T20 World Cup: ಪಂದ್ಯ ಸೋತ ತಕ್ಷಣ ಅಸಮಾಧಾನ ವ್ಯಕ್ತ ಪಡಿಸಿದ ನಾಯಕ ರೋಹಿತ್ ಶರ್ಮ; ಸೋಲಿಗೆ ಕಾರಣ ತಿಳಿಸಿ ದೂಷಿಸಿದ್ದು ಯಾರನ್ನು ಗೊತ್ತೇ??

T20 World Cup: ಪಂದ್ಯ ಸೋತ ತಕ್ಷಣ ಅಸಮಾಧಾನ ವ್ಯಕ್ತ ಪಡಿಸಿದ ನಾಯಕ ರೋಹಿತ್ ಶರ್ಮ; ಸೋಲಿಗೆ ಕಾರಣ ತಿಳಿಸಿ ದೂಷಿಸಿದ್ದು ಯಾರನ್ನು ಗೊತ್ತೇ??

T20 World Cup: ನಿನ್ನೆ ಪರ್ತ್ ನಲ್ಲಿ ನಡೆಡ್ಸ್ ಭಾರತ ವರ್ಸಸ್ ಸೌತ್ ಆಫ್ರಿಕಾ (India vs South Africa) ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತು. ವಿಶ್ವಕಪ್ ನಲ್ಲಿ ಭಾರತಕ್ಕೆ ಇದು ಮೊದಲ ಸೋಲು. ಎರಡು ತಂಡಗಳ ವೇಗಿ ಬೌಲರ್ ಗಳಿಗೆ ಪಿಚ್ ಅನುಕೂಲಕರವಾಗಿತ್ತು, ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು (Team India) ಸೌತ್ ಆಫ್ರಿಕಾ ವೇಗಿಗಳ ದಾಳಿಗೆ ವಿಕೆಟ್ಸ್ ಒಪ್ಪಿಸಿತು, ಕೆ.ಎಲ್.ರಾಹುಲ್ (K L Rahul) 9 ರನ್ ಗಳಿಸಿ ಔಟ್ ಆದರೆ, ರೋಹಿತ್ ಶರ್ಮಾ (Rohit Sharma) 15 ಗಳಿಸಿ ಔಟ್ ಆದರು, ಇನ್ನು ವಿರಾಟ್ ಕೋಹ್ಲಿ (Virat Kohli) ಅವರು ಸಹ ಕೇವಲ 12 ರನ್ ಗಳಿಸಿ ಔಟ್ ಆದರು. ದಿನೇಶ್ ಕಾರ್ತಿಕ್ (Dinesh Karthik) ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ಸೂರ್ಯಕುಮಾರ್ ಯಾದವ್ (Suryakumar Yadav) ಅವರೊಬ್ಬರೇ ಒಂಟಿಯಾಗಿ ಭಾರತ ತಂಡದ ರನ್ಸ್ ಹೆಚ್ಚಿಸಿದರು.

