India vs Bangladesh: ಇದೀಗ ಮತ್ತೊಂದು ಕ್ಯಾತೆ ತೆಗೆದ ಬಾಂಗ್ಲಾ: ಕೊಹ್ಲಿ ಮಾಡಿದ್ದು ದೊಡ್ಡ ತಪ್ಪು, ಗೆಲುವು ನಮಗೆ ಸಿಗಬೇಕಾಗಿತ್ತು ಎಂದ ಆಟಗಾರ. ಯಾಕೆ ಅಂತೇ ಗೊತ್ತೇ??

India vs Bangladesh: ಇದೀಗ ಮತ್ತೊಂದು ಕ್ಯಾತೆ ತೆಗೆದ ಬಾಂಗ್ಲಾ: ಕೊಹ್ಲಿ ಮಾಡಿದ್ದು ದೊಡ್ಡ ತಪ್ಪು, ಗೆಲುವು ನಮಗೆ ಸಿಗಬೇಕಾಗಿತ್ತು ಎಂದ ಆಟಗಾರ. ಯಾಕೆ ಅಂತೇ ಗೊತ್ತೇ??

India vs Bangladesh: ಭಾರತ ತಂಡದ (Team India) ಸುತ್ತ ಈಗೊಂದು ವಿವಾದ ಸೃಷ್ಟಿಯಾಗಿದೆ, ಬಾಂಗ್ಲಾದೇಶ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನೂರುಲ್ ಹಸನ್ (Nurul Hasan) ಅವರು ವಿರಾಟ್ ಕೋಹ್ಲಿ (Virat Kohli) ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದೊಡ್ಡ ವಿವಾದವನ್ನೇ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ ಆಡಿದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ, ಈ ಪಂದ್ಯದಲ್ಲಿ ನೋ ಬಾಲ್ ವಿಚಾರಕ್ಕೆ ಪಂದ್ಯ ಮುಗಿದ ಬಳಿಕ ಪಾಕಿಸ್ತಾನ್ ಅಭಿಮಾನಿಗಳು ಕ್ಯಾತೆ ತೆಗೆದಿದ್ದರು. ಇದೀಗ ನಿನ್ನೆ ನಡೆದ ಭಾರತ ವರ್ಸಸ್ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಸಹ ಇಂಥದ್ದೇ ನೋ ಬಾಲ್ ಘಟನೆ ನಡೆಯಿತು. ವಿರಾಟ್ ಕೋಹ್ಲಿ ಅವರಿಗೆ ಹಾಕಿದ ಬಾಲ್, ಅವರ ಶೋಲ್ಡರ್ ಇಂದ ಎತ್ತರಕ್ಕೆ ಹೋಗಿತ್ತು ಎಂದು ವಿರಾಟ್ ಅವರು ನೋ ಬಾಲ್ ಗೆ ಅಪೀಲ್ ಮಾಡಿದರು.

ಆಗ ಕ್ಯಾಪ್ಟನ್ ಶಕೀಬ್ ಅಲ್ ಹಸನ್ (Shakib Al-Hasan) ಬಂದು ವಿರಾಟ್ ಅವರೊಡನೆ ಮಾತನಾಡಿದರು. ಆಗ ಎಲ್ಲವೂ ಶಾಂತಿಯುತವಾಗಿಯೇ ನಡೆಯಿತು. ಆದರೆ ಪಂದ್ಯ ಮುಗಿದ ಬಳಿಕ ಬಾಂಗ್ಲಾದೇಶ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನೂರುಲ್ ಹಸನ್ ವಿರಾಟ್ ಕೊಹ್ಲಿ (Virat Kohli) ಅವರ ಮೇಲೆ ಆರೋಪ ಮಾಡುತ್ತಿದ್ದಾರೆ, ವಿರಾಟ್ ಕೋಹ್ಲಿ ಅವರು ನಕಲಿ ಫೀಲ್ಡಿಂಗ್ ಮಾಡಿದರು, ಇದು ಅಂಪೈರ್ ಗಳ ಗಮನಕ್ಕೆ ಬರಲಿಲ್ಲ. ಸರಿಯಾಗಿ ಗಮನಿಸಿದ್ದರೆ, 5 ರನ್ ಗಳ ಪೆನಾಲ್ಟಿ ಬೀಳುತ್ತಿತ್ತು, ಇದರಿಂದ ನಾವು ಗೆಲ್ಲಲು ಸಹಾಯವಾಗುತ್ತಿತ್ತು ಎಂದು ಹೇಳಿದ್ದಾರೆ ನೂರುಲ್. “ಒದ್ದೆ ಫೀಲ್ಡ್ ನಲ್ಲಿ ಆಡುವುದರ ಜೊತೆಗೆ ನಕಲಿ ಫೀಲ್ಡಿಂಗ್ ಸಹ ಆಯಿತು ಎಂದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಎಂದರೆ, ಬಾಂಗ್ಲಾದೇಶ್ ಬ್ಯಾಟಿಂಗ್ ಮಾಡುವಾಗ, 7ನೇ ಓವರ್ ನಲ್ಲಿ, ಅದಾಗಲೇ ಲಿಟ್ಟೊನ್ ದಾಸ್ (Litton Das) 24 ಎಸೆತಗಳಲ್ಲಿ 56 ರನ್ ಗಳಿಸಿದ್ದರು, 7ನೇ ಓವರ್ ನಲ್ಲಿ ಅಕ್ಸರ್ ಪಟೇಲ್ (Axar Patel) ಅವರು ಹಾಕಿದ ಎರಡನೇ ಎರಡನೇ ಎಸೆತಕ್ಕೆ, ಬೌಂಡರಿ ಕಡೆಗೆ ಬ್ಯಾಟ್ ಕಳಿಸಿ, ರನ್ ಗಾಗಿ ಇಬ್ಬರು ಬ್ಯಾಟ್ಸ್ಮನ್ ಗಳು ಓಡಿದರು. ಇದನ್ನು ಓದಿ.. India vs Bangladesh: ಶಮಿ, ಭುವಿ ಗೆ ಅವಕಾಶ ಇದ್ದರೂ ಕೂಡ ಕೊನೆಯ ಓವರ್ ಅನ್ನು ಅರ್ಶದೀಪ್ ರವರಿಗೆ ಕೊಟ್ಟ ಕಾರಣವನ್ನು ತಿಳಿಸಿದ ರೋಹಿತ್. ಯಾಕೆ ಅಂತೇ ಗೊತ್ತೇ??

