ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada Astrology: ವೃಶ್ಚಿಕ ರಾಶಿ ಪ್ರವೇಶ ಮಾಡಿದ ಸೂರ್ಯ ದೇವ. ಇದರಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

Kannada Astrology: ವೃಶ್ಚಿಕ ರಾಶಿ ಪ್ರವೇಶ ಮಾಡಿದ ಸೂರ್ಯ ದೇವ. ಇದರಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

2,309

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನ (Surya) ಸ್ಥಾನ ಬದಲಾವಣೆಯನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯದೇವರು ಈ ತಿಂಗಳು, ನವೆಂಬರ್ 16ರಂದು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಇದರಿಂದ ವೃಶ್ಚಿಕ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯದೇವನ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳಿಗೆ ಉದ್ಯೋಗ, ಆರ್ಥಿಕ ಸ್ಥಿತಿ ಎಲ್ಲವೂ ಬದಲಾಗುತ್ತದೆ. ಪ್ರಸ್ತುತ ವೃಶ್ಚಿಕ ಸಂಕ್ರಾಂತಿಯು ನವೆಂಬರ್ 16ರಿಂದ ಡಿಸೆಂಬರ್ 15ರ ವರೆಗು ಇರುತ್ತದೆ. ಈ ಸಮಯದಲ್ಲಿ ದಾನಗಳಿಗೆ ವಿಶೇಷವಾದ ಮಹತ್ವವಿದೆ. ಈ ದಿನ ನೀವು ಸ್ನಾನ ಮಾಡಿ ನಂತರ ಮಾಡುವ ದಾನಕ್ಕೆ ಅನೇಕ ಪಟ್ಟು ಹೆಚ್ಚು ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.

Follow us on Google News

ನಮ್ಮ ಧರ್ಮದ ಹಿಂದೂ ಕ್ಯಾಲೆಂಡರ್ ನ ಅನುಸಾರ, ವೃಶ್ಚಿಕ ಸಂಕ್ರಾಂತಿ ಇರುವುದು ನವೆಂಬರ್ 16ರ ಬುಧವಾರ. ಈ ದಿನದ ಪವಿತ್ರ ಸಮಯ ಮಧ್ಯಾಹ್ನ 12:06 ರಿಂದ ಸಂಜೆ 5:27ರ ವರೆಗೆ. ಇನ್ನು ಈ ದಿನದ ಮಹಾಪುಣ್ಯಕಾಲ ಮಧ್ಯಾಹ್ನ 3:40ರಿಂದ ಸಂಜೆ 5:27ರ ವರೆಗು ಇರುತ್ತದೆ. ಈ ದಿನ ಸೂರ್ಯನ ಆರಾಧನೆ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಇದೇ ದಿನ, ಸರಿಯಾದ ಕ್ರಮದಲ್ಲಿ ಸೂರ್ಯನ ಪೂಜೆ ಮಾಡಿದರೆ, ಆ ವ್ಯಕ್ತಿಯ ಅದೃಷ್ಟ ಸೂರ್ಯನ ಹಾಗೆ ಪ್ರಜ್ವಲಿಸುತ್ತದೆ ಹಾಗೆಯೇ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ವೃಶ್ಚಿಕ ಸಂಕ್ರಾಂತಿಯ ದಿನ ನೀವು ಸೂರ್ಯೋದಯ ಆಗುವುದಕ್ಕಿಂತ ಮೊದಲು ಎದ್ದು, ಒಂದು ತಾಮ್ರದ ಪಾತ್ರೆಗೆ ಶುದ್ಧ ನೀರು ತೆಗೆದುಕೊಂಡು, ಅದಕ್ಕೆ ಕೆಂಪುಚಂದನ ಹಾಕಿ, ಸೂರ್ಯದೇವರಿಗೆ ಆರ್ಘ್ಯವನ್ನು ಅರ್ಪಣೆ ಮಾಡಿ. ಇದನ್ನು ಓದಿ.. Cricket News: ಇದು ಇದು ಆಗಬೇಕಾಗಿರುವುದು: ಸೋಲಿನ ನಂತರ ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ? ಏನಾಗುತ್ತಿದೆ ಗೊತ್ತೇ??

