IPL 2023 RCB: ಐಪಿಎಲ್ ಹರಾಜಿನಲ್ಲಿ ಆತನನ್ನು RCB ಖರೀದಿಸಿ ನಾಯಕ ಮಾಡಿದರೆ ಕಪ್ ನಮ್ಮದೇ ಎನ್ನುತ್ತಿದ್ದಾರೆ ಫ್ಯಾನ್ಸ್. ಯಾರು ಗೊತ್ತೇ ಆ ಖಡಕ್ ಆಟಗಾರ?
IPL 2023 RCB: ಐಪಿಎಲ್ ಹರಾಜಿನಲ್ಲಿ ಆತನನ್ನು RCB ಖರೀದಿಸಿ ನಾಯಕ ಮಾಡಿದರೆ ಕಪ್ ನಮ್ಮದೇ ಎನ್ನುತ್ತಿದ್ದಾರೆ ಫ್ಯಾನ್ಸ್. ಯಾರು ಗೊತ್ತೇ ಆ ಖಡಕ್ ಆಟಗಾರ?
IPL 2023 IPL :- 2023ರ ಐಪಿಎಲ್ ಮಿನಿ ಆಕ್ಷನ್ (IPL Mini Auction) ಶುರುವಾಗಲು ಇನ್ನು ಒಂದು ತಿಂಗಳು ಬಾಕಿ ಇದೆ. ನಮ್ಮ ಆರ್ಸಿಬಿ ತಂಡ ಈ ಸಾರಿ ಐಪಿಎಲ್ ನಲ್ಲಿ ಕಪ್ ಗೆಲ್ಲಲೇಬೇಕು ಎನ್ನುವುದು ಅಭಿಮಾನಿಗಳ ಆಸೆ. ಹಾಗಾಗಿ ಮುಂದಿನ ಸೀಸನ್ ನಲ್ಲಿ ಆರ್ಸಿಬಿ (RCB) ತಂಡ ಬೆಸ್ಟ್ ಪ್ಲೇಯರ್ಸ್ ಗಳನ್ನು ಹೊಂದಿರಬೇಕು ಎನ್ನುವುದು ಎಲ್ಲರ ಆಸೆ ಆಗಿದೆ. ಇಂತಹ ಸಮಯದಲ್ಲಿ ಸ್ಟಾರ್ ಪ್ಲೇಯರ್ ಐಪಿಎಲ್ ಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅವರು ಮತ್ಯಾರು ಅಲ್ಲ, ಇಂಗ್ಲೆಂಡ್ ನ ಸ್ಫೋಟಕ ಬ್ಯಾಟ್ಸ್ಮನ್ ಬೆನ್ ಸ್ಟೋಕ್ಸ್ (Ben Stokes) ಈ ವರ್ಷ ಟಿ20 ವಿಶ್ವಕಪ್ ನಲ್ಲಿ ಅದ್ಭುತ ಬ್ಯಾಟಿಂಗ್ ಇಂದಾಗಿ ಒಳ್ಳೆಯ ಹೆಸರು ಪಡೆದಿದ್ದಾರೆ ಬೆನ್ ಸ್ಟೋಕ್ಸ್.
ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಟೀಮ್ ನ ಕ್ಯಾಪ್ಟನ್ ಆದಮೇಲೆ ಬೆನ್ ಸ್ಟೋಕ್ಸ್ ಅವರು 2022ರ ಐಪಿಎಲ್ ಇಂದ ದೂರವೆ ಉಳಿದಿದ್ದರು, ಇನ್ನು ಎರಡರಿಂದ ಮೂರು ವರ್ಷಗಳ ಕಾಲ ಇವರು ಐಪಿಎಲ್ ಕಡೆಗೆ ಬರುವುದಿಲ್ಲವೇನೋ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, 2023ರ ಐಪಿಎಲ್ ಮಿನಿ ಆಕ್ಷನ್ ಗೆ ಬೆನ್ ಸ್ಟೋಕ್ಸ್ ಅವರು ತಮ್ಮ ಹೆಸರು ನೀಡಿದ್ದಾರೆ. ಐಪಿಎಲ್ (IPL) ನಂತರ ಮಹತ್ವದ ಸೀರೀಸ್ ಇದ್ದರು ಕೂಡ ಐಪಿಎಲ್ ನಲ್ಲಿ ಆಡುವ ಆಸಕ್ತಿ ತೋರಿಸಿದ್ದಾರೆ, ಇವರು ಸೀಸನ್ ಮುಗಿಯುವವರೆಗು ಪೂರ್ತಿ ಇರುತ್ತಾರ ಇಲ್ಲವಾ ಎನ್ನುವ ಬಗ್ಗೆ ಪೂರ್ತಿ ಮಾಹಿತಿ ಇನ್ನು ಸಿಕ್ಕಿಲ್ಲ. ಒಂದು ವೇಳೆ ಇವರು ಸೀಸನ್ ಪೂರ್ತಿ ಇರುವುದಾದರೆ, ಇವರನ್ನು ಖರೀದಿ ಮಾಡುವ ತಂಡಕ್ಕೆ ಯಶಸ್ಸು ಸಿಗುವುದು ಖಂಡಿತ. ಇದನ್ನು ಓದಿ.. IPL 2023 RCB: ಮತ್ತಷ್ಟು ಆಟಗಾರರನ್ನು ಹೊರದಬ್ಬಿದ ಆರ್ಸಿಬಿ: ಈ ಬಾರಿ ಹರಾಜಿಗೂ ಮುನ್ನ ಯಾರನ್ನು ಕೈ ಬಿಟ್ಟಿದೆ ಗೊತ್ತೇ??
ಈಗ ನಮ್ಮ ಆರ್ಸಿಬಿ ತಂಡದ ಅಭಿಮಾನಿಗಳು ಕೂಡ ಇದೇ ಬೇಡಿಕೆ ಇಟ್ಟಿದ್ದಾರೆ. ಬೆನ್ ಸ್ಟೋಕ್ಸ್ ಅವರನ್ನು ಆರ್ಸಿಬಿ ತಂಡ ಖರೀದಿ ಮಾಡಬೇಕು ಎನ್ನುವುದು ಮಾತ್ರವಲ್ಲದೆ, ಅವರನ್ನೇ ಆರ್ಸಿಬಿ ಕ್ಯಾಪ್ಟನ್ ಮಾಡಬೇಕು, ಫಾಫ್ ಡು ಪ್ಲೆಸಿಸ್ (Faf du Plessis) ಅವರನ್ನು ಕ್ಯಾಪ್ಟನ್ ಸ್ಥಾನದಿಂದ ಕೆಲಗಿಳಿಸಬೇಕು ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ, ಇಬ್ಬರು ಪ್ರಬಲ ಬ್ಯಾಟ್ಸ್ಮನ್ ಗಳಾದ ವಿರಾಟ್ ಕೊಹ್ಲಿ (Virat Kohli) ಮತ್ತು ಬೆನ್ ಸ್ಟೋಕ್ಸ್ ಜೊತೆಯಾಗಿ ಆಡುವುದನ್ನು ನೋಡಲು ಆರ್ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತ ಬೆನ್ ಸ್ಟೋಕ್ಸ್ ಅವರನ್ನು ಈ ಹಿಂದೆ ಖರೀದಿ ಮಾಡಿದ್ದ ರಾಜಸ್ತಾನ್ ರಾಯಲ್ಸ್ (Rajastan Royals) ತಂಡ ಕೂಡ ಅವರನ್ನು ಮತ್ತೆ ಖರೀದಿ ಮಾಡಲು ಯೋಜನೆ ಹಾಕಿಕೊಂಡಿದೆ. ಆರ್ಸಿಬಿ ಅಭಿಮಾನಿಗಳ ಆಸೆ ಈಡೇರುತ್ತಾ? ಅಥವಾ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. T20 World Cup: ವಿಶ್ವಕಪ್ ನಲ್ಲಿ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಯಾರಿಗೆ ಸಿಗಬೇಕಿತ್ತು ಅಂತೇ ಗೊತ್ತೇ?? ರಿಕ್ಕಿ ಪಾಂಟಿಂಗ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??