T20 World Cup: ಇದು ನಿಜಕ್ಕೂ ಒಳ್ಳೆಯದಲ್ಲ, ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಹರ್ಭಜನ್, ಹೇಳಿದ್ದೇನು ಗೊತ್ತೇ??

T20 World Cup: ಇದು ನಿಜಕ್ಕೂ ಒಳ್ಳೆಯದಲ್ಲ, ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಹರ್ಭಜನ್, ಹೇಳಿದ್ದೇನು ಗೊತ್ತೇ??

T20 World Cup: ಟಿ20 ವಿಶ್ವಕಪ್ ನಲ್ಲಿ ಈಗ ಸೂಪರ್ 12 ಹಂತದ ಅಂತಿಮ ಪಂದ್ಯಗಳು ನಡೆಯುತ್ತಿದೆ. ಈಗಾಗಲೇ ಗ್ರೂಪ್ 1 ನಲ್ಲಿ ನ್ಯೂಜಿಲೆಂಡ್ (New Zealand) ತಂಡ ಸೆಮಿಫೈನಲ್ಸ್ ಗೆ ಏರಿದ್ದು, ಈಗ ಇಂಗ್ಲೆಂಡ್ (England) ತಂಡ ಸಹ ತಮ್ಮ ಸ್ಥಾನವನ್ನು ಖಾತ್ರಿ ಪಡಿಸಿಕೊಂಡಿದೆ. ಶ್ರೀಲಂಕಾ ವರ್ಸಸ್ ಇಂಗ್ಲೆಂಡ್ (Srilanka vs England) ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೆಮಿಫೈನಲ್ಸ್ ತಲುಪಬೇಕಾದರೆ, ಈ ಪಂದ್ಯವನ್ನು ಗೆಲ್ಲುವ ಅವಶ್ಯಕತೆ ಇತ್ತು. ಅದೇ ರೀತಿ ಇಂಗ್ಲೆಂಡ್ ಈ ಪಂದ್ಯ ಗೆದ್ದಿದ್ದು, ಬೆನ್ ಸ್ಟೋಕ್ಸ್ (Ben Stokes) ಅವರ ಇನ್ನಿಂಗ್ಸ್ ಅದ್ಭುಗವಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬೆನ್ ಸ್ಟೋಕ್ಸ್ ಅವರು ಫಾರ್ಮ್ ಗೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧ 36 ಎಸೆತಗಳಲ್ಲಿ 42 ರನ್ ಭಾರಿಸಿ, ಇಂಗ್ಲೆಂಡ್ ಗೆಲ್ಲಲು ಸಹಾಯ ಮಾಡಿದರು.

ಬೆನ್ ಸ್ಟೋಕ್ಸ್ ಅವರು ಫಾರ್ಮ್ ಗೆ ಮರಳಿ ಬಂದಿರುವುದು ಭಾರತ (Team India) ತಂಡಕ್ಕೆ ಒಳ್ಳೆಯ ಸೂಚನೆ ಅಲ್ಲ ಎಂದು ಭಾರತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ (Hrabhajan Singh) ಅವರು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ, ಭಾರತ ತಂಡ ಈಗ ಸೆಮಿಫೈನಲ್ ಗೆ ಹೋಗುವುದು ಬಹುತೇಕ ಖಚಿತವಾಗಿದೆ. ಇಂದು ಜಿಂಬಾಬ್ವೆ (Zimbabwe) ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಹೋಗುವ ಮೂಲಕ ಸೆಮಿಫೈನಲ್ಸ್ ನಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿ ಆಗುತ್ತದೆ. ಹಾಗಾಗಿ ಬೆನ್ ಸ್ಟೋಕ್ಸ್ ಅವರು ಫಾರ್ಮ್ ಗೆ ಬಂದಿರುವುದು ಹರ್ಭಜನ್ ಸಿಂಗ್ ಅವರ ಪ್ರಕಾರ ಭಾರತ ತಂಡಕ್ಕೆ ಒಳ್ಳೆಯದಲ್ಲ. ಇದರ ಬಗ್ಗೆ ಹರ್ಭಜನ್ ಸಿಂಗ್ ಅವರು ಮಾತನಾಡಿದ್ದಾರೆ. ಇದನ್ನು ಓದಿ.. Cricket News: ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನದಂದೇ ಭಾವುಕಾರಾದ ದಿನೇಶ್ ಕಾರ್ತಿಕ್. ಕಿಂಗ್ ಕೊಹ್ಲಿ ಬಗ್ಗೆ DK ಹೇಳಿದ್ದೇನು ಗೊತ್ತೇ??

“ಈ ಥರದ ಇನ್ನಿಂಗ್ಸ್ ಬ್ಯಾಟ್ಸ್ಮನ್ ನ ಆತ್ಮವಿಶ್ವಾಸ ವನ್ನು ಏರಿಸುತ್ತದೆ. ತಂಡದ ಆತ್ಮವಿಶ್ವಾಸ ಕೂಡ ಹೆಚ್ಚಾಗುವುದರ ಜೊತೆಗೆ, ತಂಡವು ಒಂದು ಪಟ್ಟು ಮೇಲಕ್ಕೆ ಏರುತ್ತದೆ. ಬೆನ್ ಸ್ಟೋಕ್ಸ್ (Ben Stokes) ಅವರು ಫಾರ್ಮ್ ಗೆ ಬಂದಿರುವುದು ಇಂಗ್ಲೆಂಡ್ ತಂಡಕ್ಕೆ ಒಳ್ಳೆಯ ಸೂಚನೆ, ಸೆಮಿಫೈನಲ್ ಗಿಂತ ಮೊದಲೇ ಫಾರ್ಮ್ ಗೆ ಬಂದಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ..” ಎಂದಿದ್ದಾರೆ ಹರ್ಭಜನ್ ಸಿಂಗ್ (Harbhajan Singh). ಬೆನ್ ಸ್ಟೋಕ್ಸ್ ಅವರು ಇಲ್ಲರೆ ಹೋಗಿದ್ದರೆ ಇಂಗ್ಲೆಂಡ್ ಈ ಪಂದ್ಯವನ್ನು ಗೆಲ್ಲಲು ಆಗುತ್ತಿರಲಿಲ್ಲ, ಸಿಕ್ಸರ್ ಬೌಂಡರಿ ಮಾತ್ರ ಹೊಡೆಯದೆ, ಒಂದು ಮತ್ತು ಎರಡು ರನ್ ಗಳಿಸುತ್ತಾ, ತಂಡವನ್ನು ಗೆಲುವಿನ ಕಡೆಗೆ ತೆಗೆದುಕೊಂಡು ಹೋದರು, ಸೆಮಿ ಫೈನಲ್ಸ್ ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಆಡಬೇಕಿರುವುದರಿಂದ, ಹರ್ಭಜನ್ ಸಿಂಗ್ ಅವರಿಗೆ ಆತಂಕ ಶುರುವಾಗಿದೆ. ಇದನ್ನು ಓದಿ.. T20 World Cup: ಸೆಮೀಸ್, ಫೈನಲ್ ತಂಡಗಳಿಗೆ ಸಿಹಿ ಸುದ್ದಿ ಕೊಟ್ಟ ಐಸಿಸಿ: ಮಳೆ ಬಂದರೆ ಫುಲ್ ರೂಲ್ಸ್ ಚೇಂಜ್. ಬದಲಾದ ನಿಯಮ ಏನೇನು ಗೊತ್ತೇ??