Cricket News: ವಿಶ್ವಕಪ್ ಗೆಲ್ಲೆಬೇಕು ಎಂದರೆ, ಅದೊಂದು ಕೆಲಸ ಮಾಡಬೇಡಿ ಎಂದ ರೋಹಿತ್ ಶರ್ಮ ಬಾಲ್ಯದ ಕೋಚ್: ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರಾ ರೋಹಿತ್??
Cricket News: ವಿಶ್ವಕಪ್ ಗೆಲ್ಲೆಬೇಕು ಎಂದರೆ, ಅದೊಂದು ಕೆಲಸ ಮಾಡಬೇಡಿ ಎಂದ ರೋಹಿತ್ ಶರ್ಮ ಬಾಲ್ಯದ ಕೋಚ್: ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರಾ ರೋಹಿತ್??
Cricket News: ಭಾರತ ತಂಡವು (Team India) ಈಗ ಸತತ ವೈಫಲ್ಯ ಅನುಭವಿಸುತ್ತಿದೆ. 2007ರಲ್ಲಿ ಮೊದಲ ಸಾರಿ ಟಿ20 ವಿಶ್ವಕಪ್ (T20 World Cup) ನಡೆದಾಗ, ಭಾರತ ಗೆದ್ದಿತ್ತು, ಅದಾದ ಬಳಿಕ ಇನ್ನೊಮ್ಮೆ ವಿಶ್ವಕಪ್ ಗೆದ್ದಿಲ್ಲ, ಇನ್ನು ಐಸಿಸಿ ಟ್ರೋಫಿಯನ್ನು ಕೊನೆಯ ಸಾರಿ ಗೆದ್ದಿದ್ದು 2013ರಲ್ಲಿ, ಧೋನಿ (M S Dhoni) ಅವರ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಗೆದ್ದಿತ್ತು. ಅದಾದ ಬಳಿಕ ಸೋಲನ್ನೇ ನೊಡುತ್ತಿದೆ. ಇದರಿಂದ ವಿಶ್ವಕಪ್ ಗೆಲ್ಲಬೇಕು ಎಂದರೆ ಅದೊಂದು ಕೆಲಸವನ್ನು ಮಾಡಬೇಕು ಎಂದು ರೋಹಿತ್ ಶರ್ಮಾ ಅವರ ಕೋಚ್ ದಿನೇಶ್ ಲಾಡ್ (Dinesh Lad) ಅವರು ಸಲಹೆ ನೀಡಿದ್ದಾರೆ.
“ಹಿಂದಿನ 7-8 ತಿಂಗಳುಗಳಿಂದ ಟೀಮ್ ಇಂಡಿಯಾ (Team India) ಅಂತಾರಾಷ್ಟ್ರೀಯ ಮಟ್ಟದಲ್ಲಿ. ನಮ್ಮ ತಂಡ ವಿಶ್ವಕಪ್ ಗೆ ತಯಾರಿ ನಡೆಸಿದ್ದರೆ, ಒಂದು ತಂಡವನ್ನು ಮಾತ್ರ ಆಡಿಸಬೇಕಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಓಪನರ್ ಗಳಾಗಿ ಬಹಳಷ್ಟು ಆಟಗಾರರು ಆಡಿದರು, ಬೌಲಿಂಗ್ ನಲ್ಲಿ ಕೂಡ ಸಾಕಷ್ಟು ಆಟಗಾರರು ಆಡಿದರು, ನಮ್ಮ ತಂಡದಲ್ಲಿ ಸ್ಥಿರತೆ ಇರಲಿಲ್ಲ. ಇಲ್ಲಿ ಆಟಗಾರರ ಮೇಲಿನ ಒತ್ತಡ ಎಂದು ಹೇಳಲು ಆಗುವುದಿಲ್ಲ. ಆಟಗಾರರು ವಿಶ್ವದ ಹಲವೆಡೆ ಆಡುತ್ತಿದ್ದಾರೆ, ಅಲ್ಲಿ ಒತ್ತಡದ ಮಾತು ಬರುವುದೇ ಇಲ್ಲ. ಆಟಗಾರರು ಐಪಿಎಲ್ (IPL) ಆಡುವುದಾದರು ಯಾಕೆ ? ವಿಶ್ವಕಪ್ ನಲ್ಲಿ ಗೆಲ್ಲಬೇಕು ಎನ್ನುವುದಾದರೆ, ಐಪಿಎಲ್ ಆಡುವುದನ್ನು ಬಿಡಬೇಕು. ಇದನ್ನು ಓದಿ.. Cricket News: ಧೋನಿ 2007 T20 ವರ್ಲ್ಡ್ ಕಪ್ ಫೈನಲ್ ನಲ್ಲಿ ಜೋಗಿಂದರ್ ಶರ್ಮ ಗೆ ಬೌಲಿಂಗ್ ಮಾಡಲು ಕೊಟ್ಟಿದ್ದು ಯಾಕೆ ಅಂತೇ ಗೊತ್ತೇ?? ಇದೀಗ ಮಲಿಕ್ ನೀಡಿದ ಕಾರಣ ಏನು ಗೊತ್ತೇ??
ಇಲ್ಲಿ ವೃತ್ತಿಪರತೆ ಬಗ್ಗೆ ಮಾತನಾಡುವುದಾದರೆ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಂದ ತಪ್ಪಿಸಿಕೊಳ್ಳಬಾರದು. ದೇಶವನ್ನು ಪ್ರತಿನಿಧಿಸುವುದರಿಂದ ಲಾಭ ಪಡೆಯುತ್ತೀರಿ. ಇದು ಧರ್ಮಕ್ಕಾಗಿ ಮಾಡುವ ಕೆಲಸವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುವುದನ್ನು ತಪ್ಪಿಸಿಕೊಳ್ಳಬಾರದು. ನಾನು ಹೇಳುತ್ತಿರುವ ಮಾತಿನ ಅರ್ಥ, ಆಟಗಾರರು ಐಪಿಎಲ್ ಬಿಡಬೇಕು ಅಂತ ಅಲ್ಲ. ಅವುಗಳ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು, ಐಪಿಎಲ್ ನಲ್ಲಿ ಅವಕಾಶ ಸಿಕ್ಕಿರುವುದು, ರಾಷ್ಟ್ರ ತಂಡಕ್ಕಾಗಿ ಆಡಿದ ಕಾರಣಗಳಿಂದಲೇ. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಧನೆ ಮಾಡಿರುವುದರಿಂದಲೇ ಐಪಿಎಲ್ ಆಟಗಾರರಿಗೆ ವೇತನ ನಿಗದಿ ಆಗಬೇಕು..” ಎಂದು ದಿನೇಶ್ ಲಾಡ್ ಅವರು ತಿಳಿಸಿದ್ದಾರೆ. ಇದನ್ನು ಓದಿ.. Kannada News: ನಿಮ್ಮ ಬಳಿ ಪಾನ್ ಕಾರ್ಡ್ ಇದೆಯಾ?? ಹಾಗಿದ್ದರೆ ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಪ್ರಮುಖ ಆದೇಶ ಏನು ಗೊತ್ತೇ??