Gandhada Gudi:ಸಿನಿಮಾ ನೋಡಿದ ದರ್ಶನ್, ಪ್ರಶಾಂತ್ ನೀಲ್ ಹಾಗೂ ಸುದೀಪ್ ಹೇಳಿದ್ದೇನು ಗೊತ್ತೇ?? ಟಾಪ್ ಹೀರೋಗಳಿಗೆ ಗಂಧದ ಗುಡಿ ಹೇಗೆ ಕಂಡಿದೆ ಗೊತ್ತೇ??

Gandhada Gudi:ಸಿನಿಮಾ ನೋಡಿದ ದರ್ಶನ್, ಪ್ರಶಾಂತ್ ನೀಲ್ ಹಾಗೂ ಸುದೀಪ್ ಹೇಳಿದ್ದೇನು ಗೊತ್ತೇ?? ಟಾಪ್ ಹೀರೋಗಳಿಗೆ ಗಂಧದ ಗುಡಿ ಹೇಗೆ ಕಂಡಿದೆ ಗೊತ್ತೇ??

Gandhada Gudi: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರಾಗಿ ಕಾಣಿಸಿಕೊಳ್ಳದೆ, ಪುನೀತ್ ಆಗಿ ನಿಜ ಜೀವನದಲ್ಲಿ ಹೇಗಿರುತ್ತಾರೋ ಅದೇ ರೀತಿ ಅಪ್ಪು ಅವರು ಕಾಣಿಸಿಕೊಂಡಿರುವ ಗಂಧದಗುಡಿ (Gandhadagudi) ಸಿನಿಮಾ ತೆರೆಕಂಡಿದೆ. ಅಪ್ಪು ಅವರ ಈ ಜರ್ನಿ ಶುರುವಾಗಿದ್ದು, 2020ರ ಅಕ್ಟೋಬರ್ 29ರಂದು, 2 ವರ್ಷಗಳ ಬಳಿಕ ಅದೇ ಸಮಯಕ್ಕೆ ಇಡೀ ಕರ್ನಾಟಕ (Karnataka) ಗಂಧದಗುಡಿಯ ದರ್ಶನ ಪಡೆಯುತ್ತಿದೆ ಆದರೆ ಅದನ್ನು ನಮಗೆ ತೋರಿಸುತ್ತಿರುವ ಅಪ್ಪು ಅವರು ನಮ್ಮ ಜೊತೆಗಿಲ್ಲ. ಕರ್ನಾಟಕದ ವನ್ಯ ಸಂಪತ್ತಿನ ಸೊಬಗನ್ನು, ಈವರೆಗೂ ಯಾರು ಕಂಡಿರದ ಕರ್ನಾಟಕದ ಸೌಂದರ್ಯವನ್ನು ಅಪ್ಪು ಅವರು ಅದ್ಭುತವಾಗಿ ತೋರಿಸಿದ್ದಾರೆ.

ಅಷ್ಟೇ ಅಲ್ಲದೆ, ನಮ್ಮೆಲ್ಲರಿಗೂ ಜೀವನಕ್ಕೆ ಕೆಲವು ಮೌಲ್ಯಗಳನ್ನು ಕಲಿಸಿಕೊಟ್ಟಿದ್ದಾರೆ ಅಪ್ಪು. ಸಿನಿಮಾ ನೋಡಿದ ಅಭಿಮಾನಿಗಳು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಸಹ ಸಿನಿಮಾ ನೋಡಿ ಮೆಚ್ಚಿಕೊಂಡು, ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗೂ ಭಾವುಕರಾಗಿದ್ದಾರೆ. ಕಿಚ್ಚ ಸುದೀಪ್ (Kiccha Sudeep) ಅವರು, ನಟ ದರ್ಶನ್ (Darshan) ಅವರು ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ಗಂಧದಗುಡಿ ಸಿನಿಮಾ ನೋಡಿ ಹೇಳಿದ್ದೇನು ಗೊತ್ತಾ? ಮೂವರು ಟ್ವೀಟ್ ಮೂಲಕ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರು ಗುರುವಾರ ಸಂಜೆ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ..

