ಕರುನಾಡ ವಾಣಿ
ಇದು ನಿಮ್ಮ ಧ್ವನಿ

Big News: ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಕೊರಗಜ್ಜ ದೇವನ ಸಿನಿಮಾ ಮಾಡಲು ನಿರ್ಧಾರ. ಸಿನಿಮಾ ಮಾಡುತ್ತಿರುವುದು ಯಾರು ಗೊತ್ತೆ?

92

Get real time updates directly on you device, subscribe now.

Big News: ಕಾಂತಾರ (Kantara) ಸಿನಿಮಾ ನಮ್ಮ ನಾಡಿನ ದೈವದ ಕಥೆ ಹೊಂದಿರುವ ಸಿನಿಮಾ, ಕರಾವಳಿ ಭಾಗದ ಪಂಜುರ್ಲಿ ಮತ್ತು ಗುಳಿಗ ದೇವರ ಬಗ್ಗೆ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾ ನೋಡಿದ ಸಿನಿಪ್ರಿಯರು, ಕೊನೆಯ 20 ನಿಮಿಷಗಳ ಕಾಲ ಬರುವ ದೈವದ ದೃಶ್ಯಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಈ ಎರಡು ದೈವಗಳ ಬಗ್ಗೆ ಇಡೀ ದೇಶವೇ ಮಾತನಾಡಿಕೊಳ್ಳುತ್ತಿದೆ. ಕಾಂತಾರ ಸಿನಿಮಾ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿರುವಾಗ, ಇದೀಗ ಕರಾವಳಿ ಪ್ರದೇಶದ ಮತ್ತೊಂದು ಪವರ್ ಫುಲ್ ದೇವರಾದ ಕೊರಗಜ್ಜನ ಬಗ್ಗೆ ಸಿನಿಮಾ ಮಾಡಲು ಮತ್ತೊಂದು ತಂಡ ರೆಡಿ ಆಗಿದೆ..

ಸುಧೀರ್ ಅತ್ತಾವರ್ (Sudhir Attavar) ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಕರಾವಳಿ ಭಾಗದ ಕೊರಗಜ್ಜ ಸಾಕಷ್ಟು ಪವಾಡಗಳನ್ನು ಮಾಡಿರುವ ದೈವ, ಭಕ್ತರು ಇವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಂಡರೆ, ಅದನ್ನು ನೆರವೇರಿಸುತ್ತಾರೆ, ಅಂತಹ ಅನೇಕ ಪವಾಡಗಳು ಜನರ ಕಣ್ಣೆದುರೇ ನಡೆದಿದೆ ಎಂದು ಮಾಹಿತಿ ಇದೆ. ಈ ಸಿನಿಮಾದಲ್ಲಿ ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಟ ಕಬೀರ್ ಬೇಡಿ (Kabir Bedi) ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ಕನ್ನಡದ ಖ್ಯಾತ ನಟಿಯರಾರ ಶ್ರುತಿ (Shruti) ಮತ್ತು ಭವ್ಯ (Bhavya) ಅವರು ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದೊಂದು ಹೊಸ ಪ್ರಯತ್ನ ನಮ್ಮ ಚಂದನವನದಲ್ಲಿ ಶುರುವಾಗಿದೆ. ಈ ಸಿನಿಮಾಗೆ ಕರಿ ಹೈದ..ಕರಿ ಅಜ್ಜ ಎಂದು ಟೈಟಲ್ ಇಡಲಾಗಿದೆ. ಇದನ್ನು ಓದಿ.. Cricket News: ವಿರಾಟ್ ಕೊಹ್ಲಿ ರವರ ಭವಿಷ್ಯವನ್ನೇ ಮುಗಿಸಲು ಯತ್ನಿಸಿದ್ದು ಯಾರಂತೆ ಗೊತ್ತೇ? ಪಾಕ್ ನ ಡ್ಯಾನಿಷ್ ಕಾನೇರಿಯ ಹೆಸರಿಸಿದ್ದು ಯಾರನ್ನು ಗೊತ್ತೇ??

ಕೊರಗಜ್ಜ ಅವರ ಬಗ್ಗೆ ಹೇಳುವುದಾದರೆ, ಇವರು 12ನೇ ಶತಮಾನದವರು, ಓಡಿ ಮತ್ತು ಅಚ್ಚು ಮೈರದಿ ದಂಪತಿಯ ಮಗ ತನಿಯ ಕೊರಗ, ಇವರು ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ನಂತರ ಇವರನ್ನು ಸಾಕಿ ಬೆಳೆಸುವುದು ಬೈದರೆ ಜನಾಂಗದ ಬೈದರೆ ಮೈರಕ್ಕ ಅವರು. ಇವರ ಕುಲಕಸುಬು ಸೇಂದಿ ಮಾಡುವುದಾಗಿತ್ತು, ಒಂದು ಸಾರಿ ಸೇಂದಿ ಮಾಡುವುದಕ್ಕೆ ಬಣ್ಣ ತರಲು ಕೊರಗ ಅವರು ಹೋಗುವಾಗ, ಅರ್ಧ ದಾರಿಯಲ್ಲೇ, ಯಾರ ಕಣ್ಣಿಗೂ ಸಿಗದ ಹಾಗೆ ಕಣ್ಮರೆಯಾಗುತ್ತಾರೆ ಎಂದು ಹೇಳಲಾಗಿದೆ. ಆಗಿನಿಂದ ಕೊರಗಜ್ಜನ ಪವಾಡಗಳು ಶುರುವಾಗಿದ್ದು, ಅವರನ್ನು ದೈವವೆಂದು ಪರಿಗಣಿಸಿ, ಗುಡಿ ಕಟ್ಟಿ ಪೂಜೆ ಮಾಡಲಾಗುತ್ತಿದೆ. ಇವರ ಪವಾಡಗಳ ಬಗ್ಗೆ ಈ ಸಿನಿಮಾ ಮೂಲಕ ತೋರಿಸಲಾಗುತ್ತದೆ. ಇದನ್ನು ಓದಿ..FIFA World Cup 2022: ರಂಗೇರಿದ ಫುಟ್ ಬಾಲ್ ವಿಶ್ವಕಪ್, ಕೇವಲ ಒಂದು ವಿಶ್ವಕಪ್ ನಿಂದ FIFA ಗಳಿಸುವ ಆದಾಯ ಅದೆಷ್ಟು ಕೋಟಿ ಗೊತ್ತೇ?

Get real time updates directly on you device, subscribe now.