Personal Loan: ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕಾ? ಹಾಗಿದ್ದರೆ ಈ ಟಾಪ್ 5 ಬ್ಯಾಂಕ್ ಗಳಲ್ಲಿ ನೀವು ಸರಿ ಎಂದರೆ ಸಾಕು ಹುಡುಕಿಕೊಂಡು ಬಂದು ಹಣ ನೀಡುತ್ತಾರೆ.

Personal Loan: ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕಾ? ಹಾಗಿದ್ದರೆ ಈ ಟಾಪ್ 5 ಬ್ಯಾಂಕ್ ಗಳಲ್ಲಿ ನೀವು ಸರಿ ಎಂದರೆ ಸಾಕು ಹುಡುಕಿಕೊಂಡು ಬಂದು ಹಣ ನೀಡುತ್ತಾರೆ.

Personal Loan: ಜೀವನ ಯಾವಾಗಲೂ ಒಂದೇ ರೀತಿ ಇರುವುದಿಲ್ಲ, ಕೆಲವೊಮ್ಮೆ ನಮಗೆ ಅರಿವಿಲ್ಲದೆ ಬರುವ ಪರಿಸ್ಥಿತಿಗಳಿಂದ ನಮಗೆ ಹಣದ ಅವಶ್ಯಕತೆ ಹೆಚ್ಚಾಗಿ, ಆ ಸಮಯದಲ್ಲಿ ನಮ್ಮ ಬಳಿ ಹಣ ಇಲ್ಲದೆ ಇದ್ದಾಗ, ಸಾಲ ಮಾಡುವುದನ್ನು ಬಿಟ್ಟು ಇನ್ಯಾವುದೇ ಬೇರೆ ಮಾರ್ಗ ಇರುವುದಿಲ್ಲ. ಹಾಗಾದಾಗ ಜನರು ಕ್ರೆಡಿಟ್ ಕಾರ್ಡ್ (Credit Card) ಮೂಲಕ ಸಾಲ ಪಡೆಯುತ್ತಾರೆ ಅಥವಾ ಕ್ರೆಡಿಟ್ ಕಾರ್ಡ್ ಮೇಲೆ ಸಾಲ ಪಡೆದು ನಂತರ ಕಟ್ಟಲಾಗದೆ ಪರದಾಡುತ್ತಿದ್ದಾರೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಗಿಂತ, ಪರ್ಸನಲ್ ಲೋನ್ (Personal Loan) ಪಡೆಯುವುದು ಒಳ್ಳೆಯದು ಎನ್ನುತ್ತಾರೆ ತಜ್ಜರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಬ್ಯಾಂಕ್ ಗಳು ಕೂಡ ಸಾಲದ ಬಡ್ಡಿಯನ್ನು ಹೆಚ್ಚು ಮಾಡಿದೆ, ಎಸ್.ಬಿ.ಐ (SBI) ಈಗ ಸಾಲದ ಮೇಲಿರುವ ಕನಿಷ್ಠ ಬಡ್ಡಿದರವನ್ನು, ಎಂ.ಸಿ.ಎಲ್.ಆರ್ ನಲ್ಲಿ 10 ರಿಂದ 15 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಿದೆ. ಇದರಿಂದಾಗಿ ನೀವು ವೈಯಕ್ತಿಕ ಸಾಲ ಪಡೆಯುವ ಮೊದಲು, ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರ ಇದೆ ಎಂದು ಮೊದಲು ಪರಿಶೀಲಿಸಬೇಕು, ಅವುಗಳ ಬಗ್ಗೆ ಇಂದು ನಿಮಗೆ ಮಾಹಿತಿ ನೀಡುತ್ತೇವೆ..

*ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) :- ಈ ಬ್ಯಾಂಕ್ ನಲ್ಲಿ 5 ಲಕ್ಷ ರೂಪಾಯಿಯ ಸಾಲ, ಐದು ವರ್ಷಗಳಲ್ಲಿ ಪಾವತಿ ಮಾಡಬಹುದು, ಈ ಸಾಲಕ್ಕೆ 8.9% ಬಡ್ಡಿ ವಿಧಿಸುತ್ತಾರೆ. ಐದು ವರ್ಷಗಳ ಕಾಲ ಕಟ್ಟಬೇಕಾಗಿರುವ ಈ ಸಾಲಕ್ಕೆ, ತಿಂಗಳ ಇಎಂಐ ₹10,355 ರೂಪಾಯಿಗಳಾಗಿದೆ.
*ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) :- ಈ ಬ್ಯಾಂಕ್ ನಲ್ಲಿ 5 ಲಕ್ಷ ರೂಪಾಯಿಯ ಸಾಲ, ಐದು ವರ್ಷಗಳಲ್ಲಿ ಪಾವತಿ ಮಾಡಬಹುದು. ಈ ಸಾಲಕ್ಕೆ 9.8% ಬಡ್ಡಿ ವಿಧಿಸುತ್ತಾರೆ. ಈ ಸಾಲಕ್ಕೆ ನೀವು ಪಾವತಿ ಮಾಡಬೇಕಾದ ಇಎಂಐ ₹10,574 ರೂಪಾಯಿ ಆಗಿದೆ.
*ಯೆಸ್ ಬ್ಯಾಬಿಕ್ (Yes Bank) :- ಈ ಬ್ಯಾಂಕ್ ನಲ್ಲಿ 5 ಲಕ್ಷ ರೂಪಾಯಿಯ ಸಾಲ, ಐದು ವರ್ಷಗಳಲ್ಲಿ ಮಾಡಬಹುದು ಎನ್ನುವ ಸಾಲಕ್ಕೆ, 10% ಬಡ್ಡಿ ವಿಧಿಸಲಾಗುತ್ತದೆ. ಈ ಸಾಲಕ್ಕೆ ತಿಂಗಳ ಇಎಂಐ ₹10,624 ರೂಪಾಯಿ ಆಗಿರುತ್ತದೆ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳ ಕಷ್ಟ ಕಾಲ ಮುಗಿದು, ಈ ರಾಶಿಗಳಿಗೆ ಶುಭ ಆರಂಭ: ಹಣದ ಹೊಳೆಯೇ ಹರಿಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

*ಬ್ಯಾಂಕ್ ಆಫ್ ಬರೋಡ (Bank of Baroda) :- ಈ ಬ್ಯಾಂಕ್ ನಲ್ಲಿ 5 ಲಕ್ಷ ರೂಪಾಯಿಯ ಸಾಲ, ಐದು ವರ್ಷಗಳಲ್ಲಿ ಪಾವತಿ ಮಾಡಬಹುದು. ಈ ಸಾಲಕ್ಕೆ 10.2% ಬಡ್ಡಿ ವಿಧಿಸುತ್ತಾರೆ. ಈ ಸಾಲಕ್ಕೆ ತಿಂಗಳ ಇಎಂಐ ₹10,673 ರೂಪಾಯಿ ಇರುತ್ತದೆ.
*ಕೋಟಕ್ ಮಹಿಂದ್ರ ಬ್ಯಾಂಕ್ (Kotak Mahindra Bank) :- ಈ ಬ್ಯಾಂಕ್ ನಲ್ಲಿ 5 ಲಕ್ಷ ರೂಪಾಯಿಯ ಸಾಲ, ಐದು ವರ್ಷಗಳಲ್ಲಿ ಪಾವತಿ ಮಾಡಬಹುದು. ಈ ಸಾಲಕ್ಕೆ 10.25% ಸಾಲ ವಿಧಿಸುತ್ತಾರೆ. ಈ ಸಾಲಕ್ಕೆ ತಿಂಗಳಿಗೆ ನೀವು ₹10,685 ರೂಪಾಯಿ ಇಎಂಐ ಪಾವತಿ ಮಾಡಬೇಕಾಗುತ್ತದೆ.
ಪರ್ಸನಲ್ ಲೋನ್ ಪಡೆಯುವಾಗ, ಒಬ್ಬರೇ ಪಡೆಯುವುದಕ್ಕಿಂತ ಜಂಟಿಯಾಗಿ ಲೋನ್ ಪಡೆಯುವುದು ಉತ್ತಮ ಎಂದು ಹೇಳಲಾಗುತ್ತದೆ. ಜಂಟಿಯಾಗಿ ಅರ್ಜಿ ಸಲ್ಲಿಸಿದಾಗ, ಸಾಲ ಸಿಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಇಬ್ಬರು ಇಎಂಐ ಕಟ್ಟಬೇಕಿರುವ ಕಾರಣ, ಬ್ಯಾಂಕ್ ನಲ್ಲಿ ಬೇಗ ಸಾಲ ಮಂಜೂರಾಗುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದು, ಸಹ ಅರ್ಜಿ ಹಾಕುವವರ ಸ್ಕೋರ್ ಚೆನ್ನಾಗಿದ್ದರೆ ನಿಮಗೆ ಸಾಲ ಸಿಗುತ್ತದೆ. ಇದನ್ನು ಓದಿ.. Cricket News: ಒಂದು ಕಡೆ ಆಯ್ಕೆ ಸಮಿತಿಗೆ ಕೊಕ್: ಮತ್ತೊಂದು ಕಡೆ ಭಾರತಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾದ ಬಿಸಿಸಿಐ. ಹೊರಹೋಗುತ್ತಿರುವುದು ಯಾರ್ಯಾರು ಗೊತ್ತೆ?