IPL 2023: ಬರುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಹರಾಜಿಗೂ ಮುನ್ನವೇ ಹೊರಹಾಕಬಹುದಾದ ಮೂವರು ಯಾರ್ಯಾರು ಗೊತ್ತೇ??

IPL 2023: ಬರುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಹರಾಜಿಗೂ ಮುನ್ನವೇ ಹೊರಹಾಕಬಹುದಾದ ಮೂವರು ಯಾರ್ಯಾರು ಗೊತ್ತೇ??

IPL 2023: ಮುಂದಿನ ವರ್ಷ ಐಪಿಎಲ್ 2023 (IPL 2023) ಶುರುವಾಗುವ ಮೊದಲು ಐಪಿಎಲ್ ಬಗ್ಗೆ ಅನೇಕ ಒಳ್ಳೆಯ ಸುದ್ದಿಗಳು ಕೇಳಿಬರುತ್ತಿದೆ. ಈ ವರ್ಷ ಭಾರತದಲ್ಲೇ ಹೋಮ್ ಅಂಡ್ ಅವೇ ಮಾದರಿಯಲ್ಲಿ ಐಪಿಎಲ್ ನಡೆಯಲಿರುವುದು ವಿಶೇಷ. 2022ರ ಡಿಸೆಂಬರ್ 2ನೇ ವಾರದಲ್ಲಿ ಐಪಿಎಲ್ ಆಕ್ಷನ್ (IPL Auction) ನಡೆಯಲಿದ್ದು, ಈಗಾಗಲೇ ಯಾವ ತಂಡ ಯಾವ ಆಟಗಾರರ ಮೇಲೆ ಕಣ್ಣಿಟ್ಟಿದ್ದೆ, ಯಾವ ತಂಡ ಯಾವ ಆಟಗಾರನನ್ನು ಕೊಂಡುಕೊಳ್ಳಬಹುದು ಎನ್ನುವ ಚರ್ಚೆ ಶುರುವಾಗಿದೆ. ನಮ್ಮ್ ಆರ್ಸಿಬಿ (RCB) ಅಭಿಮಾನಿಗಳು ಈಗಾಗಲೇ ಈಗಾಗಲೇ ಈ ಸಲ ಕಪ್ ನಮ್ಮದೇ ಎನ್ನಲು ಶುರು ಮಾಡಿದ್ದಾರೆ. ಆರ್ಸಿಬಿ ತಂಡದಲ್ಲಿ ನಾಲ್ಕು ಆಧಾರ ಸ್ಥಂಭಗಳಾಗಿ ವಿರಾಟ್ ಕೋಹ್ಲಿ (Virat Kohli), ಫಾಫ್ ಡು ಪ್ಲೇಸಿಸ್ (Faf Du Plessis), ದಿನೇಶ್ ಕಾರ್ತಿಕ್ (Dinesh Karthik) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಇದ್ದಾರೆ. ಇವರು ಖಾಯಂ ಆಟಗಾರರು ಎನ್ನುವುದರಲ್ಲಿ ಸಂಶಯವಿಲ್ಲ. ಆರ್ಸಿಬಿ ಮೂವರು ಆಟಗಾರರನ್ನು ಹೊರಹಾಕಬಹುದು ಎನ್ನುವ ಚರ್ಚೆ ಈಗ ಶುರುವಾಗಿದ್ದು, ಆ ಮೂವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಕರ್ಣ್ ಶರ್ಮ (Karn Sharma) :- ಆರ್ಸಿಬಿ ತಂಡ ಹೊರಹಾಕಬಹುದಾದ ಆಟಗಾರರ ಪಟ್ಟಿಯಲ್ಲಿ ಇವರು ಇದ್ದಾರೆ.. ಸ್ಪಿನ್ನರ್ ವನಿಂದು ಹಸರಂಗಾ (Vanindu Hasaranga) ಅವರ ಬ್ಯಾಕಪ್ ಸ್ಪಿನ್ನರ್ ಆಗಿ ಇವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು, ಆದರೆ 2022ರ ಐಪಿಎಲ್ ನಲ್ಲಿ ಇವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಜೊತೆಗೆ ಹಸರಂಗ ಅವರು ಕೂಡ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಹಾಗಾಗಿ ಇವರನ್ನು ತಂಡದಲ್ಲಿ ಇರಿಸಿಕೊಂಡರೆ ಹೂಡಿಕೆ ಮಾಡೆಬೇಕಾದ್ದು ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ ಕರಣ್ ಶರ್ಮಾ ಅವರನ್ನು ಆರ್ಸಿಬಿ ತಂಡ ಹೊರಗಿಡಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..T20 World Cup: ಪಾಕಿಸ್ತಾನ ತಂಡವನ್ನು ಏಕಾಂಗಿಯಾಗಿ ಬಗ್ಗು ಬಡಿದ ಕೋಹ್ಲಿ ರವರ ಕುರಿತು ಮಾತನಾಡಿದ ಪಾಕ್ ಬೌಲರ್ ಅಮಿರ್ ಹೇಳಿದ್ದೇನು ಗೊತ್ತೇ??