ಆಗ ಅರ್ಷದೀಪ್ ಸಿಂಗ್ (Arshdeep Singh) ಅವರಿಗೆ ಬಾಲ್ ಸಿಕ್ಕಿ, ಅದನ್ನು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಅವರ ಕಡೆಗೆ ಎಸೆದರು. ಅಲ್ಲಿಯೇ, ರಿಂಗ್ ಒಳಗಿದ್ದ ಕೋಹ್ಲಿ ಅವರು ಬಾಲ್ ಹಿಡಿದ ರೀತಿ ಮಾಡಿ, ನಾನ್ ಸ್ಟ್ರೈಕ್ ಕಡೆಗೆ ಥ್ರೋ ಮಾಡುವ ಹಾಗೆ ಮಾಡಿದರು, ಈ ಘಟನೆಯ ಬಗ್ಗೆ ವಿವಾದ ಸೃಷ್ಟಿಸಲು ಬಾಂಗ್ಲಾದೇಶ್ ತಂಡ ಪ್ರಯತ್ನ ಮಾಡುತ್ತಿದೆ. ಇದರ ಬಗ್ಗೆ ಹರ್ಷ ಬೋಗ್ಲೇ (Harsha Bhogle) ಅವರು ಮಾತನಾಡಿ, “ಎದುರಾಳಿ ತಂಡದ ಆಟಗಾರರು ಈಸಿ ಆಗಿ ರನ್ ಗಳಿಸಿದರು, ಕೋಹ್ಲಿ ಅವರು ಯಾವುದೇ ತಪ್ಪು ಮಾಡಿಲ್ಲ. ಅದರಿಂದ ಅಪಾಯವೇನು ಆಗಿಲ್ಲ. ಈ ಘಟನೆಯನ್ನು ವಿವಾದ ಮಾಡೋದರಲ್ಲಿ ಅರ್ಥವಿಲ್ಲ..” ಎಂದಿದ್ದಾರೆ. ಉದ್ದೇಶಪೂರ್ವಕವಾಗಿ ನಕಲಿ ಫೀಲ್ಡಿಂಗ್ ಮಾಡಬಾರದು ಎಂದು ಐಸಿಸಿ (ICC) ಕಠಿಣ ರೂಲ್ ಮಾಡಿದೆ, ಒಂದು ವೇಳೆ ಆ ರೀತಿ ಆದರೆ ಅಂಪೈರ್ ಡೆಡ್ ಬಾಲ್ ಕೊಡಬಹುದು, 5 ರನ್ ಗಳ ಪೆನಾಲ್ಟಿ ಹಾಕಬಹುದು ಎಂದು ನಿಯಮವಿದೆ. ಇದನ್ನು ಓದಿ.. Cricket News: ಕಿಂಗ್ ಕೊಹ್ಲಿ ಕಮ್ ಬ್ಯಾಕ್ ಗೆ ಭಾರಿ ತಲೆ ಕೆಡಿಸಿಕೊಂಡಂತೆ ಕಂಡಿರುವ ಶೋಯೆಬ್ ಅಕ್ತರ್, ಈಗ ಏನು ಹೇಳಿದ್ದಾರೆ ಗೊತ್ತೇ??