Cricket News: ವಿರಾಟ್ ಇಲ್ಲದ ಟೀಮ್ ನಲ್ಲಿ ಶತಕ ಗಳಿಸಿದ ಸೂರ್ಯ ಕುಮಾರ್ ಯಾದವ್, ಪಂದ್ಯ ಮುಗಿದ ನಂತರ ವಿರಾಟ್ ಬಗ್ಗೆ ಹೇಳಿದ್ದೇನು ಗೊತ್ತೇ?
Cricket News: ವಿರಾಟ್ ಇಲ್ಲದ ಟೀಮ್ ನಲ್ಲಿ ಶತಕ ಗಳಿಸಿದ ಸೂರ್ಯ ಕುಮಾರ್ ಯಾದವ್, ಪಂದ್ಯ ಮುಗಿದ ನಂತರ ವಿರಾಟ್ ಬಗ್ಗೆ ಹೇಳಿದ್ದೇನು ಗೊತ್ತೇ?
Cricket News: ಭಾರತ ತಂಡದಲ್ಲಿ ಅತ್ಯಂತ ಶ್ರೇಷ್ಠ ಫಾರ್ಮ್ ನಲ್ಲಿರುವ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಅವರು. ಐಸಿಸಿ (ICC) ಲಿಸ್ಟ್ ನಲ್ಲಿ ಟಾಪ್ 1 ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಅವರು, ನಿನ್ನೆ ನಡೆದ ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zealand) ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 51 ಎಸೆತಗಳಲ್ಲಿ 111 ರನ್ಸ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಕ್ರೀಸ್ ಗೆ ಬಂದಾಗ , ಭಾರತ ತಂಡ 36 ರನ್ಸ್ ಗಳಿಸಿ, 1 ವಿಕೆಟ್ ಕಳೆದುಕೊಂಡಿತ್ತು.
3ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಸೂರ್ಯಕುಮಾರ್ ಯಾದವ್ ಅವರು ಬಿರುಸಿನ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 191 ರನ್ಸ್ ಗಳಿಸುವ ಹಾಗೆ ಮಾಡಿದರು, ಮೊದಲ 50 ರನ್ಸ್ ಗಳಿಸಲು 32 ಎಸೆತಗಳನ್ನು ತೆಗೆದುಕೊಂಡ ಸೂರ್ಯ ಅವರು, ಇನ್ನು 12 ಎಸೆತಗಳಲ್ಲಿ ಶತಕ ಸಿಡಿಸಿ, 111ರನ್ಸ್ ಗಳಿಸಿದರು ಸೂರ್ಯಕುಮಾರ್ ಯಾದವ್. ಇವರ ಬ್ಯಾಟಿಂಗ್ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿತ್ತು. ಇವರ ಆಟದ ವೈಖರಿಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಂದ್ಯ ಮುಗಿದ ಬಳಿಕ, ಸೂರ್ಯಕುಮಾರ್ ಯಾದವ್ ಅವರು, ಮಾತನಾಡಿದ್ದು, ವಿರಾಟ್ ಕೊಹ್ಲಿ (Virat Kohli) ಅವರ ಬಗ್ಗೆ ಕೆಲವು ಮಾತುಗಳನ್ನಾಡಿದ್ದಾರೆ. ಇದನ್ನು ಓದಿ.. FIFA World Cup 2022: ರಂಗೇರಿದ ಫುಟ್ ಬಾಲ್ ವಿಶ್ವಕಪ್, ಕೇವಲ ಒಂದು ವಿಶ್ವಕಪ್ ನಿಂದ FIFA ಗಳಿಸುವ ಆದಾಯ ಅದೆಷ್ಟು ಕೋಟಿ ಗೊತ್ತೇ?
“ಹಿಂದಿನ ಕೆಲವು ಪಂದ್ಯಗಳಿಂದ ನಾನು ಅವರೊಡನೆ ಜೊತೆಯಾಟವಾಡಿದ್ದೇನೆ. ನಮ್ಮಿಬ್ಬರ ಪಾರ್ಟ್ನರ್ಶಿಪ್ ಚೆನ್ನಾಗಿದೆ. ಅವರೊಡನೆ ಆಡುವುದು ನನಗೆ ಸಂತೋಷ ಕೊಡುತ್ತುದೆ. ವಿರಾಟ್ ಅವರ ಜೊತೆಗೆ ಬ್ಯಾಟಿಂಗ್ ಮಾಡುವಾಗ, ಒಂದು ವಿಷಯವನ್ನು ತಿಳಿದುಕೊಂಡಿರಲೇಬೇಕು, ಅವರು ತುಂಬಾ ಫಿಟ್. ವಿಕೆಟ್ ಗಳ ನಡುವೆ ರನ್ ಗಾಗಿ ಓಡುವಾಗ, ವಿರಾಟ್ ಅವರ ಸ್ಪೀಡ್ ಗೆ ಮ್ಯಾಚ್ ಮಾಡಿ ಓಡುವುದು ಬಹಳ ಕಷ್ಟ..” ಎಂದು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್. ಇದನ್ನು ಓದಿ..Big News: ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಕೊರಗಜ್ಜ ದೇವನ ಸಿನಿಮಾ ಮಾಡಲು ನಿರ್ಧಾರ. ಸಿನಿಮಾ ಮಾಡುತ್ತಿರುವುದು ಯಾರು ಗೊತ್ತೆ?