T20 World Cup: ಸೌತ್ ಆಫ್ರಿಕಾ ತಂಡದ ವಿರುದ್ಧ ಸೋತ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ಸ್ಟಾರ್ ಪ್ಲೇಯರ್ ಗೆ ಇಂಜುರಿ. ಬಲಾಢ್ಯರೇ ಔಟ್??

T20 World Cup: ಸೌತ್ ಆಫ್ರಿಕಾ ತಂಡದ ವಿರುದ್ಧ ಸೋತ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ಸ್ಟಾರ್ ಪ್ಲೇಯರ್ ಗೆ ಇಂಜುರಿ. ಬಲಾಢ್ಯರೇ ಔಟ್??

T20 World Cup: ಭಾರತ ಕ್ರಿಕೆಟ್ ತಂಡಕ್ಕೆ (Team India) ವೊಂದರ ನಂತರ ಒಂದು ಆಘಾತಗಳು ಎದುರಾಗುತ್ತಲೇ ಇದೆ. ಆಟಗಾರರು ಇಂಜುರಿಗೆ ಒಳಗಾಗುವ ಸಮಸ್ಯೆಗಳು ಕಡಿಮೆ ಆಗುವ ಹಾಗೆ ತೋರುತ್ತಿಲ್ಲ. ಈಗಾಗಲೇ ಭಾರತ ತಂಡದ ಸ್ಟಾರ್ ಆಟಗಾರರು ಇಂಜುರಿ ಸಮಸ್ಯೆ ಇಂದ ತಂಡದಿಂದ ದೂರ ಉಳಿದಿದ್ದಾರೆ. ಅದುವೇ ಭಾರತಕ್ಕೆ ನಷ್ಟವಾಗಿತ್ತು. ಇದೀಗ ಭಾರತದ ಮತ್ತೊಬ್ಬ ಸ್ಟಾರ್ ಬ್ಯಾಟ್ಸ್ಮನ್ ಗೆ ಇಂಜುರಿ ಎದುರಾಗುವ ಹಾಗೆ ತೋರುತ್ತಿದೆ. ಆ ಸ್ಟಾರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ (Dinesh Karthik) ಅವರು, ನಿನ್ನೆ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ (India vs South Africa) ಪಂದ್ಯದಲ್ಲಿ ಸೌತ್ ಆಫ್ರಿಕಾ ಇನ್ನಿಂಗ್ಸ್ ನಡೆಯುವಾಗಲೇ ದಿನೇಶ್ ಕಾರ್ತಿಕ್ ಫೀಲ್ಡ್ ಇಂದ ಹೊರನಡೆದರು.