“ಪುನೀತ್ (Puneeth Rajkumar) ಅವರ ಕುಟುಂಬಕ್ಕೆ ಮತ್ತು ಗುಂಧದಗುಡಿಯ ಇಡೀ ತಂಡಕ್ಕೆ ನನ್ನ ಶುಭಾಶಯಗಳು.. ಅಪ್ಪು ಅವರು ಸದಾ ಮಿನುಗುವ ಹಾಗೆ ಗಂಧದಗುಡಿ ಕೂಡ ಸದಾ ಮಿನುಗಲಿ.. ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರೇ ನಿಮಗೆ ಶುಭವಾಗಲಿ.. ನೀವು ಎಲ್ಲವನ್ನು ಎದುರಿಸಿದ್ದೀರಿ.. ಅಪ್ಪು ಅವರ ಎಲ್ಲಾ ಅಭಿಮಾನಿಗಳಿಗೂ ನನ್ನ ಕಡೆಯಿಂದ ಪ್ರೀತಿ ಮತ್ತು ಅಪ್ಪುಗೆ..” ಎಂದು ಟ್ವೀಟ್ ಮಾಡಿದ್ದಾರೆ ಕಿಚ್ಚ. ಅಪ್ಪು ಮತ್ತು ಸುದೀಪ್ ಅವರದ್ದು ಬಹಳ ವರ್ಷಗಳ ಬಾಂಧವ್ಯ. ಚಿಕ್ಕ ವಯಸ್ಸಿನಿಂದಲೇ ಇಬ್ಬರಿಗೂ ಪರಿಚಯ ಇತ್ತು. ಇದನ್ನು ಓದಿ.. T20 world cup: 2 ಕ್ಕೆ ಎರಡು ಪಂದ್ಯಗಳು ಗೆದ್ದರೂ ಕೂಡ ಭಾರತಕ್ಕೆ ಅದೊಂದು ಸಮಸ್ಯೆ ಇದೆ ಎಂದ ಗವಾಸ್ಕರ್. ಹೇಳಿದ್ದೇನು ಗೊತ್ತೇ??

ಇನ್ನು ನಟ ದರ್ಶನ್ (Darshan) ಅವರು ನಿನ್ನೆ ಟ್ವೀಟ್ ಮಾಡಿ, “ನಮ್ಮ ಪುನೀತ್ ರಾಜ್ ಕುಮಾರ್ ಅವರನ್ನು ನೋಡುವ ಸಮಯ ಇದು.. ಗಂಧದಗುಡಿ ತಂಡಕ್ಕೆ ನನ್ನ ಶುಭಾಶಯಗಳು.. ಗಂಧದಗುಡಿ ಒಂದು ಸಿನಿಮಾ ಮಾತ್ರವಲ್ಲ, ಅದೊಂದು ಅನುಭವ..” ಎಂದು ನಟ ದರ್ಶನ್ ಅವರು ಬರೆದಿದ್ದಾರೆ. ದರ್ಶನ್ ಅವರ ತಂದೆಯ ಕಾಲದಿಂದಲೂ ದೊಡ್ಮನೆಯ ಜೊತೆಗೆ ಒಳ್ಳೆಯ ಸಂಬಂಧ ಇದೆ. ದರ್ಶನ್ ಅವರು ಮತ್ತು ಅಪ್ಪು (Appu) ಅವರು ಮತ್ತು ಶಿವಣ್ಣ (Shivarajkumar) ಅವರ ನಡುವೆ ಒಳ್ಳೆಯ ಆತ್ಮೀಯತೆ ಇತ್ತು. ಅಪ್ಪು ಅವರು ನಾಯಕನಾಗಿದ್ದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು, “ಇಂಥ ಅದ್ಭುತವಾದ ಮತ್ತು ಮರೆಯಲಾಗದ ಅನುಭವ ನೀಡಿದ್ದಕ್ಕೆ ಅಶ್ವಿನಿ ಮೇಡಂ, ಅಮೋಘವರ್ಷ (Amoghavarsha) ಮತ್ತು ಇಡೀ ಗಂಧದಗುಡಿ ತಂಡಕ್ಕೆ ಧನ್ಯವಾದಗಳು. ನಮ್ಮ ಕರ್ನಾಟಕವನ್ನು, ಕರ್ನಾಟಕದ ಮಗ ಅಪ್ಪು ಅವರಿಗಿಂತ ಚೆನ್ನಾಗಿ ತೋರಿಸಲು ಬೇರೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ..” ಎಂದು ಪ್ರಶಾಂತ್ ನೀಲ್ ಅವರು ಟ್ವೀಟ್ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರ ಮೇಲೆ ಅಪ್ಪು ಅವರಿಗೆ ಬಹಳ ಅಭಿಮಾನ ಇತ್ತು. ಪ್ರಶಾಂತ್ ನೀಲ್ ಅವರಿಗು ಅಪ್ಪು ಅವರು ಅಂದ್ರೆ ತುಂಬಾ ಪ್ರೀತಿ, ಕೆಜಿಎಫ್2 (KGF2) ಗೆಲುವನ್ನು ಅಪ್ಪು ಅವರಿಗೆ ಅರ್ಪಣೆ ಮಾಡಿದ್ದರು ಪ್ರಶಾಂತ್.