T20 World Cup: ಸೋತ ಮೇಲೆ ಕಠಿಣ ನಿರ್ಧಾರ: ಒಬ್ಬರು ಇಬ್ಬರು ಅಲ್ಲ, ಮೂವರಿಗೆ ಗೇಟ್ ಪಾಸ್?? ಹೊರಹೋಗಬಹುದಾದ ಆಟಗಾರರು ಯಾರು ಗೊತ್ತೇ??
T20 World Cup: ಸೋಲಿನ ನಂತರ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗಲಿದೆಯೇ ಭಾರತ?? ಒಬ್ಬರು ಇಬ್ಬರ, ಮೂವರಿಗೆ ಗೇಟ್ ಪಾಸ್?? ಹೊರಹೋಗಬಹುದಾದ ಆಟಗಾರರು ಯಾರು ಗೊತ್ತೇ??
T20 World Cup: ನಮ್ಮ ಭಾರತ ತಂಡ ಟಿ20 ವಿಶ್ವಕಪ್ ನಲ್ಲಿ ಉತ್ತಮವಾಗಿ ಆಟವಾಡುತ್ತಾ, ಎಲ್ಲರ ಮೆಚ್ಚಿನ ತಂಡ ಎನ್ನುವ ಹೆಸರನ್ನು ಪಡೆದುಕೊಂಡಿದೆ.. ಈ ವರ್ಷ ಟಿ20 ವಿಶ್ವಕಪ್ ಗೆಲ್ಲಲೇಬೇಕು ಎಂದು ನಮ್ಮ ತಂಡ ಕೂಡ ಹಠದಲ್ಲಿ ಸಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ನಮ್ಮ ತಂಡ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಎರಡು ಪಂದ್ಯಗಳನ್ನು ಅದ್ಭುತವಾಗಿ ಆಡಿ ಜಯ ಗಳಿಸಿದರು ಸಹ, ಮೂರನೇ ಪಂದ್ಯದಲ್ಲಿ ಸೋತಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ. ನಮ್ಮ ತಂಡದಲ್ಲಿ ಈಗ ಮೂಯೂ ಬದಲಾವಣೆ ಮಾಡಬೇಕು ಎಂದು ಬಿಸಿಸಿಐ (BCCI) ನಿರ್ಧಾರ ಮಾಡಿದೆ.
ಪ್ರತಿ ಪಂದ್ಯರದಲ್ಲಿ ಅದೇ ಆಟಗಾರರು ಆಟವಾಡದೆ, ಆಟಗಾರರನ್ನು ಬದಲಾಯಿಸಿ ಆಡಿಸುವುದು ಒಳ್ಳೆಯದು ಎನ್ನುವ ಅಭಿಪ್ರಾಯ ಸಹ ಇದೆ. ಆಟಗಾರರು ಬದಲಾದರೆ, ಎಲ್ಲರಿಗೂ ಅವಕಾಶ ಸಿಗುತ್ತದೆ. ಜೊತೆಗೆ ಎಲ್ಲರೂ ಒಳ್ಳೆಯ ರೀತಿಯಲ್ಲಿ ಆಡುತ್ತಾ ಹೋದರೆ ವಿಶ್ವಕಪ್ ಗೆಲ್ಲಲು ಸುಲಭವಾಗುತ್ತದೆ. ಭಾರತ ತಂಡ ಪಾಕಿಸ್ತಾನ್ (India vs Pakistan) ವಿರುದ್ಧ ಮತ್ತು ನೆದರ್ಲ್ಯಾಂಡ್ (India vs Netherlands) ವಿರುದ್ಧ ಅದ್ಭುತವಾದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿತು ಆದರೆ ಸೌತ್ ಆಫ್ರಿಕಾ (India be South Africa) ತಂಡದ ಎದುರು ಅದು ನಡೆಯಲಿಲ್ಲ. ಇದನ್ನು ಓದಿ.. T20 World Cup: ಪಂದ್ಯ ಸೋತ ತಕ್ಷಣ ಅಸಮಾಧಾನ ವ್ಯಕ್ತ ಪಡಿಸಿದ ನಾಯಕ ರೋಹಿತ್ ಶರ್ಮ; ಸೋಲಿಗೆ ಕಾರಣ ತಿಳಿಸಿ ದೂಷಿಸಿದ್ದು ಯಾರನ್ನು ಗೊತ್ತೇ??
