ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada Biggboss 9: ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ರೂಪೇಶ್ ರಾಜಣ್ಣ. ಭಾರಿ ಹಿನ್ನೆಡೆ.

3,998

Get real time updates directly on you device, subscribe now.

Kannada Biggboss 9: ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರೂಪೇಶ್ ರಾಜಣ್ಣ (Roopesh Rajanna) ಅವರು ಒಂದಲ್ಲ ಒಂದು ವಿಷಯಗಳಿಂದ ಮನೆಯವರ ಎದುರು ತಪ್ಪಿತಸ್ಥರಾಗುತ್ತಲೇ ಬಂದಿದ್ದಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರಿಂದ ಆಗುವ ತಪ್ಪುಗಳಿಗೆ ತಪ್ಪಾಗಿ ಕಾಣಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಅದೇ ರೀತಿ ರಿಪೀಟ್ ಆಗಿದೆ. ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್ ನಲ್ಲಿ ಮನೆಯ ಸ್ಪರ್ಧಿಗಳು ಕೆಂಪು ಮತ್ತು ಹಸಿರು ಎರಡು ಟೀಮ್ ಗಳಾಗಿದ್ದರು. ಅವರ ಗೊಂಬೆಗಳು ಮತ್ತು ಇನ್ನಿತರ ವಸ್ತುಗಳಿದ್ದವು. ಅವುಗಳನ್ನು ಕಾಪಾಡಿಕೊಳ್ಳಬೇಕಾದದ್ದು ಅವರ ಜವಾಬ್ದಾರಿ ಎಂದು ಬಿಗ್ ಬಾಸ್ ಆದೇಶ ನೀಡಿದ್ದರು.

ಆದರೆ ಬಿಗ್ ಬಾಸ್ ನೀಡಿದ ಆದೇಶಕ್ಕಿಂತ ಹೆಚ್ಚಾಗಿ ಮನೆಯ ಸದಸ್ಯರು ತಮ್ಮದೇ ಆದ ರೂಲ್ಸ್ ಗಳನ್ನು ಹಾಕಿಕೊಂಡು ಆಟವಾಡಲು ಶುರು ಮಾಡಿದರು. ಗೊಂಬೆಯನ್ನು ಯಾವಾಗ ಬೇಕೆಂದರೆ ಅವಾಗ ಕದಿಯಬಾರದು, ಯಾರು ಇಲ್ಲದಿದ್ದಾಗ ಕದಿಯಬೇಕು ಎಂದು ತಮ್ಮಷ್ಟಕ್ಕೆ ತಾವು ರೂಲ್ಸ್ ಮಾಡಿಕೊಂಡು, ನಂತರ ಯಾರು ಯಾವಾಗ ಬೇಕಾದರೂ ಕದಿಯಬಹುದು ಎಂದು ತಾವೇ ರೂಲ್ಸ್ ಮಾಡಿಕೊಂಡರು. ಆಗ ಹಸಿರು ತಂಡದ ರೂಪೇಶ್ ರಾಜಣ್ಣ ಅವರು ಕೆಂಪು ತಂಡದ ಗೊಂಬೆಗಳಿಗೆ ಕೈ ಹಾಕಿದರು, ಆಗ ಬೇರೆ ಸದಸ್ಯರು ಕೂಡ ಬಂದು, ಅಲ್ಲಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡರು. ಇದನ್ನು ಓದಿ.. IPL 2023 RCB: ಐಪಿಎಲ್ ಹರಾಜಿನಲ್ಲಿ ಆತನನ್ನು RCB ಖರೀದಿಸಿ ನಾಯಕ ಮಾಡಿದರೆ ಕಪ್ ನಮ್ಮದೇ ಎನ್ನುತ್ತಿದ್ದಾರೆ ಫ್ಯಾನ್ಸ್. ಯಾರು ಗೊತ್ತೇ ಆ ಖಡಕ್ ಆಟಗಾರ?

ಇದರಿಂದ ಅರುಣ್ ಸಾಗರ್ (Arun Sagar) ಮತ್ತು ದೀಪಿಕಾ ದಾಸ್ (Deepika Das) ಇಬ್ಬರು ಅಸಮಾಧಾನಗೊಂಡು, ಅವರು ಬೇಕಂತಲೇ ಹೀಗೆ ಸ್ಟುಪಿಡ್ ಆಗಿ ಮಾಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು, ರೂಪೇಶ್ ರಾಜಣ್ಣ ಅವರು ಯಾವಾಗ ಬೇಕದರು ಏನನ್ನಾದರೂ ತೆಗೆದು ಹಾಕಬಹುದು ಅಂತ ರೂಲ್ಸ್ ಇತ್ತು ಅಲ್ವಾ ಎಂದು ಕೇಳಿದರು, ಆಗ ಅಮೂಲ್ಯ (Amulya) ಹೌದು ಎಂದರು. ಕೆಂಪು ತಂಡದ ಬಳಿ ಆಟ ಮುಂದುವರೆಸಲು ಏನು ಇರಲಿಲ್ಲ. ಆಗ ಅರುಣ್ ಸಾಗರ್ ಅವರು ಗೊಂಬೆಗಳನ್ನು ವಾಪಸ್ ಕೊಟ್ಟುಬಿಡಿ ಎಂದು ಕೇಳಿದಾಗ, ಅಮೂಲ್ಯ ಅವರು ಕೊಡೋದಕ್ಕೆ ರೆಡಿ ಇದ್ರು ಕೂಡ, ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಒಪ್ಪಲಿಲ್ಲ. ಗಮ್ ಕೊಡಿ ಎಂದು ಕೆಂಪು ತಂಡದವರು ಕೇಳಿಕೊಂಡರು ಕೂಡ ಹಸಿರು ತಂಡದವರು ಕೊಡಲಿಲ್ಲ. ಈ ರೀತಿ ರೂಪೇಶ್ ರಾಜಣ್ಣ ಅವರು, ಏನೋ ಮಾಡಲು ಹೋಗಿ ಇನ್ನೇನೋ ಎಡವಟ್ಟು ಮಾಡಿಕೊಂಡು, ಆಟ ಸರಿಯಾಗಿ ಮುಂದುವರೆಯದ ಹಾಗೆ ಆಯಿತು. ಇದನ್ನು ಓದಿ.. IPL 2023 RCB: ಮತ್ತಷ್ಟು ಆಟಗಾರರನ್ನು ಹೊರದಬ್ಬಿದ ಆರ್ಸಿಬಿ: ಈ ಬಾರಿ ಹರಾಜಿಗೂ ಮುನ್ನ ಯಾರನ್ನು ಕೈ ಬಿಟ್ಟಿದೆ ಗೊತ್ತೇ??

Get real time updates directly on you device, subscribe now.