ಸೊಂಟದ ಭಾಗದಲ್ಲಿ ತೀವ್ರವಾಗಿ ನೋವು ಕಾಣಿಸಿಕೊಂಡ ಕಾರಣ ದಿನೇಶ್ ಕಾರ್ತಿಕ್ (Dinesh Karthik) ಅವರು, ಅರ್ಧದಲ್ಲಿಯೇ ನೋವಿನಲ್ಲಿ ಸೊಂಟದ ಬಳಿ ಕೈ ಇಟ್ಟುಕೊಂಡು ಮೈದಾನದಿಂದ ಹೊರ ಹೋದರು, ಬಳಿಕ ರಿಷಬ್ ಪಂತ್ (Rishab Pant) ಅವರು ಮೈದಾನಕ್ಕೆ ಬಂದು ಉಳಿದ ಓವರ್ ಗಳ ಬ್ಯಾಟಿಂಗ್ ಪೂರ್ಣಗೊಳಿಸಿದರು. ಈ ದೃಶ್ಯ ನೋಡಿದ ಎಲ್ಲರಿಗೂ ಈಗ ದಿನೇಶ್ ಕಾರ್ತಿಕ್ ಅವರ ಆರೋಗ್ಯದ ಬಗ್ಗೆ ಆತಂಕ ಶುರುವಾಗಿದೆ. ದಿನೇಶ್ ಕಾರ್ತಿಕ್ ಅವರಿಗು ಇಂಜುರಿ ಆದರೆ ಭಾರತಕ್ಕೆ ತುಂಬಲಾರದ ನಷ್ಟ ಆಗುವುದು ಖಂಡಿತ. ವಿಶ್ವಕಪ್ ಗೆಲ್ಲುವಲ್ಲಿ ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ಅವರ ಪಾತ್ರ ಬಹುಮುಖ್ಯವಾದದ್ದು. ಭಾರತ ತಂಡ ಬಲವಾದ ವಿಶ್ವಾಸ ಇಟ್ಟಿದ್ದ ದಿನೇಶ್ ಕಾರ್ತಿಕ್ ಅವರಿಗೆ ಹೀಗಾಗಿರುವುದು ಬಿಸಿಸಿಐ (BCCI) ಗೆ ಆತಂಕ ಹೆಚ್ಚಿಸಿದೆ. ಇದನ್ನು ಓದಿ.. T20 World Cup: ಪಾಕಿಸ್ತಾನ ತಂಡವನ್ನು ಏಕಾಂಗಿಯಾಗಿ ಬಗ್ಗು ಬಡಿದ ಕೋಹ್ಲಿ ರವರ ಕುರಿತು ಮಾತನಾಡಿದ ಪಾಕ್ ಬೌಲರ್ ಅಮಿರ್ ಹೇಳಿದ್ದೇನು ಗೊತ್ತೇ??

ದಿನೇಶ್ ಕಾರ್ತಿಕ್ (Dinesh Karthik) ಅವರ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಬಿಸಿಸಿಐ ಆಗಲಿ ಐಸಿಸಿ ಆಗಲಿ ಇನ್ನು ಅಧಿಕೃತ ಮಾಹಿತಿ ನೀಡಿಲ್ಲ, ಆದರೆ ನಿನ್ನೆಯ ಪಂದ್ಯ ಮುಗಿದ ಬಳಿಕ ಭುವನೇಶ್ವರ್ ಕುಮಾರ್ (Bhuvaneshwar Kumar) ಅವರು ಮಾಧ್ಯಮದ ಎದುರು ಮಾತನಾಡುವಾಗ ಮ್ಯಾಚ್ ಬಳಿಕ ಕಾರ್ತಿಕ್ ಅವರು observation ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಭುವನೇಶ್ವರ್ ಕುಮಾರ್ ಅವರಿಗೆ ದಿನೇಶ್ ಕಾರ್ತಿಕ್ ಅವರ ಆರೋಗ್ಯದ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರ ಕೊಟ್ಟಿರುವ ಭುವನೇಶ್ವರ್ ಕುಮಾರ್ ಅವರು, “ಅವರು ಬ್ಯಾಟ್ ಇಂದ ಹೊಡೆಸಿಕೊಂಡಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಇದಾದ ಬಳಿಕ ನಾನು ಅವರನ್ನು ಭೇಟಿ ಮಾಡಿಲ್ಲ..ನಾನು ಹೋಟೆಲ್ ಗೆ ವಾಪಸ್ ಹೋದ ಬಳಿಕ ಏನಾಗುತ್ತಿದೆ ಎಂದು ಗೊತ್ತಾಗುತ್ತದೆ, ಫಿಸಿಯೋ ಅವರಃ ರಿಪೋರ್ಟ್ ನೀಡಿದ ಬಳಿಕ ಸ್ಪಷ್ಟ ಮಾಹಿತಿ ಸಿಗುತ್ತದೆ..” ಎಂದಿದ್ದಾರೆ ಭುವನೇಶ್ವರ್ ಕುಮಾರ್. ಇದನ್ನು ಓದಿ.. IPL 2023: ಬರುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಹರಾಜಿಗೂ ಮುನ್ನವೇ ಹೊರಹಾಕಬಹುದಾದ ಮೂವರು ಯಾರ್ಯಾರು ಗೊತ್ತೇ??