Cricket News: ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನದಂದೇ ಭಾವುಕಾರಾದ ದಿನೇಶ್ ಕಾರ್ತಿಕ್. ಕಿಂಗ್ ಕೊಹ್ಲಿ ಬಗ್ಗೆ DK ಹೇಳಿದ್ದೇನು ಗೊತ್ತೇ??
Cricket News: ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನದಂದೇ ಭಾವುಕಾರಾದ ದಿನೇಶ್ ಕಾರ್ತಿಕ್. ಕಿಂಗ್ ಕೊಹ್ಲಿ ಬಗ್ಗೆ DK ಹೇಳಿದ್ದೇನು ಗೊತ್ತೇ??
Cricket News: ಇಂದು ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾದ ವಿರಾಟ್ ಕೋಹ್ಲಿ (Virat Kohli) ಅವರ ಹುಟ್ಟುಹಬ್ಬ. ಇಂದು ನವೆಂಬರ್ 5ರಂದು ಕೋಹ್ಲಿ ಅವರಿಗೆ 34 ವರ್ಷ ತುಂಬಿದ. ಈ ದಿನ ಕೋಹ್ಲಿ ಅವರಿಗೆ ವಿಶ್ವದ ಹಲವರಿಂದ ಹುಟ್ಟು ಹಬ್ಬದ ಶುಭಾಶಯ ಹರಿದುಬರುತ್ತಿದೆ. ಈಗಿನ ಪೀಳಿಗೆಯ ಕ್ರಿಕೆಟರ್ ಗಳು, ಹಿಂದಿನ ಪೀಳಿಗೆಯ ಹಿರಿಯ ಕ್ರಿಕೆಟರ್ ಗಳು, ಬೇರೆ ದೇಶದ ಪ್ಲೇಯರ್ ಗಳು, ಸೆಲೆಬ್ರಿಟಿಗಳು ಎಲ್ಲರೂ ವಿರಾಟ್ ಕೋಹ್ಲಿ ಅವರಿಗೆ ವಿಶ್ ಮಾಡಿ, ಶುಭಾಶಯ ತಿಳಿಸುತ್ತಿದ್ದಾರೆ. ಭಾರತ ತಂಡದಲ್ಲಿ ಪ್ರಸ್ತುತ ಇರುವ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಅವರು ಸಹ ವಿರಾಟ್ ಅವರಿಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ. ಕಾರ್ತಿಕ್ ಅವರು ಬರೆದಿರುವುದು ಒಂದೇ ಒಂದು ಒಂದು ಸಾಲು, ಆದರೆ ಆ ಒಂದು ಸಾಲಿನಲ್ಲಿ ಭಾವನಾತ್ಮಕತೆ ಇದೆ.
ವಿರಾಟ್ ಕೋಹ್ಲಿ (Virat Kohli) ಅವರ ಜೊತೆಗಿನ ಒಂದು ಫೋಟೋ ಶೇರ್ ಮಾಡಿ, “ಯಾರು ನನ್ನನ್ನು ನಂಬದೆ ಇದ್ದಾಗ, ಅವನು ನನ್ನನ್ನು ನಂಬಿದನು.. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು..” ಎಂದು ಬರೆದುಕೊಂಡಿದ್ದಾರೆ ದಿನೇಶ್ ಕಾರ್ತಿಕ್. 2021ರಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಅವರು ಕೆಕೆಆರ್ (KKR) ತಂಡದ ಪರವಾಗಿ ಆಡುತ್ತಿದ್ದರು, ಆ ವರ್ಷ ಅವರು ಫಾರ್ಮ್ ನಲ್ಲಿ ಇಲ್ಲದ ಕಾರಣ ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಹೊರಗಿಟ್ಟರು, ಆಗ ಆರ್.ಸಿ.ಬಿ (RCB) ತಂಡ ದಿನೇಶ್ ಕಾರ್ತೀಕವರನ್ನು ಖರೀದಿ ಮಾಡಿತು, ಆ ಸಮಯದಲ್ಲಿ ದಿನೇಶ್ ಕಾರ್ತಿಕ್ ಅವರ ಮೇಲೆ ನಂಬಿಕೆ ಇಟ್ಟಿದ್ದು ವಿರಾಟ್ ಕೋಹ್ಲಿ ಅವರು. ಇದನ್ನು ಓದಿ.. T20 World Cup: ಸೆಮೀಸ್, ಫೈನಲ್ ತಂಡಗಳಿಗೆ ಸಿಹಿ ಸುದ್ದಿ ಕೊಟ್ಟ ಐಸಿಸಿ: ಮಳೆ ಬಂದರೆ ಫುಲ್ ರೂಲ್ಸ್ ಚೇಂಜ್. ಬದಲಾದ ನಿಯಮ ಏನೇನು ಗೊತ್ತೇ??
ಆ ನಂಬಿಕೆಯನ್ನು ಉಳಿಸಿಕೊಂಡ ದಿನೇಶ್ ಕಾರ್ತಿಕ್ (DK) ಅವರು, ಆರ್ಸಿಬಿ ತಂಡದ ಬೆಸ್ಟ್ ಫಿನಿಷರ್ ಎನ್ನಿಸಿಕೊಂಡರು, ಹಲವು ಮ್ಯಾಚ್ ಗಳನ್ನು ಸೋಲಿನ ಅಂಚಿನಿಂದ ಗೆಲುವಿನೆಡೆಗೆ ತಂದರು. ಐಪಿಎಲ್ ನ ಉತ್ತಮ ಪ್ರದರ್ಶನದಿಂದ ನ್ಯಾಷನಲ್ ಟೀಮ್ ಗೆ ಸೆಲೆಕ್ಟ್ ಆದರೂ, ಟಿ20 ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡರು ದಿನೇಶ್ ಕಾರ್ತಿಕ್, 2019ರ ನಂತರ ಇವರು ಭಾರತ ತಂಡದ ಪರವಾಗಿ ಆಡಿರಲಿಲ್ಲ. ಇಂದು ದಿನೇಶ್ ಕಾರ್ತಿಕ್ ಅವರು ಟೀಮ್ ಇಂಡಿಯಾದಲ್ಲಿ (Team India) ಇರುವುದಕ್ಕೆ , ವಿರಾಟ್ ಕೋಹ್ಲಿ ಅವರು ತಮ್ಮ ಮೇಲೆ ಇಟ್ಟ ನಂಬಿಕೆಯೇ ಕಾರಣ ಎನ್ನುವುದು ದಿನೇಶ್ ಕಾರ್ತಿಕ್ ಅವರ ನಂಬಿಕೆ ಆಗಿದೆ. ಇದನ್ನು ಓದಿ.. Cricket News: ಫೈನಲ್ ತಲುಪುವ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ತಂಡಗಳು ಯಾವ್ಯಾವು ಗೊತ್ತೇ??
He’s the one who believes when no one else does!
A very happy birthday to you @imVkohli. pic.twitter.com/NtQh9zej6G— DK (@DineshKarthik) November 5, 2022