T20 World Cup: ವಿಶ್ವಕಪ್ ನಂತರ ನಡೆಯುವ ನ್ಯೂಜಿಲ್ಯಾಂಡ್ ಸರಣಿಗೆ ತಂಡ ಘೋಷಣೆ ಮಾಡಿದ ಆಯ್ಕೆ ಸಮಿತಿ: ಸ್ಥಾನ ಪಡೆದವರು ಯಾರ್ಯಾರು ಗೊತ್ತೇ??

T20 World Cup: ವಿಶ್ವಕಪ್ ನಂತರ ನಡೆಯುವ ನ್ಯೂಜಿಲ್ಯಾಂಡ್ ಸರಣಿಗೆ ತಂಡ ಘೋಷಣೆ ಮಾಡಿದ ಆಯ್ಕೆ ಸಮಿತಿ: ಸ್ಥಾನ ಪಡೆದವರು ಯಾರ್ಯಾರು ಗೊತ್ತೇ??

T20 World Cup: ನವೆಂಬರ್ 13ರಂದು ಟಿ20 ವಿಶ್ವಕಪ್ ಮುಗಿದ ಬಳಿಕ ನವೆಂಬರ್ 18ರಿಂದ ನ್ಯೂಜಿಲೆಂಡ್ ನಲ್ಲಿ ಭಾರತ ತಂಡದ ಪ್ರವಾಸ ನಡೆಯಲಿದ್ದು, ನ್ಯೂಜಿಲೆಂಡ್ ವರ್ಸಸ್ ಭಾರತ (India vs New Zealand) ಟಿ20 ಸರಣಿ ಪಂದ್ಯಗಳು ಮತ್ತು ಏಕದಿನ ಸರಣಿ ಪಂದ್ಯಗಳು ನಡೆಯಲಿದೆ. ಇದಕ್ಕಾಗಿ ಬಿಸಿಸಿಐ (BCCI) ತಂಡವನ್ನು ಪ್ರಕಟಣೆ ಮಾಡಿದ್ದು, ಇದರಲ್ಲಿ ಟಿ20 ಸರಣಿ ಪಂದ್ಯದ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಆಯ್ಕೆ ಮಾಡಲಾಗಿದ್ದು, ಓಡಿಐ ತಂಡವನ್ನು ಶಿಖರ್ ಧವನ್ (Shikhar Dhawan) ಅವರು ಮುನ್ನಡೆಸಲಿದ್ದಾರೆ. ಈ ಎರಡು ತಂಡಕ್ಕೂ ರಿಷಬ್ ಪಂತ್ (Rishab Pant) ಅವರು ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ಇನ್ನು ಬಹಳ ಸಮಯದಿಂದ ನ್ಯಾಷನಲ್ ಟೀಮ್ ಗೆ ಕಂಬ್ಯಾಕ್ ಮಾಡಬೇಕು ಎಂದು ಬಯಸಿದ್ದ ಉಮ್ರಾನ್ ಮಲಿಕ್ (Umran Malik) ಅವರಿಗೆ ಸ್ಥಾನ ಸಿಕ್ಕಿದೆ. ಈ ಸರಣಿಗಳಿಗೆ ದಿನೇಶ್ ಕಾರ್ತಿಕ್ (Dinesh Karthik) ಅವರನ್ನು ಮತ್ತು ಮೊಹಮ್ಮದ್ ಶಮಿ (Mohammad Shami) ಅವರನ್ನು ಆಯ್ಕೆ ಮಾಡಲಾಗಿಲ್ಲ.. ಇನ್ನು ವಿರಾಟ್ ಕೋಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಮತ್ತು ಕೆ.ಎಲ್.ರಾಹುಲ್ (K L Rahul) ಅವರಿಗೆ ಈ ಟೂರ್ನಿ ಇಂದ ವಿಶ್ರಾಂತಿ ನೀಡಲಾಗಿದೆ. ಎಲ್ಲರೂ ಇಷ್ಟಪಡುವ ಸ್ಪರ್ಧಿ ಸಂಜು ಸ್ಯಾಮ್ಸನ್ (Sanju Samson) ಅವರು ಕೂಡ ಟಿ20 ಮತ್ತು ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಯುವ ಪ್ರತಿಭಾನ್ವಿತ ಆಟಗಾರರಿಗೆ ಸ್ಥಾನ ನೀಡಲಾಗಿದೆ, ಶುಭಮನ್ ಗಿಲ್ (Shubman Gill), ಇಶಾನ್ ಕಿಶನ್ (Ishan Kishan), ಮೋಹಮ್ಮದ್ ಸಿರಾಜ್ (Mohammad Siraj) ಆಯ್ಕೆಯಾಗಿದ್ದಾರೆ. ಇದನ್ನು ಓದಿ..T20 World Cup: ಸೋತ ಮೇಲೆ ಕಠಿಣ ನಿರ್ಧಾರ: ಒಬ್ಬರು ಇಬ್ಬರು ಅಲ್ಲ, ಮೂವರಿಗೆ ಗೇಟ್ ಪಾಸ್?? ಹೊರಹೋಗಬಹುದಾದ ಆಟಗಾರರು ಯಾರು ಗೊತ್ತೇ??

