Money Saving: ಈಗಿನ ಜಗತ್ತಿನಲ್ಲಿ ಹಣ ಉಳಿಸುವುದು ಬಾರಿ ಮುಖ್ಯ, ಹಣ ಉಳಿಸಬೇಕು ಎಂದರೆ ಈ ಟ್ರಿಕ್ಸ್ ಫಾಲೋ ಮಾಡಿ ಸಾಕು.

Money Saving: ಈಗಿನ ಜಗತ್ತಿನಲ್ಲಿ ಹಣ ಉಳಿಸುವುದು ಬಾರಿ ಮುಖ್ಯ, ಹಣ ಉಳಿಸಬೇಕು ಎಂದರೆ ಈ ಟ್ರಿಕ್ಸ್ ಫಾಲೋ ಮಾಡಿ ಸಾಕು.

Money Saving: ಮನುಷ್ಯರು ವಯಸ್ಸಲ್ಲಿ ಇದ್ದಾಗ ಯಾವುದರ ಬಗ್ಗೆಯೂ ಯೋಚನೆ ಮಾಡದೆ ಹಣವನ್ನು ನೀರಿನ ಹಾಗೆ ಖರ್ಚು ಮಾಡುತ್ತಾರೆ, ಆಗ ಹಣದ ಮಹತ್ವ ಅವರಿಗೆ ಗೊತ್ತಾಗುವುದಿಲ್ಲ. ಆದರೆ ವಯಸ್ಸಾದ ನಂತರ ಹೆಚ್ಚು ಹಣ ಇಲ್ಲದೆ ಇರುವಾಗ, ಒಂದೊಂದು ರೂಪಾಯಿಯನ್ನು ಯೋಚನೆ ಮಾಡಿ ಖರ್ಚು ಮಾಡಬೇಕಾಗುತ್ತದೆ. ಏಕೆಂದರೆ ವಯಸ್ಸಾದ ಮೇಲೆ ಹಣ ಮತ್ತು ಕೆಲಸ ಎರಡು ಇರುವುದಿಲ್ಲ. ಅಂತಹ ಸಮಯ ಬಂದಾಗ ಕೆಲವರಿಗೆ ಪೆನ್ಶನ್ ಬರಬಹುದು. ಆದರೆ ಎಲ್ಲರಿಗೂ ಪೆನ್ಶನ್ ಬರುವುದಿಲ್ಲ. ವಯಸ್ಸಾದ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬಾರದು ಎನ್ನುವುದಾದರೆ, ವಯಸ್ಸಿನಲ್ಲಿ ಇರುವಾಗಲೇ ನೀವು ಕೆಲವು ಟ್ರಿಕ್ಸ್ ಗಳನ್ನು ಫಾಲೋ ಮಾಡಿದರೆ ವಯಸ್ಸಾದ ನಂತರ ಏನು ತೊಂದರೆ ಆಗುವುದಿಲ್ಲ. ಆ ಐದು ಟ್ರಿಕ್ಸ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ನಿಮ್ಮ ಬಳಿ ಹಣವಿದ್ದು, ಏನನ್ನಾದರೂ ಕೊಂಡುಕೊಳ್ಳಲು ಇಷ್ಟವಿದ್ದರೆ ಮಾತ್ರ, ಯಾವುದೇ ವಸ್ತುವನ್ನು ಅಥವಾ ಏನನ್ನಾದರೂ ಕೊಂಡುಕೊಳ್ಳಿ. ಸಾಲ ಮಾಡಿ ಏನನ್ನು ಖರೀದಿಸಬೇಡಿ. ವಸ್ತುಗಳನ್ನು ಕೊಂಡೊಕೊಳ್ಳಲು ಮತ್ತೊಬ್ಬರಿಂದ ಹಣ ಪಡೆಯಬೇಡಿ.
*ನೀವು ವಯಸ್ಸಿನಲ್ಲಿದ್ದು, ಒಳ್ಳೆಯ ಸಂಬಳ ಬರುವಾಗ ಸಂಬಳದಲ್ಲಿ ಸ್ವಲ್ಪ ಭಾಗವನ್ನು ಉಳಿಸಲು ಕಲಿತುಕೊಳ್ಳಿ. ಇಂಡೆಕ್ಸ್ ಫಂಡ್ ಗಳು, ETF ಗಳ FDs/G-Secs ಹಾಗೂ SIP ಈ ಥರದ ವಿಚಾರಗಳಲ್ಲಿ ಹೂಡಿಕೆ ಮಾಡಿ. ಶೇರ್ ಗಳಲ್ಲಿ ಹೂಡಿಕೆ ಮಾಡುವುದು ಬಹಳ ಒಳ್ಳೆಯದು.
*ಯಾವುದೇ ಕಾರಣಕ್ಕೂ ಯಾರಿಂದಲೂ ಸಾಲ ಪಡೆದುಕೊಳ್ಳಬೇಡಿ. ಇದನ್ನು ತಪ್ಪದೇ ಪಾಲಿಸಿ. ಇದನ್ನು ಓದಿ.. Business: ಹೆಚ್ಚಿನ ರಿಸ್ಕ್ ಇಲ್ಲದೆ, ಮನೆಯಿಂದನೇ ಕನಿಷ್ಠ 70 ಸಾವಿರ ರೂಪಾಯಿ ಗಳಿಸಬೇಕು ಎಂದರೆ ಇರುವ ಏಕೈಕ ಉದ್ಯಮ ಯಾವುದು ಗೊತ್ತೇ??

