T20 World Cup: ಸೋತ ಹತಾಶೆಯಲ್ಲಿ ಕಿಂಗ್ ಕೊಹ್ಲಿ ರವರ ವಿರುದ್ಧ ಆರೋಪ ಹೊರಿಸಿದ ಆಟಗಾರ, ಅದೇ ಪಂದ್ಯದಲ್ಲಿ ಏನು ಮಾಡಿದ್ದಾನೆ ಗೊತ್ತೇ?? ಎರಡು ಬಾರಿ ಮಾಡಿರುವ ತಪ್ಪೇನು ಗೊತ್ತೇ?

T20 World Cup: ಸೋತ ಹತಾಶೆಯಲ್ಲಿ ಕಿಂಗ್ ಕೊಹ್ಲಿ ರವರ ವಿರುದ್ಧ ಆರೋಪ ಹೊರಿಸಿದ ಆಟಗಾರ, ಅದೇ ಪಂದ್ಯದಲ್ಲಿ ಏನು ಮಾಡಿದ್ದಾನೆ ಗೊತ್ತೇ?? ಎರಡು ಬಾರಿ ಮಾಡಿರುವ ತಪ್ಪೇನು ಗೊತ್ತೇ?

T20 World Cup: ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ 3ನೇ ಗೆಲುವು ಪಡೆದ ಸೆಮಿ ಫೈನಲ್ಸ್ ಗೆ ಸನಿಹವಾಗುತ್ತಿದೆ. ಭಾರತ ತಂಡದ ಈ ಅಮೋಘ ಪ್ರದರ್ಶನವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಮೊನ್ನೆ ನಡೆದ ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಪಂದ್ಯದಲ್ಲಿ ಭಾರತ ತಂಡ 5 ರನ್ ಗಳಿಂದ ಜಯ ಸಾಧಿಸಿತು. ಆದರೆ ಸೋಲಿನ ಬೇಸರದಲ್ಲಿದ್ದ ಬಾಂಗ್ಲಾದೇಶ್ ತಂಡದ ವಿಕೆಟ್ ಕೀಪರ್ ನೂರುಲ್ ಹಸನ್ (Nurul Hasan) ವಿರಾಟ್ ಕೋಹ್ಲಿ (Virat Kohli) ಅವರ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ ಮಾಡಿ, ಒಂದು ವೇಳೆ ಅಂಪೈರ್ ಗಳು ಅದನ್ನು ಗಮನಿಸಿದ್ದರೆ, ಭಾರತ ತಂಡಕ್ಕೆ ಪೆನಾಲ್ಟಿ ಬೀಳುತ್ತಿತ್ತು, ನಮಗೆ 5 ರನ್ ಹೆಚ್ಚುವರಿಯಾಗಿ ಸಿಗುತ್ತಿತ್ತು, ಆಗ ಪಂದ್ಯದ ಫಲಿತಾಂಶ ಬದಲಾಗುತ್ತಿತ್ತು ಎಂದು ನೂರುಲ್ ಹಸನ್ ಆಪಾದನೆ ಮಾಡಿದ್ದರು.

ವಿರಾಟ್ ಅವರ ಮೇಲೆ ಆಪಾದನೆ ಹೊರೆಸಿರುವ ಈತ, ಟಿ2 ವಿಶ್ವಕಪ್ ನಲ್ಲಿ ತಾನೇ ಎರಡು ಸಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಸೌತ್ ಆಫ್ರಿಕಾ (South Africa=ವಿರುದ್ಧ ನಿಯಮ ಉಲ್ಲಂಘನೆ ಮಾಡಿದಾಗ, ಬಾಂಗ್ಲಾದೇಶ್ ತಂಡ ಸೋಲು ಕಂಡಿತು, ಮತ್ತೊಮ್ಮೆ ಜಿಂಬಾಬ್ವೆ (Zimbabwe) ವಿರುದ್ಧ ನಿಯಮ ಉಲ್ಲಂಘನೆ ಆದಾಗ ಬಾಂಗ್ಲಾದೇಶ್ ತಂಡ ಸೋಲಿನ ಅಂಚಿನಲ್ಲಿತ್ತು. ಬಾಂಗ್ಲಾದೇಶ್ ವರ್ಸಸ್ ಸೌತ್ ಆಫ್ರಿಕಾ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ (Shakib Al Hasan) ಬೌಲಿಂಗ್ ಮಾಡುವಾಗ, ಅವರು ಬಾಲ್ ಡೆಲಿವರಿ ಮಾಡುವ ಮೊದಲೇ, ನೂರುಲ್ ಹಸನ್ ತಮ್ಮ ಜಾಗದಿಂದ ಮೂವ್ ಆಗಿದ್ದರು, ನಿಯಮದ ಪ್ರಕಾರ, ಬೌಲರ್ ಬಾಲ್ ಎಸೆಯುವವರೆಗು ವಿಕೆಟ್ ಕೀಪರ್ ತಮ್ಮ ಸ್ಥಾನದಲ್ಲೇ ಇರಬೇಕು. ಹಾಗಾಗಿ ನೂರುಲ್ ಹಸನ್ ರೂಲ್ ಬ್ರೇಕ್ ಮಾಡಿದ ಕಾರಣ, ಬಾಂಗ್ಲಾದೇಶ್ ತಂಡಕ್ಕೆ 5 ರನ್ ಪೆನಾಲ್ಟಿ ಹಾಕಿದ್ದರು. ಇದನ್ನು ಓದಿ.. India vs Bangladesh: ಇದೀಗ ಮತ್ತೊಂದು ಕ್ಯಾತೆ ತೆಗೆದ ಬಾಂಗ್ಲಾ: ಕೊಹ್ಲಿ ಮಾಡಿದ್ದು ದೊಡ್ಡ ತಪ್ಪು, ಗೆಲುವು ನಮಗೆ ಸಿಗಬೇಕಾಗಿತ್ತು ಎಂದ ಆಟಗಾರ. ಯಾಕೆ ಅಂತೇ ಗೊತ್ತೇ??