ಭಾರತ ವರ್ಸಸ್ ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ (India vs South Africa ODI) ಒಳ್ಳೆಯ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಕುಲದೀಪ್ ಸಿಂಗ್ (Kuldeep Singh) ಅವರನ್ನು ಸಹ ಆಯ್ಕೆ ಮಾಡಿಕೊಳ್ಳುಲಾಗಿದೆ. ಕುಲದೀಪ್ ಸಿಂಗ್ ಅವರು, ಏಕದಿನ ಸರಣಿಯ ಒಂದು ಪಂದ್ಯದಲ್ಲಿ 18 ರನ್ ನೀಡಿ 4 ವಿಕೆಟ್ಸ್ ಪಡೆದು, ಎಲ್ಲರ ಗಮನ ಸೆಳೆದಿದ್ದರು. ಹಾಗೆಯೇ ಶ್ರೇಯಸ್ ಅಯ್ಯರ್ ಅವರು ಸಹ, ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ 153 ಗಳಿಸಿದ್ದರು. ಉಮ್ರಾನ್ ಮಲಿಕ್ (Umran Malik) ಅವರ ಬಗ್ಗೆ ಅಂತಾರಾಷ್ಟ್ರೀಯ ಹಿರಿಯ ಕ್ರಿಕೆಟಿಗರು ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಆಯ್ಕೆಮಾಡಲಾಗಿದೆ. ಒಟ್ಟಿನಲ್ಲಿ ಭವಿಷ್ಯದಲ್ಲಿ ಉತ್ತಮ ಭಾರತ ತಂಡ (Team India) ರಚಿಸುವ ಸಲುವಾಗಿ ಈ ರೀತಿಯ ತಂಡವನ್ನು ಕಟ್ಟಿದೆ ಬಿಸಿಸಿಐ. ಇದನ್ನು ಓದಿ.. T20 World Cup: ಪಂದ್ಯ ಸೋತ ತಕ್ಷಣ ಅಸಮಾಧಾನ ವ್ಯಕ್ತ ಪಡಿಸಿದ ನಾಯಕ ರೋಹಿತ್ ಶರ್ಮ; ಸೋಲಿಗೆ ಕಾರಣ ತಿಳಿಸಿ ದೂಷಿಸಿದ್ದು ಯಾರನ್ನು ಗೊತ್ತೇ??

ಆಯ್ಕೆಯಾಗಿರುವ ಭಾರತ ಟಿ20 ತಂಡ ಹೀಗಿದೆ :
ಹಾರ್ದಿಕ್ ಪಾಂಡ್ಯ (ಕ್ಯಾಪ್ಟನ್), ರಿಷಬ್ ಪಂತ್ (ವೈಸ್ ಕ್ಯಾಪ್ಟನ್), ಇಶಾನ್ ಕಿಶನ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್.
ಭಾರತ ಏಕದಿನ ತಂಡ ಹೀಗಿದೆ : ಶಿಖರ್ ಧವನ್ (ಕ್ಯಾಪ್ಟನ್), ರಿಷಬ್ ಪಂತ್ (ವೈಸ್ ಕ್ಯಾಪ್ಟನ್), ಶುಭಮನ್ ಗಿಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಕುಲದೀಪ್ ಸೇನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್. ಇದನ್ನು ಓದಿ.. T20 World Cup: ಸೌತ್ ಆಫ್ರಿಕಾ ತಂಡದ ವಿರುದ್ಧ ಸೋತ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ಸ್ಟಾರ್ ಪ್ಲೇಯರ್ ಗೆ ಇಂಜುರಿ. ಬಲಾಢ್ಯರೇ ಔಟ್??