ವೃಶ್ಚಿಕ ಸಂಕ್ರಾಂತಿ ದಿನ ಅರಿಶಿನ ಮತ್ತು ಕುಂಕುಮ ಮಿಶ್ರಣ ಮಾಡಿದ ನೀರು ಬೆರೆಸಿ ಅದರನ್ನು ಸೂರ್ಯದೇವನಿಗೆ ಅರ್ಪಣೆ ಮಾಡುವುದರಿಂದ, ಸೂರ್ಯದೇವನಿಗೆ ಸಂತೋಷವಾಗುತ್ತದೆ. ಆರ್ಘ್ಯ ಅರ್ಪಿಸಿದ ನಂತರ ಸೂರ್ಯದೇವನಿಗೆ ತುಪ್ಪದ ದೀಪ ಹಚ್ಚಿ, ಆರತಿ ಮಾಡಿ, ಈ ವೇಳೆ ನೀವು ಕೆಂಪು ಚಂದನವನ್ನು ತುಪ್ಪದಲ್ಲಿ ಬೆರೆಸಿದ ಬಳಿಕ ಪೂಜೆ ಮಾಡಬೇಕು. ಈ ದಿನ ನೀವು ಪೂಜೆ ಮಾಡುವಾಗ ಸೂರ್ಯದೇವನಿಗೆ ಕೆಂಪು ಬಣ್ಣದ ಹೂವುಗಳನ್ನು ಅರ್ಪಣೆ ಮಾಡಿ, ಹಾಗೂ ಬೆಲ್ಲದ ಪಾಯಸ ಅರ್ಪಿಸಿ. ಜೊತೆಗೆ ಓಂ ದಿನಕರಾಯ ನಮಃ ಮಂತ್ರ ಅಥವಾ ಬೇರೆ ಮಂತ್ರ ಪಟನೆ ಮಾಡಿ. ಈ ಸಂಕ್ರಾಂತಿಯ ದಿವಸ ಸೂರ್ಯದೇವರಿಗೆ ಪೂಜೆ ಮಾಡುವುದರಿಂದ, ನಿಮ್ಮ ಸೂರ್ಯದೇವರ ದೋಷ ಮತ್ತು ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಓದಿ.. Cricket News: ಬಿಗ್ ನ್ಯೂಸ್: ಟಿ 20 ವಿಶ್ವಕಪ್ ಹೀನಾಯ ಸೋಲಿನ ಬಳಿಕ ಹೊರಬೀಳುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಇದು ತೆಗೆದುಕೊಳ್ಳಬೇಕಾದ ನಿರ್ಧಾರ.

ಈ ವೃಶ್ಚಿಕ ಸಂಕ್ರಾಂತಿಯ ದಿನ ಮತ್ತೊಂದು ಮಹತ್ವದ ಕೆಲಸವನ್ನು ಮಾಡಲಾಗುತ್ತದೆ. ಪುಣ್ಯ ಸ್ಥಳಗಳಿಗೆ ಹೋಗಿ, ಹಿರಿಯರಿಗೆ ಶ್ರಾದ್ಧ ಮಾಡಿ, ತರ್ಪಣ ಬಿಡುವ ಕಾರ್ಯವನ್ನು ಕೂಡ ಈ ದಿನ ಮಾಡಲಾಗುತ್ತದೆ, ಈ ಕಾರ್ಯಕ್ಕೆ ವಿಶೇಷ ಮಹತ್ವವಿದೆ. ಈ ದಿನ ಪುಣ್ಯಸ್ನಾನ ಮಾಡದೆ ಇರುವವರು ಏಳು ಜನ್ಮಕ್ಕೂ ಬಡವನಾಗಿ ಉತ್ತಮ ಆರೋಗ್ಯ ಇಲ್ಲದವನಾಗಿ ಇರುತ್ತಾನೆ ಎಂದು ನಂಬಲಾಗಿದೆ. ಜೊತೆಗೆ ಈ ದಿನ ಬ್ರಾಹ್ಮಣರಿಗೆ ಹಸು, ಅನ್ನ ಮತ್ತು ವಸ್ತ್ರಗಳನ್ನು ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಓದಿ.. Cricket News: ರಾಹುಲ್ ಬಿಟ್ಟರೆ ಅದ್ಭುತ ಆರಂಭಿಕನಾಗುವ ಆಟಗಾರ ಯಾರು ಗೊತ್ತೇ?? ಈತ ಬಂದರೆ ಮತ್ತೊಬ್ಬ ಸೆಹ್ವಾಗ್ ಬಂದ ಹಾಗೆ. ಯಾರು ಗೊತ್ತೇ ಆ ಟಾಪ್ ಬ್ಯಾಟ್ಸಮನ್??