ಸೂರ್ಯಕುಮಾರ್ ಯಾದವ್ ಅವರು ಯಾವುದಕ್ಕೂ ಹೆದರದೆ, ಯಾರ ಬೌಲಿಂಗ್ ದಾಳಿಗೂ ಆತಂಕಕ್ಕೆ ಒಳಗಾಗದೆ, 40 ಎಸೆತಗಳಲ್ಲಿ ಬರೋಬ್ಬರಿ 68 ರನ್ ಗಳಿಸಿ, ಭಾರತ ತಂಡದ ಸ್ಕೋರ್ 134 ಕ್ಕೆ ಹೋಗುವುದಕ್ಕೆ ಮುಖ್ಯ ಕಾರಣವಾದರು. ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಷದೀಪ್ ಸಿಂಗ್ (Arshdeep Singh) ಅವರು ಮೊದಲ ಓವರ್ ನಲ್ಲೇ ಕ್ವಿಂಟನ್ ಡಿ ಕಾಕ್ (Quinton De Cock) ಅವರ ವಿಕೆಟ್ ಪಡೆದರು, ಮೊಹಮ್ಮದ್ ಶಮಿ (Mohammad Shami) ಅವರು ಸಹ ವಿಕೆಟ್ಸ್ ಪಡೆದರು. ಆದರೆ 134 ರನ್ಸ್ ಡಿಫೆಂಡ್ ಮಾಡಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ, ಹಲವು ಬಾರಿ ರನೌಟ್ ಮಾಡುವ ಅವಕಾಶ ಮಿಸ್ ಮಾಡಿಕೊಂಡರು. ಹಾಗೆಯೇ, ಕ್ಯಾಚ್ ಗಳನ್ನು ಕೈಚೆಲ್ಲಿ, ಕೊನೆಯ ಓವರ್ ನಲ್ಲಿ ಸೌತ್ ಆಫ್ರಿಕಾ ಗೆದ್ದಿತು. ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮಾತನಾಡಿದ್ದು, ಸೋಲಿಗೆ ಕಾರಣ ಏನು ಎಂದು ತಿಳಿಸಿದ್ದಾರೆ. ಇದನ್ನು ಓದಿ.. T20 World Cup: ಸೌತ್ ಆಫ್ರಿಕಾ ತಂಡದ ವಿರುದ್ಧ ಸೋತ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ಸ್ಟಾರ್ ಪ್ಲೇಯರ್ ಗೆ ಇಂಜುರಿ. ಬಲಾಢ್ಯರೇ ಔಟ್??

“ಗ್ರೌಂಡ್ ನಲ್ಲಿ ನಾವು ಒಳ್ಳೆಯ ಪ್ರದರ್ಶನ ನೀಡಲಿಲ್ಲ. ನಾವು ಒಳ್ಳೆಯ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ, ಹಾಗಾಗಿ ಇದು ಹೊಸದಲ್ಲ. ಫೀಲ್ಡಿಂಗ್ ನಲ್ಲಿ ನಾವು ಸುಧಾರಿಸಬೇಕು.. ಗೆಲ್ಲುವ ಅವಕಾಶವನ್ನು ನಾವು ಹಿಡಿದಿಟ್ಟುಕೊಳ್ಳಲಿಲ್ಲ, ನಾನು ಮತ್ತು ಇನ್ನು ಕೆಲವರು ರನ್ ಔಟ್ ಮಾಡುವ ಅವಕಾಶ ಮಿಸ್ ಮಾಡಿಕೊಂಡೆವು..ಸ್ಪಿನ್ನರ್ ಗಳ ವಿಷಯದಲ್ಲಿ ಹಿಂದಿನ ಪಂದ್ಯಗಳಲ್ಲಿ ಆಗಿದ್ದನ್ನು ನೋಡಿದ್ದ ನಾನು, ಕೊನೆಯ ಓವರ್ ಗಿಂತ ಮೊದಲು, ಅಶ್ವಿನ್ ಅವರನ್ನು ಕಳಿಸಿ ಓವರ್ ಮುಗಿಸಬೇಕು ಎಂದುಕೊಂಡೆ. ವೇಗಿಗಳು ಕರೆಕ್ಟ್ ಆದ ಓವರ್ ಗಳಲ್ಲಿ ಬೌಲಿಂಗ್ ಮಾಡಬೇಕು ಎಂದುಕೊಂಡಿದ್ದೆ..ಹೊಸ ಬ್ಯಾಟ್ಸ್ಮನ್ ಬಂದಿದ್ದರಿಂದ ಅದು ಸರಿಯಾದ ಸಮಯ ಆಗಿದ್ದರಿಂದ ಅಶ್ವಿನ್ (R Ashwin) ಬೌಲಿಂಗ್ ಮಾಡಿದರು.” ಎಂದು ನಿನ್ನೆಯ ಪಂದ್ಯದಲ್ಲಿ ಆಗಿದ್ದಕ್ಕೆ ಉತ್ತರ ಕೊಟ್ಟಿದ್ದಾರೆ ರೋಹಿತ್ ಶರ್ಮಾ (Rohit Sharma). ಇದನ್ನು ಓದಿ.. IPL 2023: ಬರುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಹರಾಜಿಗೂ ಮುನ್ನವೇ ಹೊರಹಾಕಬಹುದಾದ ಮೂವರು ಯಾರ್ಯಾರು ಗೊತ್ತೇ??