T20 World Cup: ಮುಂದಿನ ಪಂದ್ಯದಲ್ಲಿ ರಾಹುಲ್ ಬದಲಿಗೆ ಪಂತ್ ಆಯ್ಕೆಯ ಕುರಿತು ಮಹತ್ವದ ಹೇಳಿಕೆ ನೀಡಿದ ಬ್ಯಾಟಿಂಗ್ ಕೋಚ್. ಏನು ಗೊತ್ತೇ??

T20 World Cup: ಮುಂದಿನ ಪಂದ್ಯದಲ್ಲಿ ರಾಹುಲ್ ಬದಲಿಗೆ ಪಂತ್ ಆಯ್ಕೆಯ ಕುರಿತು ಮಹತ್ವದ ಹೇಳಿಕೆ ನೀಡಿದ ಬ್ಯಾಟಿಂಗ್ ಕೋಚ್. ಏನು ಗೊತ್ತೇ??

T20 World Cup: ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಈವರೆಗೂ ಆಡಿದ ಎರಡು ಪಂದ್ಯಗಳನ್ನು ಕೂಡ ಗೆದ್ದು ಮುಂಚೂಣಿಯಲ್ಲಿದೆ. ಗ್ರೂಪ್ ಬಿ ಪಾಯಿಂಟ್ಸ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮುಂದಿನ ಪಂದ್ಯಗಳನ್ನು ಗೆಲ್ಲುವ ಭರವಸೆಯಿಂದ, ಆತ್ಮವಿಶ್ವಾಸದಿಂದ ನಾಳೆ ನಡೆಯಲಿರುವ ಭಾರತ ವರ್ಸಸ್ ಸೌತ್ ಆಫ್ರಿಕಾ (India vs South Africa) ಪಂದ್ಯಕ್ಕೆ ಸಜ್ಜಾಗುತ್ತಿದೆ ಭಾರತ ತಂಡ. ನಮ್ಮ ಭಾರತ ತಂಡಕ್ಕೆ ಕಾಡುತ್ತಿರುವ ಒಂದೇ ಆತಂಕ ಕೆ.ಎಲ್.ರಾಹುಲ್ (K L Rahul) ಅವರ ಫಾರ್ಮ್. ಟಿ20 ವಿಶ್ವಕಪ್ (T20 World Cup) ಶುರುವಾಗುವ ಮೊದಲು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್ ಅವರು ಒಳ್ಳೆಯ ಸ್ಕೋರ್ ಮಾಡಿದ್ದರು, ಫಾರ್ಮ್ ಗೆ ಮರಳಿರುವ ಸೂಚನೆ ನೀಡಿದರು. ಆದರೆ ಟೂರ್ನಿ ಶುರುವಾದ ಬಳಿಕ ಉಲ್ಟಾ ಹೊಡೆದಿದೆ.