ಅನುಜ್ ರಾವತ್ (Anuj Rawat):- ಇವರು ವಿಕೆಟ್ ಕೀಪರ್ ಬ್ಯಾಟ್ಸ್ಮನ್, ಆರ್ಸಿಬಿ ತಂಡ ಈ ವರ್ಷ ಇವರನ್ನು 3.4ಕೋಟಿ ನೀಡಿ ಖರೀದಿ ಮಾಡಿತ್ತು. ಆರಂಭದಲ್ಲಿ ಇವರು ಉತ್ತಮ ಪ್ರದರ್ಶನ ನೀಡಿದರು, 8 ಇನ್ನಿಂಗ್ಸ್ ಗಳಲ್ಲಿ 129 ರನ್ ಗಳಿಸಿದರು, ಇವರ ಸರಾಸರಿ 16 ಇತ್ತು. ಮುಂದಿನ ಸೀಸನ್ ನಲ್ಲಿ ಇವರು ಇನ್ನು ಒಳ್ಳೆಯ ಪ್ರದರ್ಶನ ನೀಡುತ್ತಾರೆ ಎನ್ನುವ ನಿರೀಕ್ಷೆ ಅಥವಾ ಭರವಸೆ ಇಲ್ಲ, ಹಾಗಾಗಿ ಇವರನ್ನು ಆರ್ಸಿಬಿ ತಂಡ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಇದನ್ನು ಓದಿ.. T20 world cup: ನಾಯಕ ರೋಹಿತ್ ಮಾತನ್ನು ಕೂಡ ಧಿಕ್ಕರಿಸಿದ ರಾಹುಲ್: ಮುಂದಿನ ಪಂದ್ಯದಲ್ಲಿ ರಾಹುಲ್ ಗೆ ಶಾಕ್?? ಏನಾಗಿದೆ ಗೊತ್ತೇ??

ಸಿದ್ಧಾರ್ಥ್ ಕೌಲ್ (Siddharth Kaul) :- 2018ರಲ್ಲಿ ಭಾರತ ತಂಡದ ಮುಖ್ಯ ಆಟಗಾರರಲ್ಲಿ ಒಬ್ಬರಾಗಿದ್ದರು. 2018ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಓಡಿಐ ನಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಹಾಗಾಗಿ ಆರ್.ಸಿ.ಬಿ (RCB) ತಂಡ ಸಿದ್ಧಾರ್ಥ್ ಕೌಲ್ ಅವರನ್ನು ವೇಗಿ ಬೌಲರ್ ಆಗಿ ಖರೀದಿ ಮಾಡಿತ್ತು, ಆದರೆ ಇವರಿಗೆ ಆಡುವ ಅವಕಾಶ ಸಿಕ್ಕಿದ್ದು ಒಂದೇ ಒಂದು ಪಂದ್ಯದಲ್ಲಿ ಮಾತ್ರ, ಹಾಗಾಗಿ ಸಿದ್ಧಾರ್ಥ್ ಕೌಲ್ ಅವರನ್ನು ಮುಂದಿನ ಸೀಸನ್ ನಲ್ಲಿ ಹೊರಗಿಡಬಹುದು ಎನ್ನಲಾಗುತ್ತಿದೆ. ಇದನ್ನು ಓದಿ.. T20 world cup: 2 ಕ್ಕೆ ಎರಡು ಪಂದ್ಯಗಳು ಗೆದ್ದರೂ ಕೂಡ ಭಾರತಕ್ಕೆ ಅದೊಂದು ಸಮಸ್ಯೆ ಇದೆ ಎಂದ ಗವಾಸ್ಕರ್. ಹೇಳಿದ್ದೇನು ಗೊತ್ತೇ??