ಕರುನಾಡ ವಾಣಿ
ಇದು ನಿಮ್ಮ ಧ್ವನಿ

India vs Bangladesh: ಶಮಿ, ಭುವಿ ಗೆ ಅವಕಾಶ ಇದ್ದರೂ ಕೂಡ ಕೊನೆಯ ಓವರ್ ಅನ್ನು ಅರ್ಶದೀಪ್ ರವರಿಗೆ ಕೊಟ್ಟ ಕಾರಣವನ್ನು ತಿಳಿಸಿದ ರೋಹಿತ್. ಯಾಕೆ ಅಂತೇ ಗೊತ್ತೇ??

324

Get real time updates directly on you device, subscribe now.

India vs Bangladesh: ನಿನ್ನೆ ನಡೆದ ಭಾರತ ವರ್ಸಸ್ ಬಾಂಗ್ಲಾದೇಶ್ ಪಂದ್ಯ ಅತ್ಯಂತ ರೋಚಕವಾಗಿತ್ತು ಎಂದು ಹೇಳಬಹುದು. ಭಾರತ ತಂಡ ನೀಡಿದ 185ರ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶ್ ಒಳ್ಳೆಯ ಆರಂಭಪಡೆದು ಲಿಟ್ಟೊನ್ ದಾಸ್ (Litton Das) ಅವರ ಅದ್ಭುತ ಬ್ಯಾಟಿಂಗ್ ನಲ್ಲಿ, 66 ರನ್ ಗಳಿಸಿಯು ವಿಕೆಟ್ ಕಳೆದುಕೊಳ್ಳದೆ ಗೆಲುವನ್ನು ಸನಿಹಕ್ಕೆ ತೆಗೆದುಕೊಳ್ಳುತ್ತಿತ್ತು., ಆದರೆ ಮಳೆ ಬಂದು ಹೋದ ನಂತರ ಕೆ.ಎಲ್ ರಾಹುಲ್ (K L Rahul) ಅವರ ಡೈರೆಕ್ಟ್ ಹಿಟ್ ಇಂದ ಲಿಟ್ಟೊನ್ ದಾಸ್ ಔಟ್ ಆದರು, ಅದಾದ ಬಳಿಕ ಭಾರತ ತಂಡ ರೆಗ್ಯುಲರ್ ಆಗಿ ವಿಕೆಟ್ಸ್ ತೆಗೆಯುತ್ತಾ ಹೋಯಿತು. ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಮೊಹಮ್ಮದ್ ಶಮಿ ಮೂವರು ಬೌಲರ್ ಗಳು ಸಹ ಉತ್ತಮವಾಗಿ ಬೌಲಿಂಗ್ ಮಾಡಿದರು..

ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶ್ ತಂಡ ಗೆಲ್ಲಲು, 6 ಎಸೆತಗಳಲ್ಲಿ 20 ರನ್ ಬೇಕಿತ್ತು, ಈ ನಿರ್ಣಾಯಕ ಓವರ್ ಗೆ ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್ ಇಬ್ಬರು ಕೂಡ ಆಯ್ಕೆಯಲ್ಲಿದ್ದರು, ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಯಂಗ್ ಬೌಲರ್, ಡೆತ್ ಓವರ್ ಸ್ಪೆಷಲಿಸ್ಟ್ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಿದರು. ಕ್ಯಾಪ್ಟನ್ ಮತ್ತು ತಂಡ ತಮ್ಮ ಮೇಲೆ ಇಟ್ಟಿದ್ದ ಭರವಸೆಯನ್ನು ಹುಸಿ ಮಾಡಲಿಲ್ಲ ಈ ಯುವ ಆಟಗಾರ, ಅದ್ಭುತವಾಗಿ ಬೌಲಿಂಗ್ ಮಾಡಿ, ಭಾರತ (Team India) ಗೆಲ್ಲುವ ಹಾಗೆ ಮಾಡಿದರು. ಈ ಅಂತಿಮ ಓವರ್ ಗೆ ಶಮಿ ಅವರ ಬದಲಾಗಿ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಹಲವರಿಗೆ ಇತ್ತು, ಅದಕ್ಕೆ ಸ್ವತಃ ರೋಹಿತ್ ಶರ್ಮಾ ಅವರೇ ಉತ್ತರ ಕೊಟ್ಟಿದ್ದಾರೆ.. ಇದನ್ನು ಓದಿ.. Cricket News: ಕಿಂಗ್ ಕೊಹ್ಲಿ ಕಮ್ ಬ್ಯಾಕ್ ಗೆ ಭಾರಿ ತಲೆ ಕೆಡಿಸಿಕೊಂಡಂತೆ ಕಂಡಿರುವ ಶೋಯೆಬ್ ಅಕ್ತರ್, ಈಗ ಏನು ಹೇಳಿದ್ದಾರೆ ಗೊತ್ತೇ??

