Bengaluru Bulls: ಕೊನೆಯವರೆಗೂ ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಡೆಲ್ಲಿ ಗೆ ಗುಮ್ಮಿದ ಗೂಳಿ. ಅಂಕಪಟ್ಟಿಯಲ್ಲಿ ಏನೆಲ್ಲಾ ಬದಲಾವಣೆ ಗೊತ್ತೇ??

Bengaluru Bulls: ಕೊನೆಯವರೆಗೂ ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಡೆಲ್ಲಿ ಗೆ ಗುಮ್ಮಿದ ಗೂಳಿ. ಅಂಕಪಟ್ಟಿಯಲ್ಲಿ ಏನೆಲ್ಲಾ ಬದಲಾವಣೆ ಗೊತ್ತೇ??

Bengaluru Bulls: ಪ್ರಸ್ತುತ ನಡೆಯುತ್ತಿರುವ ವಿವೋ ಪ್ರೊ ಕಬಡ್ಡಿ ಲೀಗ್ (Vivo Pro Kabaddi League) ನಲ್ಲಿ ಪ್ರಮುಖವಾದ ತಂಡಗಳಲ್ಲಿ ಒಂದು ನಮ್ಮ ಬೆಂಗಳೂರು ಬುಲ್ಸ್ (Bengaluru Bulls) ತಂಡ, ನಿನ್ನೆ ನಡೆದ ಮೊದಲ ಪಂದ್ಯ ಬೆಂಗಳೂರು ಬುಲ್ಸ್ ವರ್ಸಸ್ ದಬಾಂಗ್ ಡೆಲ್ಲಿ (Bengaluru Bulls vs Dabang Delhi) ಪಂದ್ಯದಲ್ಲಿ, ನಮ್ಮ ಬೆಂಗಳೂರು (Bengaluru) ತಂಡ ಅದ್ಭುತವಾಗಿ ಕೊನೆಯ ಎರಡು ನಿಮಿಷಗಳಲ್ಲಿ ಪಂದ್ಯವನ್ನು ಬದಲಾಯಿಸಿ, ಗೆಲುವನ್ನು ತಮ್ಮ ಕಡೆಗೆ ಸೆಳೆದುಕೊಂಡರು. 43-47 ಅಂತರದಲ್ಲಿ ಡೆಲ್ಲಿ ತಂಡವನ್ನು ಸೋಲಿಸಿತು ಬೆಂಗಳೂರು ಬುಲ್ಸ್ (Bengaluru Bulls) ತಂಡ. ಡಬಲ್ ಸೂಪರ್ 10 ಸಹಾಯ ಪಡೆದ ಭರತ್ ಅವರಿಂದ ನಮ್ಮ ಬೆಂಗಳೂರು ತಂಡ ದಬಾಂಗ್ ಡೆಲ್ಲಿ (Dabang Delhi) ತಂಡಕ್ಕೆ ಆಘಾತ ತಂದಿತು. ಟ್ಯಾಕಲ್ ಮಾಡುವ ಮೂಲಕ 6 ಅಂಕ ಗಳಿಸಿದ ಸೌರಭ್ ನಂದಾಲ್ (Sourabh Nandal) ಅವರು ತಂಡದ ಗೆಲುವಿನಲ್ಲಿ ಮುಖ್ಯರಾದರು. ಪಂದ್ಯಗಳು ಮುಗಿಯಲು ಇನ್ನು ಎರಡು ನಿಮಿಷ ಇರುವಾಗ, ಬೆಂಗಳೂರು ಬುಲ್ಸ್ ತಂಡವನ್ನು ಆಲ್ ಔಟ್ ಮಾಡಿದ ಡೆಲ್ಲಿ ದಬಾಂಗ್ ತಂಡ ಗೆಲ್ಲುವ ನಿರೀಕ್ಷೆ ತೋರಿತ್ತು.

