Business: ಹೆಚ್ಚಿನ ರಿಸ್ಕ್ ಇಲ್ಲದೆ, ಮನೆಯಿಂದನೇ ಕನಿಷ್ಠ 70 ಸಾವಿರ ರೂಪಾಯಿ ಗಳಿಸಬೇಕು ಎಂದರೆ ಇರುವ ಏಕೈಕ ಉದ್ಯಮ ಯಾವುದು ಗೊತ್ತೇ??
Business: ಹೆಚ್ಚಿನ ರಿಸ್ಕ್ ಇಲ್ಲದೆ, ಮನೆಯಿಂದನೇ ಕನಿಷ್ಠ 70 ಸಾವಿರ ರೂಪಾಯಿ ಗಳಿಸಬೇಕು ಎಂದರೆ ಇರುವ ಏಕೈಕ ಉದ್ಯಮ ಯಾವುದು ಗೊತ್ತೇ??
Business: ಈಗಿನ ಯುವಕರು ಈಗ ಬೇರೆ ಕಡೆ ಕೆಲಸಕ್ಕೆ ಹೋಗಿ ಹಣ ಸಂಪಾದನೆ ಮಾಡುವುದಕ್ಕಿಂತ ಸ್ವಂತ ಬ್ಯುಸಿನೆಸ್ ಶುರು ಮಾಡಿ ಹಣ ಗಳಿಸಲು ಇಷ್ಟಪಡುತ್ತಾರೆ. ನಿಮಗೂ ಆ ಪ್ಲಾನ್ ಇದ್ದರೆ ಇಂದು ನಿಮಗೆ ಒಳ್ಳೆಯ ಬ್ಯುಸಿನೆಸ್ ಐಡಿಯಾ ಕೊಡುತ್ತೇವೆ. ಈ ಬ್ಯುಸಿನೆಸ್ ನಲ್ಲಿ ಇನ್ವೆಸ್ಟ್ಮೆಂಟ್ ಕಡಿಮೆ ಹಾಗೂ ಇದರಿಂದ ನೀವು ತಿಂಗಳಿಗೆ 60 ರಿಂದ 70 ಸಾವಿರ ರೂಪಾಯಿ ಹಣ ಗಳಿಸಬಹುದು. ಈ ಬ್ಯುಸಿನೆಸ್ ಗಾಗಿ ನಿಮಗೆ ಬೇಕಿರುವುದು ಸ್ವಲ್ಪ ಹಣ ಮತ್ತು 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ. ಈ ಬ್ಯುಸಿನೆಸ್ ಯಾವುದು ಎಂದು ತಿಳಿಸುತ್ತೇವೆ ನೋಡಿ..
ಇಂದು ನಾವು ನಿಮಗೆ ಹೇಳುತ್ತಿರುವುದು ಎಸ್.ಬಿ.ಐ (SBI) ಬ್ಯುಸಿನೆಸ್ ಪ್ಲಾನ್ ಬಗ್ಗೆ. ಇದಕ್ಕಾಗಿ ನೀವು 4 ರಿಂದ 5 ಲಕ್ಷ ಮರುಪಾವತಿ ಮಾಡಬಹುದಾದಷ್ಟು ಹಣ ಇನ್ವೆಸ್ಟ್ ಮಾಡಬೇಕಾಗುತ್ತದೆ. ಇದು ಎಸ್.ಬಿ.ಐ ನ ಎಟಿಎಂ (ATM) ಫ್ರಾಂಚೈಸಿ ಆಗಿದೆ, ನಮ್ಮ ಭಾರತದಲ್ಲಿ ಎಟಿಎಂ ಫ್ರಾಂಚೈಸಿ ಕಾಂಟ್ರ್ಯಾಕ್ಟ್ ಗಳನ್ನು ಮುಥೂಟ್, ಟಾಟಾ ಇಂಡಿಕ್ಯಾಶ್, ಹಾಗೂ ಇಂಡಿಯಾ ಒನ್ ಎಟಿಎಂ ಸಂಸ್ಥೆಗಳಿಗೆ ನೀಡಲಾಗಿದೆ, ನೀವು ಎಟಿಎಂ ಫ್ರಾಂಚೈಸಿ ಪಡೆಯಲು ಇವುಗಳ ವೆಬ್ಸೈಟ್ ಗಳ ಮೂಲಕ ಆನ್ಲೈನ್ ಅಪ್ಲಿಕೇಶನ್ ಹಾಕಬಹುದು. ಯಾರಾದರೂ ಎಟಿಎಂ ಫ್ರಾಂಚೈಸಿ ತೆಗೆದುಕೊಳ್ಳಬಹುದು. ಎಟಿಎಂ ಫ್ರಾಂಚೈಸಿ ತೆರೆಯಲು ನಿಮಗೆ 50 ರಿಂದ 80ಅಡಿ ಚದರಗಳಷ್ಟು ಜಾಗ ಬೇಕು, ಈಗ ಬೇರೆ ಎಟಿಎಂ ಇಂದ ಮಿನಿಮಮ್ 100 ಮೀಟರ್ ದೂರದಲ್ಲಿರಬೇಕು. ಇದನ್ನು ಓದಿ.. T20 World Cup: ಇದು ನಿಜಕ್ಕೂ ಒಳ್ಳೆಯದಲ್ಲ, ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಹರ್ಭಜನ್, ಹೇಳಿದ್ದೇನು ಗೊತ್ತೇ??