ಪಂದ್ಯ ಮುಗಿದ ನಂತರ ಮಾತನಾಡಿ, “ನಾನು ಕಾಮ್ ಆಗಿ ಇದ್ದೆ, ಆದರೆ ಟೆನ್ಷನ್ ಕೂಡ ಆಗುತ್ತಿತ್ತು. ನಮ್ಮ ತಂಡ ಕಾಮ್ ಆಗಿ ಆಡುವುದು ಬಹಳ ಮುಖ್ಯವಾಗಿತ್ತು. ನಾವು ಚೆನ್ನಾಗಿ ಆಡಿದೆವು.. ಅರ್ಷದೀಪ್ ಬಂದಾಗ, ನಾವು ಅವರಿಗೆ ಆ ರೀತಿ ಆಡಲು ಹೇಳಿದೆವು, ಜಸ್ಪ್ರೀತ್ ಬುಮ್ರ (Jasprit Bumrah) ಇಲ್ಲದೆ ಇರುವಾಗ ಮತ್ತೊಬ್ಬರು ಆ ಜವಾಬ್ದಾರಿ ತೆಗೆದುಕೊಳ್ಳಲೇಬೇಕಿತ್ತು, ಅಷ್ಟು ಚಿಕ್ಕ ಹುಡುಗ ಈ ರೀತಿ ಆಡುವುದು ಸುಲಭದ ವಿಷಯ ಅಲ್ಲ. ನಾವು ಅರ್ಷದೀಪ್ ಪ್ರಿಪೇರ್ ಆಗುವ ಹಾಗೆ ಮಾಡಿದ್ವಿ, ಕಳೆದ 9 ತಿಂಗಳಿನಿಂದ ಅವರು ಇದನ್ನು ಮಾಡುತ್ತಲೇ ಬಂದಿದ್ದಾರೆ. ಶಮಿ (Mohammad Shami) ಮತ್ತು ಅರ್ಷದೀಪ್ (Arshdeep Singh) ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ಆಯ್ಕೆ ಇತ್ತು, ಈ ಮೊದಲು ತಂಡದಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಿಸಿರುವವರನ್ನು ಆಯ್ಕೆ ಮಾಡುವುದು ಒಳ್ಳೆಯದು ಅನ್ನಿಸಿತು, ಅವರು ಯಾವಾಗಲೂ ನಮ್ಮ ಜೊತೆಗಿದ್ದಾರೆ. ಇದು ಕೆಲವು ಇನ್ನಿಂಗ್ಸ್ ಗಳ ವಿಚಾರ, ಏಷ್ಯಾಕಪ್ (Asiacup) ನಲ್ಲಿ ಕಂಬ್ಯಾಕ್ ಮಾಡಿದರು..” ಎಂದಿದ್ದಾರೆ ರೋಹಿತ್ ಶರ್ಮ. ಇದನ್ನು ಓದಿ.. India vs Bangladesh: ನೋ ಬಾಲ್ ಕೊಟ್ಟ ತಕ್ಷಣ ಅಂಪೇರ್ ಕಡೆ ಜೋರಾಗಿ ಬಂದ ಶಕೀಬ್, ಕಿಂಗ್ ಕೊಹ್ಲಿ ಕಂಡ ತಕ್ಷಣ ಮಾಡಿದ್ದೇನು ಗೊತ್ತೇ??

Get real time updates directly on you device, subscribe now.