ಜಿಂಬಾಬ್ವೆ ವಿರುದ್ಧದ ಪಂದ್ಯ ನಡೆಯುವಾಗ, ಕೊನೆಯ ಒಂದು ಎಸೆತದಲ್ಲಿ ಬಾಂಗ್ಲಾದೇಶ್ 5 ರನ್ ಗಳನ್ನು ಡಿಫೆಂಡ್ ಮಾಡಿಕೊಳ್ಳಬೇಕಿತ್ತು, ಮೊಸದ್ದೆಕ್ ಹೊಸೈನ್ ಅವರ ಬೌಲಿಂಗ್ ನಲ್ಲಿ ಬ್ಲೆಸಿಂಗ್ ಮುಜರ್ಬಾನಿ ಅವರ ಬಿಗ್ ಶಾಟ್ ಹೊಡೆಯುವ ಪ್ರಯತ್ನ ಸಫಲವಾಗಲಿಲ್ಲ. ಆ ಬಾಲ್ ವಿಕೆಟ್ ಕೀಪರ್ ಕೈಗೆ ಸಿಕ್ಕಿತು. ಆ ತಕ್ಷಣವೇ ನೂರುಲ್ ಹಸನ್ ಸ್ಟಂಪಿಂಗ್ ಮಾಡಿದರು, ತಕ್ಷಣವೇ ಬಾಂಗ್ಲಾದೇಶ್ ತಂಡ ಗೆಲುವಿನ ಖಷಿ ಸೆಲೆಬ್ರೇಟ್ ಮಾಡಲು ಶುರು ಮಾಡಿದರು. ಆದರೆ 3rd ಅಂಪೈರ್, ನೂರುಲ್ ಹಸನ್ (Nurul Hasan) ಮಾಡಿದ ತಪ್ಪನ್ನು ಕಂಡುಹಿಡಿದರು, ಚೆಂಡು ತಮ್ಮ ಕೈಗೆ ಸಿಕ್ಕಾಗ ವಿಕೆಟ್ ಮುಂದೆಯಿಂದ ಸ್ಟಂಪಿಂಗ್ ಮಾಡಿದ್ದಾರೆ, ನಿಯಮದ ಅನುಸಾರ ವಿಕೆಟ್ ಹಿಂದೆಯಿಂದ ಸ್ಟಂಪಿಂಗ್ ಮಾಡಬೇಕು. ಹಾಗಾಗಿ ಅಂಪೈರ್ ನೋ ಬಾಲ್ ಕೊಟ್ಟರು. ಇಂದರಿಂದ ಬಾಂಗ್ಲಾದೇಶ್ (Bangladesh) ತಂಡ ಸೋಲಿನ ಅಂಚಿಗೆ ಹೋಗಿ ಕೊನೆಗೆ ಗೆದ್ದಿತು. ಈ ವ್ಯಕ್ತಿಯೇ ಎರಡು ಬಾರಿ ನಿಯಮ ಉಲ್ಲಂಘನೆ ಮಾಡಿದ್ದು, ಕೋಹ್ಲಿ ಅವರ ಮೇಲೆ ಆರೋಪ ಮಾಡಲು ಬರುತ್ತಿದ್ದಾನೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. India vs Bangladesh: ಶಮಿ, ಭುವಿ ಗೆ ಅವಕಾಶ ಇದ್ದರೂ ಕೂಡ ಕೊನೆಯ ಓವರ್ ಅನ್ನು ಅರ್ಶದೀಪ್ ರವರಿಗೆ ಕೊಟ್ಟ ಕಾರಣವನ್ನು ತಿಳಿಸಿದ ರೋಹಿತ್. ಯಾಕೆ ಅಂತೇ ಗೊತ್ತೇ??