ನಮ್ಮ ತಂಡದ ಸ್ಟಾರ್ ಆಟಗಾರರೆ ಸೌತ್ ಆಫ್ರಿಕಾ (South Africa) ತಂಡದ ವೇಗಿಗಳ ಆರ್ಭಟಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ತೆರಳಿದರು. ನಮ್ಮ ತಂಡದ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಎಂಥಹ ಸಮಸ್ಯೆಗಳು ಇದೆ ಎಂದು ಗೊತ್ತಾಗಿದ್ದು, ಭಾರತ ತಂಡವು ಈ ಸಮಸ್ಯೆಗಳನ್ನು ಬಗೆಹರಿಸುಕೊಳ್ಳಬೇಕು. ಮೊದಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಫಾರ್ಮ್ ನಲ್ಲಿ ಸ್ಥಿರತೆ ಇಲ್ಲದೆ ಇರುವುದು ಒಂದು ಕಾರಣ ಆಗದೆ. ನಮ್ಮ ತಂಡದಲ್ಲಿ ಇರುವ ಪ್ರಮುಖ ತೊಂದರೆಗಳಿಂದ ಮೂವರು ಪ್ರಮುಖ ಆಟಗಾರರನ್ನು ಹೊರಗೆ ಹಾಕಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಆ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಮೊದಲಿಗೆ ಓಪನರ್ ಕೆ.ಎಲ್.ರಾಹುಲ್ (K L Rahul) ಅವರು, ರಾಹುಲ್ ಅವರು ಹಿಂದೆ ಸಾಕಷ್ಟು ಅದ್ಭುತವಾದ ಇನ್ನಿಂಗ್ಸ್ ನೀಡಿದ್ದಾರೆ. ಆದರೆ ಏಷ್ಯಾಕಪ್ (Asiacup 2022) ಇಂದ ವೈಫಲ್ಯ ಅನುಭವಿಸುತ್ತಿದ್ದಾರ. ಇಂಜುರಿ ಇಂದ ಚೇತರಿಸಿಕೊಂಡು ಬಂದ ನಂತರ ರಾಹುಲ್ ಅವರು ಲಯ ಕಂಡುಕೊಳ್ಳದೆ ಕಷ್ಟಪಡುತ್ತಿದ್ದಾರೆ. ಇವರನ್ನು ವಿಶ್ವಕಪ್ ಗೆ ಆಯ್ಕೆ ಮಾಡುವಾಗ ಟೀಕೆಗಳು ವ್ಯಕ್ತವಾಗಿದ್ದವು, ಇದೀಗ ವಿಶ್ವಕಪ್ ನ ಎಲ್ಲಾ ಪಂದ್ಯಗಳಲ್ಲು ರಾಹುಲ್ ಅವರು ಸಿಂಗಲ್ ಡಿಜಿಟ್ ಗಳಿಸಿ ಔಟ್ ಆಗಿರುವುದರಿಂದ, ಓಪನರ್ ಆಗಿ ರಾಹುಲ್ ಅವರ ಬದಲಾಗಿ ರಿಷಬ್ ಪಂತ್ (Rishab Pant) ಅವರನ್ನು ಆಯ್ಕೆ ಮಾಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದನ್ನು ಓದಿ.. T20 World Cup: ಸೌತ್ ಆಫ್ರಿಕಾ ತಂಡದ ವಿರುದ್ಧ ಸೋತ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ಸ್ಟಾರ್ ಪ್ಲೇಯರ್ ಗೆ ಇಂಜುರಿ. ಬಲಾಢ್ಯರೇ ಔಟ್??
ಎರಡನೆಯದಾಗಿ ದಿನೇಶ್ ಕಾರ್ತಿಕ್ ಅವರು (Dinesh Karthik). ಇವರು ಈಗ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ಕಾರ್ತಿಕ್ ಅವರನ್ನು ಭಾರತ ತಂಡವು ಫಿನಿಷರ್ ಮತ್ತು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದು, ಎಷ್ಟೇ ಒತ್ತಡ ಇದ್ದರು ಉತ್ತಮವಾಗಿ ಅಡಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ದಿನೇಶ್ ಕಾರ್ತಿಕ್ ಅವರು ಈಗ ಇಂಜುರಿಗೆ ಒಳಗಾಗಲಿದ್ದಾರೆ. ಪ್ರಸ್ತುತ ಕಾರ್ತಿಕ್ ಅವರು ಒಬ್ಸರ್ವೇಷನ್ ನಲ್ಲಿದ್ದು, ಅವರ ಬದಲಾಗಿ ಆಲ್ ರೌಂಡರ್ ದೀಪಕ್ ಹೂಡಾ (Deepak Hooda) ಅವರನ್ನು ಆಯ್ಕೆ ಮಾಡಿದರೆ ಒಳ್ಳೆಯದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮೂರನೆಯದಾಗಿ ಆರ್.ಅಶ್ವಿನ್ (R Ashwin), ಇವರು ಅನುಭವಿ ಬೌಲರ್ ಆಗಿದ್ದು, ಈ ಹಿಂದೆ ಬೌಲರ್ ಆಗಿ ಮತ್ತು ಬ್ಯಾಟ್ಸ್ಮನ್ ಆಗಿ ಹಲವು ಪಂದ್ಯಗಳಲ್ಲಿ ಅತ್ಯುತಮ ಪ್ರದರ್ಶನ ನೀಡಿದ್ದಾರೆ. ಆದರೆ ವಿಶ್ವಕಪ್ ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ನಿರೀಕ್ಷೆಯ ಮಟ್ಟಕ್ಕೆ ಇವರ ಪ್ರದರ್ಶನ ಇರಲಿಲ್ಲ. ವಿಕೆಟ್ಸ್ ತೆಗೆದಿರುವುದು, ಮತ್ತು ರನ್ಸ್ ಕಂಟ್ರೋಲ್ ಮಾಡುವುದು ಎರಡು ಸಹ ಕಡಿಮೆ ಆಗಿದೆ. ಈ ಕಾರಣದಿಂದ ಅಶ್ವಿನ್ ಅವರನ್ನು ಪ್ಲೇಯಿಂಗ್ 11 ಇಂದ ದೂರವಿಟ್ಟು, ಯುಜವೇಂದ್ರ ಚಾಹಲ್ (Yuzvendra Chahal) ಅವರನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎನ್ನುವ ಮಾಹಿತಿ ಸಿಕ್ಕಿದೆ.. ಇದನ್ನು ಓದಿ..T20 World Cup: ಮುಂದಿನ ಪಂದ್ಯದಲ್ಲಿ ರಾಹುಲ್ ಬದಲಿಗೆ ಪಂತ್ ಆಯ್ಕೆಯ ಕುರಿತು ಮಹತ್ವದ ಹೇಳಿಕೆ ನೀಡಿದ ಬ್ಯಾಟಿಂಗ್ ಕೋಚ್. ಏನು ಗೊತ್ತೇ??