Kannada News: ಐಪಿಎಲ್ ಹರಾಜಿಗೆ ರಣತಂತ್ರ ರೂಪಿಸಲು ಬೆಂಗಳೂರಿಗೆ ಕಾಲಿಟ್ಟ ಎಬಿಡಿ, ರಿಷಬ್ ಶೆಟ್ಟಿ ಭೇಟಿಯಾಗಿದ್ದು ಯಾಕೆ ಗೊತ್ತೇ??
Kannada News: ಐಪಿಎಲ್ ಹರಾಜಿಗೆ ರಣತಂತ್ರ ರೂಪಿಸಲು ಬೆಂಗಳೂರಿಗೆ ಕಾಲಿಟ್ಟ ಎಬಿಡಿ, ರಿಷಬ್ ಶೆಟ್ಟಿ ಭೇಟಿಯಾಗಿದ್ದು ಯಾಕೆ ಗೊತ್ತೇ??
Kannada News: ಆರ್.ಸಿ.ಬಿ (RCB) ಎಂದರೆ ಎಲ್ಲರೂ ವಿರಾಟ್ ಕೋಹ್ಲಿ (Virat Kohli) ಮತ್ತು ಎಬಿ ಡಿವಿಲಿಯರ್ಸ್ (AB de Villiers) ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಎಬಿಡಿ ಅವರು ಕಳೆದ ವರ್ಷ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ, ಈ ವರ್ಷ ಐಪಿಎಲ್ (IPL) ನಲ್ಲಿ ಸಹ ಆಡದೆ ಇದ್ದದ್ದು ಎಲ್ಲಾ ಅಭಿಮಾನಿಗಳಿಗೆ ಬಹಳ ಬೇಸರವಾಗಿತ್ತು, ಆರ್ಸಿಬಿ ಮತ್ತು ಬೆಂಗಳೂರು ಮತ್ತು ಅಭಿಮಾನಿಗಳು ಎಲ್ಲರೂ ಕೂಡ ಎಬಿಡಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಇದೀಗ ಎಬಿಡಿ ಅವರು ಇದ್ದಕ್ಕಿದ್ದ ಹಾಗೆ ಬೆಂಗಳೂರಿಗೆ ಬಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಅದರಲ್ಲೂ ಬರುತ್ತಲೇ ರಿಷಬ್ ಶೆಟ್ಟಿ (Rishab Shetty) ಅವರನ್ನು ಭೇಟಿ ಮಾಡಿರುವುದು, ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ರಿಷಬ್ ಶೆಟ್ಟಿ ಅವರು ಮತ್ತು ಎಬಿಡಿ ಅವರು ಇಬ್ಬರು ಸಹ ಕಾಂತಾರ (Kantara) ಎಂದು ಜೋರಾಗಿ ಕೂಗಿದ್ದಾರೆ. ಇವರಿಬ್ಬರನ್ನು ಜೊತೆಯಾಗಿ ನೋಡಿದ ಅಭಿಮಾನಿಗಳಿಗೆ ಇದಕ್ಕಿಂತ ಹಬ್ಬ ಬೇರೆ ಏನಿದೆ.. ಎಬಿಡಿ (ABD) ಅವರು ಕಾಂತಾರ ಸಿನಿಮಾ ನೋಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ, ಆದರೆ ಎಬಿಡಿ ಮತ್ತು ರಿಷಬ್ ಶೆಟ್ಟಿ ಇಬ್ಬರನ್ನು ಜೊತೆಯಾಗಿ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಐಪಿಎಲ್ ಆಕ್ಷನ್ ಶುರುವಾಗುವ ಮೊದಲು ಎಬಿಡಿ ಅವರು ಬೆಂಗಳೂರಿಗೆ ಬಂದಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ರಿಷಬ್ ಅವರು ಮತ್ತು ಎಬಿಡಿ ಜೊತೆಯಾಗಿ ಕಾಂತಾರ ಎಂದು ಕೂಗಿರುವ ವಿಡಿಯೋ ಅನ್ನು ಹೊಂಬಾಳೆ ಸಂಸ್ಥೆ (Hombale Films) ಮತ್ತು ರಿಷಬ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನು ಓದಿ.. T20 World Cup: ಸೋತ ಹತಾಶೆಯಲ್ಲಿ ಕಿಂಗ್ ಕೊಹ್ಲಿ ರವರ ವಿರುದ್ಧ ಆರೋಪ ಹೊರಿಸಿದ ಆಟಗಾರ, ಅದೇ ಪಂದ್ಯದಲ್ಲಿ ಏನು ಮಾಡಿದ್ದಾನೆ ಗೊತ್ತೇ?? ಎರಡು ಬಾರಿ ಮಾಡಿರುವ ತಪ್ಪೇನು ಗೊತ್ತೇ?
“ಇದು ಮ್ಯಾಚ್.. ನಿಜವಾದ 360ಯನ್ನು ಇಂದು ಭೇಟಿ ಮಾಡಿದ್ದೇನೆ.. ಇಂದು ಸೂಪರ್ ಹೀರೋ ನಮ್ಮ ಬೆಂಗಳೂರಿಗೆ ಮರಳಿ ಬಂದಿದ್ದಾರೆ..” ಎಂದು ಬರೆದುಕೊಂಡಿದ್ದಾರೆ ರಿಷಬ್. ಕೆಲ ಸಮಯದ ಹಿಂದೆ ಎಬಿಡಿ ಅವರು ಆರ್ಸಿಬಿ ತಂಡಕ್ಕೆ ಕೋಚ್ ಆಗಿ ವಾಪಸ್ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಸ್ವತಃ ಎಬಿಡಿ ಅವರು ಬೆಂಗಳೂರಿಗೆ, ಆರ್ಸಿಬಿ ತಂಡಕ್ಕೆ ಮರಳಿ ಬರುತ್ತೇನೆ ಆದರೆ ಯಾವ ರೀತಿ ಗೊತ್ತಿಲ್ಲ ಎಂದು ಹೇಳಿದ್ದರು. ಇದೀಗ ಆ ಮಾತು ನಿಜವಾಗುತ್ತಿರಬಹುದೇನೋ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಎಬಿಡಿ ಅವರ ಆಗಮನಕ್ಕೆ ಅಸಲಿ ಕಾರಣ ಏನು ಎಂದು ತಿಳಿದು ಬರಬೇಕಿದೆ.. ಇದನ್ನು ಓದಿ.. India vs Bangladesh: ಇದೀಗ ಮತ್ತೊಂದು ಕ್ಯಾತೆ ತೆಗೆದ ಬಾಂಗ್ಲಾ: ಕೊಹ್ಲಿ ಮಾಡಿದ್ದು ದೊಡ್ಡ ತಪ್ಪು, ಗೆಲುವು ನಮಗೆ ಸಿಗಬೇಕಾಗಿತ್ತು ಎಂದ ಆಟಗಾರ. ಯಾಕೆ ಅಂತೇ ಗೊತ್ತೇ??
It’s a Match!
Met the real 360 today.
The #Superhero is back to the roots again to #NammaBengaluru.. 🤩#Kantara @RCBTweets @ABdeVilliers17 @VKiragandur @shetty_rishab @hombalefilms @gowda_sapthami@HombaleGroup @AJANEESHB @actorkishore @KantaraFilm pic.twitter.com/LUfovEcn0h— Rishab Shetty (@shetty_rishab) November 3, 2022