ಆದರೆ ಮುಂದಿನ ಒಂದು ನಿಮಿಷದಲ್ಲಿ ದಬಾಂಗ್ ಡೆಲ್ಲಿ ತಂಡವನ್ನು ಆಲ್ ಔಟ್ ಮಾಡಿದ ಬೆಂಗಳೂರು ಬುಲ್ಸ್ ಅವರು ಮತ್ತೆ ಬರದ ಹಾಗೆ ಮಾಡಿತು. ಬೆಂಗಳೂರು ಬುಲ್ಸ್ ತಂಡದ ಸೌರಭ್ (Sourabh Nandal) ಅವರ ಅದ್ಭುತ ಆಟದ ಶೈಲಿಯಿಂದ ದಬಾಂಗ್ 15 ಅಂಕ ಪಡೆದಿರುವ ದಬಾಂಗ್ ಡೆಲ್ಲಿ ತಂಡದ ಕ್ಯಾಪ್ಟನ್ ನವೀನ್ ಕುಮಾರ್ (Naveen Kumar) ಮತ್ತು 15 ಅಂಕ ಪಡೆದ ಅಶು ಮಲಿಕ್ (Ashu Malik) ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಈ ರೋಚಕ ಗೆಲುವಿನಿಂದ ನಮ್ಮ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಿನ್ನೆಯ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಬೆಂಗಳೂರು ತಂಡ 27-18 ಅಂತರದಲ್ಲಿ ಲೀಡಿಂಗ್ ನಲ್ಲಿತ್ತು. ಭರತ್ (Bharat) 9, ನವೀನ್ (Naveen) 5, ವಿಕಾಸ್ ಕಂಡೋಲ (Vikas Kandola) 3, ಇವರು ರೈಡಿಂಗ್ ನಲ್ಲಿ ಇಷ್ಟು ಅಂಕ ಪಡೆದು, ತಂಡ ಲೀಡಿಂಗ್ ನಲ್ಲಿರಲು ಸಹಾಯ ಮಾಡಿದರು. ಸೌರಭ್ ಅವರು ಟ್ಯಾಕಲ್ ನಲ್ಲಿ 2 ಅಂಕ ಗಳಿಸಿದರು. ಇದನ್ನು ಓದಿ.. T20 World Cup: ಮುಂದಿನ ಪಂದ್ಯದಲ್ಲಿ ರಾಹುಲ್ ಬದಲಿಗೆ ಪಂತ್ ಆಯ್ಕೆಯ ಕುರಿತು ಮಹತ್ವದ ಹೇಳಿಕೆ ನೀಡಿದ ಬ್ಯಾಟಿಂಗ್ ಕೋಚ್. ಏನು ಗೊತ್ತೇ??

ನವೀನ್ ಕುಮಾರ್ (Naveen Kumar) ದಬಾಂಗ್ ಡೆಲ್ಲಿ ತಂಡದ ಕ್ಯಾಪ್ಟನ್ ರೈಡಿಂಗ್ ನಲ್ಲಿ ಉತ್ತಮವಾಗಿ ಆಡಿದರು ಸಹ, ಬೆಂಗಳೂರು ಬುಲ್ಸ್ ತಂಡವನ್ನು ಹಿನ್ನಡೆಗೆ ತರಲು ಅದರಿಂದ ಸಾಧ್ಯವಾಗಲಿಲ್ಲ. ದಬಾಂಗ್ ಡೆಲ್ಲಿ ತಂಡ ಈಗಾಗಲೇ ಎರಡು ಬಾರಿ ಸೋತಿದ್ದು, ಈ ಪಂದ್ಯದಲ್ಲಿ ಗೆಲ್ಲುವುದು ಅವರಿಗೆ ಬಹಳ ಮುಖ್ಯವಾಗಿತ್ತು. ಪದೇ ಪದೇ ಹೀಗೆ ಸೋಲುತ್ತಿರುವುದು ದಬಾಂಗ್ ಡೆಲ್ಲಿ ತಂಡದ ಆತ್ಮವಿಶ್ವಾಸ ಕುಗ್ಗುವ ಹಾಗೆ ಮಾಡುತ್ತದೆ. ನಾಯಕ ನವೀನ್ ಕುಮಾರ್ ಅವರನ್ನು ಎದುರಾಳಿ ತಂಡದವರು ನಿಯಂತ್ರಣ ಮಾಡಿದರೆ, ದಬಾಂಗ್ ಡೆಲ್ಲಿ (Dabang Delhi) ತಂಡಕ್ಕೆ ಬಹಳ ಕಷ್ಟವಾಗುತ್ತದೆ. ಈ ಟ್ಯಾಕ್ಟಿಕ್ಸ್ ಅನ್ನು ಅರ್ಥಮಾಡಿಕೊಂಡಿದ್ದ ಬೆಂಗಳೂರು ಬುಲ್ಸ್ (Bengaluru Bulls) ತಂಡ, ಅದನ್ನೇ ಮಾಡಿತು. ಎರಡು ಸಾರಿ ದಬಾಂಗ್ ಡೆಲ್ಲಿ ತಂಡವನ್ನು ಆಲ್ ಔಟ್ ಮಾಡಿ, ಗೆಲುವಿನ ನಗೆ ಬೀರಿದ್ದಾರೆ ನಮ್ಮ ಬೆಂಗಳೂರು ಬುಲ್ಸ್. ಇದನ್ನು ಓದಿ.. T20 world cup: 2 ಕ್ಕೆ ಎರಡು ಪಂದ್ಯಗಳು ಗೆದ್ದರೂ ಕೂಡ ಭಾರತಕ್ಕೆ ಅದೊಂದು ಸಮಸ್ಯೆ ಇದೆ ಎಂದ ಗವಾಸ್ಕರ್. ಹೇಳಿದ್ದೇನು ಗೊತ್ತೇ??