*ಜೀವನದಲ್ಲಿ ಯಾವಾಗ ಯಾರಿಗೆ ಏನಾಗುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಿರೀಕ್ಷೆ ಮಾಡದೆಯೇ ಆರೋಗ್ಯದ ವಿಚಾರದಲ್ಲಿ ಅನಾಹುತ ಆಗಬಹುದು. ಹಾಗಾಗಿ ನಿಮಗೆ ಮತ್ತು ನಿಮ್ಮ ಕುಟುಂಬದ ಎಲ್ಲರಿಗೂ ಆರೋಗ್ಯ ವಿಮೆ ಮಾಡಿಸಿ, ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಆರೋಗ್ಯ ಸಮಸ್ಯೆ ಉಂಟಾದರು ಕೂಡ, ಉಳಿಸಿರುವ ಎಲ್ಲಾ ಹಣ ಖಾಲಿ ಆಗಬಹುದು, ಹಾಗಾಗಿ ಎಲ್ಲರಿಗೂ ಆರೋಗ್ಯ ವಿಮೆ ಮಾಡಿಸಿ.
*ನಿಮ್ಮನ್ನೇ ಅವಲಂಬಿಸಿ ಯಾರಾದರೂ ಇದ್ದರೆ, ನಿಮಗೆ ಏನಾದರೂ ಆದರೆ, ಅವರಿಗೆ ರಕ್ಷಣೆ ಇಲ್ಲದ ಹಾಗೆ ಆಗಬಾರದು, ನಿಮ್ಮನ್ನು ನಂಬಿರುವವರನ್ನು ನಿಮ್ಮ ನಂತರವೂ ನೀವು ನೋಡಿಕೊಳ್ಳಬೇಕು. ಇದಕ್ಕಾಗಿ ರಕ್ಷಣೆ ನೀಡುವ ಟರ್ಮ್ ಪಾಲಿಸಿಯನ್ನು ಖರೀದಿ ಮಾಡಿ. ಒಂದು ವೇಳೆ ಕೆಟ್ಟದ್ದು ಸಂಭವಿಸಿದರೆ, ಬ್ಯಾಂಕ್ ಆಫ್ ಇಂಡಿಯಾ ಅವರಿಗೆ ಸಹಾಯ ಮಾಡುತ್ತದೆ. ಇದನ್ನು ಓದಿ.. T20 World Cup: ಇದು ನಿಜಕ್ಕೂ ಒಳ್ಳೆಯದಲ್ಲ, ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಹರ್ಭಜನ್, ಹೇಳಿದ್ದೇನು ಗೊತ್ತೇ??