Cricket News: ಕಿಂಗ್ ಕೊಹ್ಲಿ ಕಮ್ ಬ್ಯಾಕ್ ಗೆ ಭಾರಿ ತಲೆ ಕೆಡಿಸಿಕೊಂಡಂತೆ ಕಂಡಿರುವ ಶೋಯೆಬ್ ಅಕ್ತರ್, ಈಗ ಏನು ಹೇಳಿದ್ದಾರೆ ಗೊತ್ತೇ??

Cricket News: ಕಿಂಗ್ ಕೊಹ್ಲಿ ಕಮ್ ಬ್ಯಾಕ್ ಗೆ ಭಾರಿ ತಲೆ ಕೆಡಿಸಿಕೊಂಡಂತೆ ಕಂಡಿರುವ ಶೋಯೆಬ್ ಅಕ್ತರ್, ಈಗ ಏನು ಹೇಳಿದ್ದಾರೆ ಗೊತ್ತೇ??

Cricket News: ನಿನ್ನೆ ನಡೆದ ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಪಂದ್ಯದಲ್ಲಿ ಗೆಲ್ಲುವ ಮೂಲಕ ನಮ್ಮ ಭಾರತ ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಕೆ.ಎಲ್.ರಾಹುಲ್ (K L Rahul) ಅವರು ಅರ್ಧಶತಕ ಸಿಡಿಸಿದರು ಸಹ, ಎಲ್ಲರ ಗಮನ ವಿರಾಟ್ ಕೋಹ್ಲಿ (Virat Kohli) ಅವರ ಮೇಲಿತ್ತು. ರೋಹಿತ್ ಶರ್ಮಾ (Rohit Sharma) ಅವರ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್ ಗೆ ಬಂದ ಕೋಹ್ಲಿ ಅವರು 62 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಬಾಂಗ್ಲಾದೇಶ್ ತಂಡಕ್ಕೆ 185 ರನ್ ಗಳ ಟಾರ್ಗೆಟ್ ನೀಡಿದರು. ಬ್ಯಾಟಿಂಗ್ ಶುರು ಮಾಡಿದ ಬಾಂಗ್ಲಾದೇಶ್ ತಂಡ, 66 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಳ್ಳದೆ, ಡಿ.ಎಲ್.ಎಸ್ ನಲ್ಲಿ 17 ರನ್ಸ್ ಮುಂದಿತ್ತು. ಆದರೆ ಕೆ.ಎಲ್.ರಾಹುಲ್ ಅವರ ಅದ್ಭುತ ಫೀಲ್ಡಿಂಗ್ ಪ್ರದರ್ಶನದಿಂದ ಲಿಟ್ಟೊನ್ ದಾಸ್ (Litton Das) ಅವರ ವಿಕೆಟ್ ಉರುಳಿತು.

ಇದರ ಬಳಿಕ ಒಂದರ ನಂತರ ಮತ್ತಷ್ಟು ವಿಕೆಟ್ಸ್ ಗಳು ಉರುಳುತ್ತಲೇ ಹೋದವು. ಬಾಂಗ್ಲಾದೇಶ್ ಟಫ್ ಕಾಂಪಿಟೇಶನ್ ನೀಡಿದರು ಸಹ, ಕೊನೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕೋಣೆಯ ಎಸೆತದಲ್ಲಿ 7 ರನ್ ಬೇಕಿದ್ದಾಗ, 2 ರನ್ಸ್ ಪಡೆದ ಬಾಂಗ್ಲಾದೇಶ್ ಸೋಲು ಕಂಡಿತು. ಭಾರತ ತಂಡ ಗೆದ್ದು, ಸೆಮಿ ಫೈನಲ್ಸ್ ಗೆ ತನ್ನ ದಾರಿಯನ್ನು ಸುಗಮ ಮಾಡಿಕೊಂಡಿದೆ. ನಿನ್ನೆಯ ಪಂದ್ಯ ಗೆದ್ದ ಬಳಿಕ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶೋಯೆಬ್ ಅಕ್ತರ್ (Shoaib Akhtar) ಭಾರತ ತಂಡವನ್ನು ಹೊಗಳಿದ್ದು, ವಿಶೇಷವಾಗಿ ಕೋಹ್ಲಿ ಅವರ ಗುಣಗಾನ ಮಾಡಿದ್ದಾರೆ, ಮೊದಲಿಗೆ ಪಾಕ್ ವಿರುದ್ಧದ ಪಂದ್ಯದ ನಂತರ ಕೋಹ್ಲಿ ಅವರನ್ನು ಟೀಕೆ ಮಾಡಿದ್ದರು, ಆದರೆ ಶೋಯೆಬ್ ಅಕ್ತರ್ ಇದೀಗ ವಿರಾಟ್ ಅವರನ್ನು ಹೊಗಳಿದ್ದಾರೆ, ವಿರಾಟ್ ಕೋಹ್ಲಿ ಅವರ ಬಗ್ಗೆ ಶೋಯೆಬ್ ಅಕ್ತರ್ ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ.. India vs Bangladesh: ನೋ ಬಾಲ್ ಕೊಟ್ಟ ತಕ್ಷಣ ಅಂಪೇರ್ ಕಡೆ ಜೋರಾಗಿ ಬಂದ ಶಕೀಬ್, ಕಿಂಗ್ ಕೊಹ್ಲಿ ಕಂಡ ತಕ್ಷಣ ಮಾಡಿದ್ದೇನು ಗೊತ್ತೇ??