ಹಣ ಪಡೆಯಲು ಜನರಿಗೆ ಸುಲಭವಾಗಿ ಗೊತ್ತಾಗಬಹುದಾದ ಜಾಗ ಇದಾಗಿರಬೇಕು. ಈ ಜಾಗದಲ್ಲಿ 24 ಗಂಟೆಗಳು ಕರೆಂಟ್ ಇರಬೇಕು, ಇಲ್ಲಿ ಮಿನಿಮಮ್ 1KW ಸಂಪರ್ಕ ಕಡ್ಡಾಯವಾಗಿ ಬೇಕಾಗುತ್ತದೆ. ಎಟಿಎಂ ಕ್ಯಾಬಿನ್ ಕಾಂಕ್ರೀಟ್ ಛಾವಣಿ ಮಾಡಿಸಬೇಕಾಗುತ್ತದೆ. ವಿ ಸ್ಯಾಟ್ ಗಾಗಿ ಸೊಸೈಟಿ ಅಥವಾ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಬೇಕು. ಎಟಿಎಂ ಫ್ರಾಂಚೈಸಿ (ATM Franchise) ಶುರು ಮಾಡಲು ಬೇಕಾಗುವ ದಾಖಲೆಗಳು.. ID-ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಥವಾ ವೋಟರ್ ಐಡಿ, ಅಡ್ರೆಸ್ ಪ್ರೂಫ್ – ರೇಷನ್ ಕಾರ್ಡ್ ಅಥವಾ ಕರೆಂಟ್ ಬಿಲ್, ಬ್ಯಾಂಕ್ ಖಾತೆಯ ಪಾಸ್ ಬುಕ್, ಫೋಟೋ, ಇಮೇಲ್ ಐಡಿ, ಫೋನ್ ನಂಬರ್, ಬೇರೆ ದಾಖಲೆಗಳು, ಜಿ.ಎಸ್.ಟಿ ನಂಬರ್, ಹಣಕಾಸಿನ ದಾಖಲೆಗಳು ಬೇಕಾಗುತ್ತದೆ. ಇದನ್ನು ಓದಿ.. Cricket News: ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನದಂದೇ ಭಾವುಕಾರಾದ ದಿನೇಶ್ ಕಾರ್ತಿಕ್. ಕಿಂಗ್ ಕೊಹ್ಲಿ ಬಗ್ಗೆ DK ಹೇಳಿದ್ದೇನು ಗೊತ್ತೇ??
ಎಸ್.ಬಿ.ಐ ನ ಎಟಿಎಂ ಫ್ರಾಂಚೈಸಿ ಪಡೆಯಲು, 2,00,000 ರೂಪಾಯಿಯನ್ನು ಭದ್ರತೆಯಾಗಿ ಠೇವಣಿ ಇಟ್ಟು ಶುರು ಮಾಡಬಹುದು, ಇದು ಮರುಪವತಿಸಬಹುದಾದ ಭದ್ರತಾ ಠೇವಣಿ ಆಗಿದೆ. ಇದನ್ನು ಹೊರತುಪಡಿಸಿ, 3,00,000 ರೂಪಾಯಿಗಳ ಬಂಡವಾಳ ಅಗತ್ಯವಿದೆ, ಎಟಿಎಂ ಫ್ರಾಂಚೈಸಿಗೆ ಒಟ್ಟು 5,00,000 ಹೂಡಿಕೆ ಆಗುತ್ತದೆ. ಎಟಿಎಂ ಸ್ಥಾಪಿಸಿ ಅದು ಶುರುವಾದ ನಂತರ, ಹಣದ ಪ್ರತಿ ವಹಿವಾಟಿಗೆ 8 ರೂಪಾಯಿ ಮತ್ತು ಹಣವಿಲ್ಲದೆ, ಬ್ಯಾಲೆನ್ಸ್ ಚೆಕ್ ಮಾಡುವುದು ಇಂತಹ ವಹಿವಾಟುಗಳಿಗೆ 2 ರೂಪಾಯಿ ಸಿಗುತ್ತದೆ. ಇದನ್ನು ಓದಿ.. T20 World Cup: ಸೆಮೀಸ್, ಫೈನಲ್ ತಂಡಗಳಿಗೆ ಸಿಹಿ ಸುದ್ದಿ ಕೊಟ್ಟ ಐಸಿಸಿ: ಮಳೆ ಬಂದರೆ ಫುಲ್ ರೂಲ್ಸ್ ಚೇಂಜ್. ಬದಲಾದ ನಿಯಮ ಏನೇನು ಗೊತ್ತೇ??