Cricket News: ನಾಯಕನಾಗಿದ್ದಕ್ಕೆ ತಂಡದಲ್ಲಿ ಉಳಿದುಕೊಂಡಿದ್ದ ರೋಹಿತ್ ಶರ್ಮ ಗೆ ಇದೊಂದೇ ಸವಾಲು. ಯಾಮಾರಿದರೆ ತಂಡದಿಂದ ಔಟ್. ಏನಾಗುತ್ತಿದೆ ಗೊತ್ತೇ?
Cricket News: ನಾಯಕನಾಗಿದ್ದಕ್ಕೆ ತಂಡದಲ್ಲಿ ಉಳಿದುಕೊಂಡಿದ್ದ ರೋಹಿತ್ ಶರ್ಮ ಗೆ ಇದೊಂದೇ ಸವಾಲು. ಯಾಮಾರಿದರೆ ತಂಡದಿಂದ ಔಟ್. ಏನಾಗುತ್ತಿದೆ ಗೊತ್ತೇ?
Cricket News: ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ನಾಯಕನಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ರೋಹಿತ್ ಅವರು ಐಪಿಎಲ್ (IPL) ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕನಾಗಿ 5 ಬಾರಿ ಟ್ರೋಫಿ ಗೆದ್ದು, ಎಂಎಸ್ ಧೋನಿ ಅವರ ರೆಕಾರ್ಡ್ ಸಹ ಬ್ರೇಕ್ ಮಾಡಿದ್ದಾರೆ. ಹಾಗಾಗಿ ಕಳೆದ ವರ್ಷ ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ಸೋತ ನಂತರ, ರೋಹಿತ್ ಶರ್ಮಾ ಅವರು ನಾಯಕನಾದರು, ದ್ವಿಪಕ್ಷೀಯ ಸರಣಿಗಳಲ್ಲಿ ಕ್ಯಾಪ್ಟನ್ ಆಗಿ ದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ಅವರು ಇದುವರೆಗೂ ಯಾವ ಸರಣಿಯನ್ನು ಸೋತಿರಲಿಲ್ಲ.
ಆದರೆ ಏಷ್ಯಾಕಪ್ (Asia Cup) ಮತ್ತು ಟಿ20 ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿ ಗೆಲ್ಲಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ ಅವರು ಈಗ ಆಟಗಾರನಾಗಿ ಮತ್ತು ಕ್ಯಾಪ್ಟನ್ ಆಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಅರ್ಧಶತಕವನ್ನೇನೋ ಭಾರಿಸುತ್ತಿದ್ದಾರೆ, ಆದರೆ ರೋಹಿತ್ ಶರ್ಮಾ ಅವರ ಪರ್ಫಾರ್ಮೆನ್ಸ್ ನಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ಈ ಸಾಲಿನ ಟಿ20 ವಿಶ್ವಕಪ್ ನಲ್ಲಿ ಬಹುತೇಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದರು. ಪ್ರಸ್ತುತ ರೋಹಿತ್ ಶರ್ಮಾ ಅವರಿಗೆ ಫಾರ್ಮ್ ನ ಸಮಸ್ಯೆ ಒಂದು ಕಡೆಯಾದರೆ, ಮತ್ತೊಂದು ಸಮಸ್ಯೆ ಅವರನ್ನು ಕಾಡುತ್ತಿದೆ. ಅದು ರೋಹಿತ್ ಶರ್ಮಾ ಅವರ ಫಿಟ್ನೆಸ್ ಸಮಸ್ಯೆ ಆಗಿದೆ., ರೋಹಿತ್ ಶರ್ಮಾ ಅವರು ಈಗ ಮೊದಲಿನ ಹಾಗೆ ಫಿಟ್ ಆಗಿ ಕಾಣಿಸುತ್ತಿಲ್ಲ. ಇದನ್ನು ಓದಿ.. Cricket: ಇಷ್ಟು ದಿವಸ ಮೌನವಾಗಿದ್ದ ಕೊಹ್ಲಿ ಆಸ್ಟ್ರೇಲಿಯಾ ಇಂದ ಮುಂಬೈ ಗೆ ಬಂದ ಮೇಲೆ ಹೇಳಿದ್ದೇನು ಗೊತ್ತೇ??
ವಿಕೆಟ್ಸ್ ತೆಗೆಯಲು ಹೆಚ್ಚು ವೇಗವಾಗಿ ಓಡಲು ರೋಹಿತ್ ಶರ್ಮ ಅವರಿಂದ ಆಗುತ್ತಿಲ್ಲ. ಈಗ ಅವರು ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಗೆ ನಿಲ್ಲುತ್ತಿಲ್ಲ, ಬದಲಾಗಿ 30 ಯಾರ್ಡ್ ಸರ್ಕಲ್ ಒಳಗೆ ಫೀಲ್ಡಿಂಗ್ ಮಾಡುತ್ತಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮ. ಹೀಗಿರುವಾಗ ರೋಹಿತ್ ಅವರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ, ಅವರು ಫಿಟ್ ಆಗಿದ್ದರೆ ಮಾತ್ರ, ಇನ್ನು ಕೆಲವು ವರ್ಷಗಳ ಕಾಲ ಕ್ರಿಕೆಟ್ ಟೀಮ್ ನಲ್ಲಿರಲು ಸಾಧ್ಯವಾಗುತ್ತದೆ. ಈಗ ರೋಹಿತ್ ಶರ್ಮಾ ಅವರಿಗೆ 35 ವರ್ಷ, ಇದರ ಜೊತೆಗೆ ಫಿಟ್ನೆಸ್ ಕೂಡ ಚೆನ್ನಾಗಿರದೆ ಹೋದರೆ, ನಿಜಕ್ಕೂ ಅವರು ಹೆಚ್ಚು ಸಮಯ ತಂಡದಲ್ಲಿ ಇರಲು ಆಗುವುದಿಲ್ಲ. 2023ರಲ್ಲಿ ಏಕದಿನ ವಿಶ್ವಕಪ್ (One Day WorldCup) ಪಂದ್ಯಗಳು ಭಾರತದಲ್ಲೇ ನಡೆಯುವುದರಿಂದ ಅಷ್ಟರ ಒಳಗೆ ರೋಹಿತ್ ಶರ್ಮಾ ಅವರು ಫಿಟ್ ಆದರೆ ಉತ್ತಮ ಎನ್ನಲಾಗುತ್ತಿದೆ. ಇದನ್ನು ಓದಿ.. Cricket News: ಇದು ಇದು ಆಗಬೇಕಾಗಿರುವುದು: ಸೋಲಿನ ನಂತರ ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ? ಏನಾಗುತ್ತಿದೆ ಗೊತ್ತೇ??