ಪಾಕಿಸ್ತಾನ್ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ (K L Rahul) ಅವರು 4 ರನ್ ಗಳಿಸಿ ಔಟ್ ಆದರು, ಗುರುವಾರ ನಡೆದ ನೆದರ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 9 ರನ್ ಗಳಿಸಿ ಔಟ್ ಆದರು ಕೆ.ಎಲ್.ರಾಹುಲ್ ಈ ಎರಡು ಪಂದ್ಯಗಳಲ್ಲಿ ರಾಹುಲ್ ಅವರು ಎರಡು ಡಿಜಿಟ್ ಸ್ಕೋರ್ ಮಾಡದೆ ಇರುವುದರಿಂದ ಅವರು ಫಾರ್ಮ್ ನಲ್ಲಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಹಾಗಾಗಿ ಕ್ರಿಕೆಟ್ ತಜ್ಞರು ರಾಹುಲ್ ಅವರ ಬದಲಾಗಿ ರಿಷಬ್ ಪಂತ್ (Rishab Pant) ಅವರನ್ನು ಆರಂಭಿಕ ಬ್ಯಾಟ್ಸ್ಮನ್ ಆಗಿ ಕಳಿಸಬಹುದು ಎನ್ನುವ ಸಲಹೆ ನೀಡುತ್ತಿದ್ದಾರೆ. ವಿಶ್ವಕಪ್ ಟೂರ್ನಿ ಶುರುವಾದ ಬಳಿಕ ಪಂತ್ ಅವರು ಬೆಂಚ್ ಕಾದಿದ್ದಾರೆ, ಆಡುವ ಅವಕಾಶ ಸಿಕ್ಕಿಲ್ಲ. ದಿನೇಶ್ ಕಾರ್ತಿಕ್ (Dinesh Karthik) ಅವರನ್ನು ತಂಡದ ವಿಕೆಟ್ ಕೀಪರ್ ಮತ್ತು ಫಿನಿಷರ್ ಆಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ಓದಿ..T20 world cup: 2 ಕ್ಕೆ ಎರಡು ಪಂದ್ಯಗಳು ಗೆದ್ದರೂ ಕೂಡ ಭಾರತಕ್ಕೆ ಅದೊಂದು ಸಮಸ್ಯೆ ಇದೆ ಎಂದ ಗವಾಸ್ಕರ್. ಹೇಳಿದ್ದೇನು ಗೊತ್ತೇ??

ಹಾಗಾಗಿ ರಿಷಬ್ ಪಂತ್ (Rishab Pant) ಅವರಿಗೆ ಅವಕಾಶ ಕೊಡಬಹುದು ಎನ್ನುವ ಚರ್ಚೆ ಈಗ ನಡೆಯುತ್ತಿದ್ದು, ನಾಳೆ ನಡೆಯುವ ಪಂದ್ಯಕ್ಕಿಂತ ಮೊದಲು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ, ಭಾರತ ತಂಡದ (Team India) ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ (Vikram Rathour) ಅವರಿಗೆ ಇದೇ ಪ್ರಶ್ನೆ ಕೇಳಲಾಗಿದ್ದು, ಅವರು ಉತ್ತರ ಕೊಟ್ಟಿದ್ದು ಹೀಗೆ..”ನಾವು ಇದರ ಬಗ್ಗೆ ನಿಜವಾಗಲೂ ಯೋಚನೆ ಮಾಡಿಲ್ಲ. ಈವರೆಗೂ ಎರಡು ಪಂದ್ಯ ನಡೆದಿದೆ, ನಡೆದಿರುವ ಎಲ್ಲವೂ ಪಂದ್ಯದಲ್ಲಿ ಹೆಚ್ಚು ವ್ಯತ್ಯಾಸ ತಂದಿದೆ ಎಂದು ನನಗೆ ಅನ್ನಿಸುವುದಿಲ್ಲ. ಕೆ.ಎಲ್.ರಾಹುಲ್ ಅವರು ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರಾಕ್ಟೀಸ್ ಮ್ಯಾಚ್ ಗಳಲ್ಲಿ ಉತ್ತಮವಾಗಿ ಸ್ಕೋರ್ ಮಾಡಿದ್ದಾರೆ. ಈ ಕ್ಷಣದಲ್ಲಿ ನಾವು ಆ ರೀತಿಯ ಯೋಚನೆ ಮಾಡುತ್ತಿಲ್ಲ..” ಎಂದು ಹೇಳಿದ್ದಾರೆ. ಪಂದ್ಯಗಳ ಬಗ್ಗೆ ಮಾತನಾಡಿ, ನಾವು ಹೊಂದಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಇದನ್ನು ಓದಿ..T20 world cup: ನಾಯಕ ರೋಹಿತ್ ಮಾತನ್ನು ಕೂಡ ಧಿಕ್ಕರಿಸಿದ ರಾಹುಲ್: ಮುಂದಿನ ಪಂದ್ಯದಲ್ಲಿ ರಾಹುಲ್ ಗೆ ಶಾಕ್?? ಏನಾಗಿದೆ ಗೊತ್ತೇ??