“ಈ ಟಿ20 ವರ್ಲ್ಡ್ ಕಪ್ (T20 World Cup) ವಿರಾಟ್ ಕೋಹ್ಲಿ ಅವರಿಗಾಗಿಯೇ ನಡೆಯುತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಈಗಿನ ಪಂದ್ಯದಲ್ಲಿ 64 ರನ್ಸ್ ಗಳಿಸಿದ್ದಾರೆ, ಇದರ ಮೂಲಕ ಭಾರತ 184 ರನ್ ಗಳಿಸಿತು. ಮೂರು ವರ್ಷದಿಂದ ಫಾರ್ಮ್ ನಲ್ಲಿ ಇರದ ವಿರಾಟ್ ಕೋಹ್ಲಿ, ಇಂದು ಟಾಪ್ ಸ್ಕೋರ್ ಮಾಡಿರುವ ಆಟಗಾರ ಆಗಿದ್ದಾರೆ, ದೇವರ್ಸ್ ಇಚ್ಛೆ ಇದ್ದರೆ ಎಲ್ಲವೂ ನಡೆಯುತ್ತದೆ.. ಮುಂದಿನ ದಿನಗಳಲ್ಲಿ ವಿರಾಟ್ ಕೋಹ್ಲಿ ಅವರು ಭಾರತದ ಪರವಾಗಿ ಇನ್ನು ಅದ್ಭುತ ಇನ್ನಿಂಗ್ಸ್ ಆಡುತ್ತಾರೆ ಎಂದು ನನಗೆ ಖಚಿತವಾಗಿ ಅನ್ನಿಸುತ್ತಿದೆ. ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿತು. ಈ ಕಡೆ ಪಾಕಿಸ್ತಾನ್, ಈ ಪಂದ್ಯದಲ್ಲಿ ಭಾರತ ಸೋಲಲಿ ಎಂದು ಪ್ರಾರ್ಥನೆ ಮಾಡುತ್ತಿತ್ತು. ಆದರೆ ಆ ರೀತಿ ಆಗಲಿಲ್ಲ. ಇದನ್ನು ಓದಿ.. T20 World Cup: ಒಂದು ಕಡೆ ಸೂರ್ಯಕುಮಾರ್ ನಂಬರ್ 1: ಮತ್ತೊಂದೆಡೆ ವಿಶ್ವಕಪ್ ನಲ್ಲಿ ಕೊಹ್ಲಿ ನೇ ನಂಬರ್ 1. ದಾಖಲೆ ಪುಡಿ ಪುಡಿ ಮಾಡಿದ ಕೊಹ್ಲಿ.

ವಿರಾಟ್ ಕೋಹ್ಲಿ (Virat Kohli) ಅವರು ಬುದ್ಧಿವಂತಿಕೆ ಇಂದ ಆಡಿದರು, ಅಮೇಜಿಂಗ್ ಆಗಿದ್ದರು. ಮೊನ್ನೆಯಷ್ಟೇ ಅವರ ಹೋಟೆಲ್ ರೂಮ್ ವಿಡಿಯೋ ಒಂದು ವೈರಲ್ ಆಗಿದ್ದರ ಬಗ್ಗೆ ಪೋಸ್ಟ್ ಮಾಡಿದ್ದರು, ನಾವು ಕೂಡ ಹೋಟೆಲ್ ಗಳಲ್ಲೇ ಇರುತ್ತೇವೆ. ಎಲ್ಲಾ ಸಿಬ್ಬಂದಿಗಳಿಗೆ ಈ ರೀತಿ ಮಾಡಬೇಡಿ, ಆಟಗಾರರಿಗೆ ಪ್ರೈವೆಸಿ ನೀಡಿ, ಅವರ ಪರ್ಸನಲ್ ಲೈಫ್ ಗೆ ನೀವು ಹೋಗುತ್ತಿದ್ದೀರಿ, ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಕೆಲವರು ತಮ್ಮ ಹೆಂಡತಿ ಮಕ್ಕಳ ಜೊತೆಗಿರುತ್ತಾರೆ ಆದರೆ ಕೋಹ್ಲಿ ಅವರು ಎಲ್ಲವನ್ನು ಚೆನ್ನಾಗಿ ಅರೇಂಜ್ ಮಾಡಿ, ಬಹಳ ಶಭ್ರವಾಗಿ ಇಟ್ಟುಕೊಂಡಿದ್ದನ್ನು ನೋಡಿ ಸಂತೋಷವಾಯಿತು..” ಎಂದಿದ್ದಾರೆ ಶೋಯೆಬ್ ಅಕ್ತರ್. ಇದನ್ನು ಓದಿ..T20 World Cup: ಒಂದು ಕಡೆ ಸೂರ್ಯಕುಮಾರ್ ನಂಬರ್ 1: ಮತ್ತೊಂದೆಡೆ ವಿಶ್ವಕಪ್ ನಲ್ಲಿ ಕೊಹ್ಲಿ ನೇ ನಂಬರ್ 1. ದಾಖಲೆ ಪುಡಿ ಪುಡಿ ಮಾಡಿದ ಕೊಹ್ಲಿ.