Cricket: ಇಷ್ಟು ದಿವಸ ಮೌನವಾಗಿದ್ದ ಕೊಹ್ಲಿ ಆಸ್ಟ್ರೇಲಿಯಾ ಇಂದ ಮುಂಬೈ ಗೆ ಬಂದ ಮೇಲೆ ಹೇಳಿದ್ದೇನು ಗೊತ್ತೇ??
Cricket: ಇಷ್ಟು ದಿವಸ ಮೌನವಾಗಿದ್ದ ಕೊಹ್ಲಿ ಆಸ್ಟ್ರೇಲಿಯಾ ಇಂದ ಮುಂಬೈ ಗೆ ಬಂದ ಮೇಲೆ ಹೇಳಿದ್ದೇನು ಗೊತ್ತೇ??
Cricket: ಭಾರತ ತಂಡ (Team India) ಎಷ್ಟೇ ಪ್ರಯತ್ನ ಪಟ್ಟರು ಕೂಡ ಟಿ20 ವಿಶ್ವಕಪ್ ನಲ್ಲಿ (T20 World Cup) ಫೈನಲ್ಸ್ ವರೆಗು ಬಂದು ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಸೆಮಿಫೈನಲ್ಸ್ ನಲ್ಲಿ ಇಂಗ್ಲೆಂಡ್ ತಂಡದ ಎದುರು ಕಳಪೆ ಬೌಲಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ಎದುರು ಸೋತಿತು ಭಾರತ. ಈ ಸೋಲು ತಂಡಕ್ಕೆ ನಿರಾಶೆ ಉಂಟು ಮಾಡಿತು, ಅಭಿಮಾನಿಗಳು ಕೂಡ ಇದರಿಂದ ನಿರಾಸೆಗೊಂಡಿದ್ದು, ಈ ಸೋಲನ್ನು ಮರೆಯಲು ಅಭಿಮಾನಿಗಳಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಭಾರತದ ಬ್ಯಾಟಿಂಗ್ ಚೆನ್ನಾಗಿದ್ದರು ಕೂಡ ಬೌಲಿಂಗ್ ಚೆನ್ನಾಗಿರಲಿಲ್ಲ ಎನ್ನುವುದೇ ಎಲ್ಲರಲ್ಲೂ ಇರುವ ಬೇಸರ. ಎಲ್ಲವನ್ನು ಎದುರಿಸಿ ಮುಂದಕ್ಕೆ ಹೋಗಲೇಬೇಕಾಗುತ್ತದೆ.
ಅದೇ ರೀತಿ ಈಗ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ಪ್ರಯಾಣ ಮುಗಿದ ನಂತರ, ನ್ಯೂಜಿಲೆಂಡ್ (New Zealand) ಸೀರೀಸ್ ಗಾಗಿ ತಂಡದ ಅಭ್ಯಾಸ ನಡೆಯುತ್ತಿದ್ದು, ಈ ಸೀರೀಸ್ ಇಂದ ವಿಶ್ರಾಂತಿ ಪಡೆದಿರುವ ಆಟಗಾರರು ಶನಿವಾರ ಭಾರತಕ್ಕೆ ವಾಪಸ್ ಬಂದಿದ್ದಾರೆ. ಅದರಲ್ಲಿ ಒಬ್ಬರು ವಿರಾಟ್ ಕೊಹ್ಲಿ (Virat Kohli) ಅವರು, ಶನಿವಾರ ಕೋಹ್ಲಿ ಅವರು ಮುಂಬೈಗೆ ಬಂದಿಳಿದಿದ್ದು, ಇವರನ್ನು ನೋಡಿದ ತಕ್ಷಣವೇ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ಸುತ್ತುವರಿದರು, ಅವರ ಜೊತೆ ಮಾತನಾಡಲು, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳಿಗೆ ನಿರಾಸೆ ಮಾಡದ ಕೋಹ್ಲಿ ಅವರು ಎಲ್ಲರ ಜೊತೆಗೆ ಫೋಟೋ ತೆಗೆಸಿಕೊಂಡರು. ಇದನ್ನು ಓದಿ.. Cricket News: ಇದು ಇದು ಆಗಬೇಕಾಗಿರುವುದು: ಸೋಲಿನ ನಂತರ ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ? ಏನಾಗುತ್ತಿದೆ ಗೊತ್ತೇ??
ಜೊತೆಗೆ ಭಾರತ ತಂಡಕ್ಕೆ ಸಪೋರ್ಟ್ ಮಾಡಿದ್ದಕ್ಕೆ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ವಿಶ್ವಕಪ್ ನಲ್ಲಿ ಕೋಹ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದರು. 6 ಪಂದ್ಯಗಳಲ್ಲಿ 4 ಅರ್ಧಶತಕ ಗಳಿಸಿ, ಒಟ್ಟಾರೆಯಾಗಿ 296 ರನ್ಸ್ ಗಳಿಸಿದರು. ಸೆಮಿಫೈನಲ್ಸ್ ನಲ್ಲಿ ಕೂಡ ವಿರಾಟ್ ಕೊಹ್ಲಿ ಅವರು ಅರ್ಧಶತಕ ಗಳಿಸಿದರು, ಆದರೆ ಅವರ ಅತ್ಯುತ್ತಮ ಪ್ರದರ್ಶನದಿಂದ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಈಗ ವಿಶ್ವಕಪ್ ನಂತರ ಕೋಹ್ಲಿ ಅವರು ವಿಶ್ರಾಂತಿ ಪಡೆಯಲಿದ್ದು, ನ್ಯೂಜಿಲೆಂಡ್ ಸೀರೀಸ್ ನಂತರ ನಡೆಯುವ ಸೀರೀಸ್ ನಲ್ಲಿ ವಿರಾಟ್ ಕೊಹ್ಲಿ ಅವರು ಆಡಲಿದ್ದಾರೆ. ಕಿಂಗ್ ಕೋಹ್ಲಿ ಅವರು ಮತ್ತೆ ಫಾರ್ಮ್ ಗೆ ಬಂದಿರುವುದು ಅಭಿಮಾನಿಗಳಿಗೆ ಬಹಳ ಸಂತೋಷದ ವಿಚಾರ ಆಗಿದೆ. ಇದನ್ನು ಓದಿ.. Kannada Astrology: ವೃಶ್ಚಿಕ ರಾಶಿ ಪ್ರವೇಶ ಮಾಡಿದ ಸೂರ್ಯ ದೇವ. ಇದರಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??