ಅದರಲ್ಲಿ ದರ್ಶನ್ ಅವರಿಗೆ ಆಸಕ್ತಿಕರ ಪ್ರಶ್ನೆಗಳನ್ನು ಕೇಳಲಾಯಿತು, ಅದಕ್ಕೆ ದರ್ಶನ್ ಅವರು ಬಹಳ ಉತ್ತರ ನೀಡಿದ್ದಾರೆ, ನಟನಾಗಬೇಕು ಅಂತ ಮೊದಲೇ ನಿರ್ಧಾರ ಮಾಡಿದ್ರಾ ಎಂದು ಕೇಳಿದ್ದಕ್ಕೆ, ತಮ್ಮ ತಂದೆ ತೀರಿಕೊಂಡ ನಟನಾಗಬೇಕು ಎಂದು ನಿರ್ಧಾರ ಮಾಡಿದೆ ಎಂದಿದ್ದಾರೆ ಡಿಬಾಸ್. ತಂದೆಯವರು ತೀರಿಕೊಂಡಾಗ, ಮನೆಮುಂದೆ ಬಂದ ಬಂದಿದ್ದ ಜನರನ್ನು ನೋಡಿ.. ಇದನ್ನು ಓದಿ.. Kannada News: ನಿಮ್ಮ ಬಳಿ ಪಾನ್ ಕಾರ್ಡ್ ಇದೆಯಾ?? ಹಾಗಿದ್ದರೆ ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಪ್ರಮುಖ ಆದೇಶ ಏನು ಗೊತ್ತೇ??
ತಾವು ಸತ್ತಾಗಲು ಇದೇ ರೀತಿ ಜನರು ಬರಬೇಕು ಎಂದುಕೊಂಡರಂತೆ ಡಿಬಾಸ್. ಇನ್ನು ಸಿನಿಮಾ ರಂಗದಿಂದ ನಿವೃತ್ತಿ ಯಾವಾಗ ತೆಗೆದುಕೊಳ್ಳುತ್ತೀರಾ ಎನ್ನುವ ಪ್ರಶ್ನೆಯನ್ನು ಸಹ ಕೇಳಿದ್ದು, ಅದಕ್ಕೆ ಡಿಬಾಸ್ ಅವರು.. “ಅದರ ಬಗ್ಗೆ ನಾನು ಯೋಚನೆಯನ್ನೇ ಮಾಡಿಲ್ಲ. ನಾನು ಸಾಯುವ ದಿನ ಕೂಡ ನನ್ನ ಮುಖದ ಮೇಲೆ ಬಣ್ಣ ಇರಬೇಕು ಎಂದು ಬಯಸುತ್ತೇನೆ.. ಮುಖದ ಮೇಲೆ ಬಣ್ಣ ಇರುವಾಗಲೇ ನಾನು ಕೊನೆಯುಸಿರೆಳೆಯಬೇಕು..ಇಲ್ಲಿಯವರೆಗು ಬಹಳ ಕಷ್ಟಪಟ್ಟು ಬಂದಿದ್ದೇನೆ. ಬಿಟ್ಟುಕೊಡುವ ಮಾತೇ ಇಲ್ಲ..” ಎಂದಿದ್ದಾರೆ ಡಿಬಾಸ್. ದರ್ಶನ್ ಅವರ ಈ ಮಾತುಗಳನ್ನು ಕೇಳಿ ಅಭಿಮಾನಿಗಳು ನಿಜಕ್ಕೂ ಭಾವುಕರಾಗಿದ್ದಾರೆ. ಇದನ್ನು ಓದಿ.. Cricket News: ವಿಶ್ವಕಪ್ ಗೆಲ್ಲೆಬೇಕು ಎಂದರೆ, ಅದೊಂದು ಕೆಲಸ ಮಾಡಬೇಡಿ ಎಂದ ರೋಹಿತ್ ಶರ್ಮ ಬಾಲ್ಯದ ಕೋಚ್: ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರಾ ರೋಹಿತ್??