T20 World Cup: ಪಾಕಿಸ್ತಾನ ತಂಡವನ್ನು ಏಕಾಂಗಿಯಾಗಿ ಬಗ್ಗು ಬಡಿದ ಕೋಹ್ಲಿ ರವರ ಕುರಿತು ಮಾತನಾಡಿದ ಪಾಕ್ ಬೌಲರ್ ಅಮಿರ್ ಹೇಳಿದ್ದೇನು ಗೊತ್ತೇ??
T20 World Cup: ಪಾಕಿಸ್ತಾನ ತಂಡವನ್ನು ಏಕಾಂಗಿಯಾಗಿ ಬಗ್ಗು ಬಡಿದ ಕೋಹ್ಲಿ ರವರ ಕುರಿತು ಮಾತನಾಡಿದ ಪಾಕ್ ಬೌಲರ್ ಅಮಿರ್ ಹೇಳಿದ್ದೇನು ಗೊತ್ತೇ??
T20 World Cup: ಟಿ20 ವರ್ಲ್ಡ್ ಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿದ್ದು, ಈ ವರ್ಷ ನಮ್ಮ ಭಾರತ ತಂಡ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ವಿಶೇಷವಾಗಿ ಕೋಹ್ಲಿ (Virat Kohli) ಅವರು ಫಾರ್ಮ್ ಗೆ ಮರಳಿರುವುದು ಭಾರತ ತಂಡಕ್ಕೆ (Team India) ಬಹಳ ಒಳ್ಳೆಯ ವಿಷಯ ಆಗಿದೆ. ಕೋಹ್ಲಿ ಅವರು ಆಡಿದ ಎರಡು ಪಂದ್ಯಗಲ್ಲಿ 82 ಮತ್ತು 62 ರನ್ಸ್ ಗಳಿಸಿದ್ದು, ಎರಡರಲ್ಲೂ ಮ್ಯಾಚ್ ವಿನ್ನರ್ ಆಗಿದ್ದಾರೆ. ವಿಶೇಷವಾಗಿ ಪಾಕಿಸ್ತಾನ್ (Pakistan) ವಿರುದ್ಧದ ಪಂದ್ಯದಲ್ಲಿ ಕೋಹ್ಲಿ ಅವರು ಭಾರತ ತಂಡ ಹೆಚ್ಚು ಒತ್ತಡದಲ್ಲಿದ್ದಾಗ, ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ತಂಡ ಗೆಲ್ಲುವ ಹಾಗೆ ಮಾಡಿದರು. ಅಂದು ಭಾರತ ತಂಡ 6 ಓವರ್ ಗೆ 31 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು, ಭಾರತ ಗೆಲ್ಲುವುದು ಕಷ್ಟಸಾಧ್ಯ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ವಿರಾಟ್ ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಜೊತೆಯಾಟ ಉತ್ತಮವಾದ ಫಲ ನೀಡಿತು.
ಇವರಿಬ್ಬರ ಜೊತೆಯಾಟದಲ್ಲಿ 113 ರನ್ ಗಳು ಬಂದವು. ಕೋಹ್ಲಿ ಅವರು ಪ್ರತ್ಯೇಕವಾಗಿ, 53 ಎಸೆತಗಳಲ್ಲಿ 82 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಅದು ಕೋಹ್ಲಿ (Virat Kohli) ಅವರ ಕೆರಿಯರ್ ನ ಬೆಸ್ಟ್ ಇನ್ನಿಂಗ್ಸ್ ಗಳಲ್ಲಿ ಒಂದು ಎಂದು ಹೇಳಬಹುದು. ನೆದರ್ಲ್ಯಾಂಡ್ ವಿರುದ್ಧ ಸಹ 62 ರನ್ ಗಳಿಸಿ ಅಜೇಯರಾಗಿ ಉಳಿದರು ಕೋಹ್ಲಿ. ಇದರಿಂದ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದ್ದು, ಇದೀಗ ಪಾಕಿಸ್ತಾನ್ ಬೌಲರ್ ಅಮೀರ್ (Amir) ಅವರು ಸಹ ಕೋಹ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ನನ್ನ ಫೇವರೆಟ್ ಬ್ಯಾಟ್ಸ್ಮನ್ ಎಂದು ನಾನು ಸಾಕಷ್ಟು ಇಂಟರ್ವ್ಯೂ ಗಳಲ್ಲಿ ಹೇಳಿದ್ದೇನೆ, ಈ ಜೆನೆರೇಷನ್ ಅದ್ಭುತ ಪ್ಲೇಯರ್ ಅವರು, ಬೇರೆ ಯಾರನ್ನು ಅವರೊಡನೆ ಹೋಲಿಸಲು ಆಗುವುದಿಲ್ಲ. ವಿರಾಟ್ ಅವರಿಗೆ ನಾನು ಕೂಡ ಬೌಲಿಂಗ್ ಮಾಡಿದ್ದೇನೆ. ಕೋಹ್ಲಿ ಅವರ ಕಠಿಣ ಪರಿಶ್ರಮ, ಆಟದ ಬಗ್ಗೆ ಅವರಿಗೆ ಇರುವ ಪಾಸಿಟಿವ್ ಮನಸ್ಥಿತಿ, ಅವರ ಅತ್ಯುತ್ತಮ ಮನೋಭಾವ..ಇದನ್ನು ಓದಿ.. ತಾನೇ ಗಳಿಸಿದ ಸಿಕ್ಸರ್ ನೋಡಿ ದಂಗಾದ ಕೊಹ್ಲಿ: ನೆದರ್ಲ್ಯಾಂಡ್ ವಿರುದ್ಧ ಹೇಗಿತ್ತು ಗೊತ್ತೇ ಆ ಖಡಕ್ ಸಿಕ್ಸರ್. ವಿಡಿಯೋ ಸಮೇತ ನೀವೇ ನೋಡಿ.
ಕೆಲಸದಲ್ಲಿ ಅವರಿಗಿರುವ ನೈತಿಕತೆ, ಒತ್ತಡದ ಸಂದರ್ಭವನ್ನು ಅವರು ಹ್ಯಾಂಡಲ್ ಮಾಡುವ ರೀತಿ, ಇದ್ಯಾವುದರಲ್ಲಿ ಕೋಹ್ಲಿ ಅವರಿಗೆ ಸರಿಸಾಟಿ ಮತ್ತೊಬ್ಬರಿಲ್ಲ.. ಜನರು ಬೇರೆ ಆಟಗಾರರನ್ನು ಅವರೊಡನೆ ಹೋಲಿಸುತ್ತಾರೆ, ನನ್ನ ಪ್ರಕಾರ ವಿರಾಟ್ ಕೋಹ್ಲಿ (Virat Kohli) ಅವರೊಡನೆ ಯಾರನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಪಾಕಿಸ್ತಾನ್ ವಿರುದ್ಧ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು, ಇದರ ಬಗ್ಗೆ ಸ್ವತಃ ವಿರಾಟ್ ಅವರೇ ಹೇಳಿದರು. ಪಾಕಿಸ್ತಾನ್ ಇಂದ ಭಾರತದ ಕಡೆಗೆ ಪಂದ್ಯವನ್ನು ಹೇಗೆ ಸೆಳೆದುಕೊಂಡರು ಎಂದು ಎಲ್ಲರೂ ನೋಡಿದ್ದೀರಿ. ವಿರಾಟ್ ಅವರು ಫಾರ್ಮ್ ನಲ್ಲಿ ಇಲ್ಲ ಎಂದು ಹಲವರು ಹೇಳುತ್ತಾರೆ, ಆದರೆ ಅವರಂತಹ ಅತ್ಯುನ್ನತ ಆಟಗಾರರು ತಂಡ ಒತ್ತಡದಲ್ಲಿದ್ದಾಗ ಖಂಡಿತವಾಗಿಯೂ ಆಡುತ್ತಾರೆ. ವಿರಾಟ್ ಕೋಹ್ಲಿ ಅವರು ಕೂಡ ಅದನ್ನೇ ಮಾಡಿದ್ದಾರೆ. ಆ ರೀತಿಯ ಆಟವನ್ನು ಆಡಲು ವಿರಾಟ್ ಅವರಿಂದ ಮಾತ್ರ ಸಾಧ್ಯ..” ಎಂದು ಹೇಳಿದ್ದಾರೆ ಅಮೀರ್. ಇದನ್ನು ಓದಿ.. ನೆದರ್ಲ್ಯಾಂಡ್ ಪಂದ್ಯದಲ್ಲೂ ವಿಫಲವಾದ ರಾಹುಲ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿರುವಾಗ ವಾಸಿಂ ಜಾಫರ್ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ??