Cricket news: ದಿನೇಶ್ ಕಾರ್ತಿಕ್ ರವರನ್ನು ನೇರವಾಗಿ ತೆಗೆದು ಹಾಕಿ ಎಂದ ಸೆಹ್ವಾಗ್: ಆತನ ಬದಲು ಯಾರು ಆಡಬೇಕಂತೆ ಗೊತ್ತೇ??

Cricket news: ದಿನೇಶ್ ಕಾರ್ತಿಕ್ ರವರನ್ನು ನೇರವಾಗಿ ತೆಗೆದು ಹಾಕಿ ಎಂದ ಸೆಹ್ವಾಗ್: ಆತನ ಬದಲು ಯಾರು ಆಡಬೇಕಂತೆ ಗೊತ್ತೇ??

Cricket News: 2022ರ ಐಪಿಎಲ್ (IPL 2022) ನಲ್ಲಿ ಆರ್ಸಿಬಿ (RCB) ತಂಡದ ಫಿನಿಷರ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್ (Dinesh Karthik) ಅವರು ನ್ಯಾಷನಲ್ ಟೀಮ್ ಗೆ ಮತ್ತೆ ಸೆಲೆಕ್ಟ್ ಆದರು, ಇದು ಕಾರ್ತಿಕ್ ಅವರ ಆಸೆ ಕೂಡ ಆಗಿತ್ತು. ಏಷ್ಯಾಕಪ್ ನಲ್ಲಿ (Asiacup) ಮತ್ತು ಸರಣಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಕಾರ್ತಿಕ್ ಅವರನ್ನು ಟಿ20 ವಿಶ್ವಕಪ್ (T20 World Cup) ತಂಡಕ್ಕೂ ಆಯ್ಕೆ ಮಾಡಿಕೊಳ್ಳಲಾಯಿತು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕಾರ್ತಿಕ್ ಆಯ್ಕೆಯಾದರು. ಆದರೆ ವಿಶ್ವಕಪ್ ನಲ್ಲಿ ದಿನೇಶ್ ಕಾರ್ತಿಕ್ ಅವರು ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ಮತ್ತು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕಾರ್ತಿಕ್ ಅವರು ಕೊನೆಯ ಮೂರು ಎಸೆತಗಳಿರುವಾಗ ಸ್ಟಂಪ್ ಔಟ್ ಆಗಿ ವಿಕೆಟ್ ಒಪ್ಪಿಸಿದರು.

ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ, ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಬೇಗ ವಿಕೆಟ್ ಒಪ್ಪಿಸಿದಾಗ, ಕಾರ್ತಿಕ್ ಅವರಿಗೆ ಪ್ರೂವ್ ಮಾಡಿಕೊಳ್ಳುವ ಅವಕಾಶ ಸಿಕ್ಕಿದು, ಆದರೆ 15 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ, ವೇಯ್ಲ್ ಪರ್ನಾಲ್ ಅವರ ಬೌಲಿಂಗ್ ನಲ್ಲಿ ಔಟ್ ಆದರು ಕಾರ್ತಿಕ್. ಹೀಗೆ ಕಾರ್ತಿಕ್ ಅವರು ವೈಫಲ್ಯ ಅನುಭವಿಸುತ್ತಿರುವುದರಿಂದ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ (Virendra Sehwag) ಅವರು ದಿನೇಶ್ ಕಾರ್ತಿಕ್ (Dinesh Karthik) ಅವರ ಬದಲಾಗಿ, ರಿಷಬ್ ಪಂತ್ ಅವರು ಬರುವುದು ಒಳ್ಳೆಯದು ಎಂದು ಹೇಳಿ, ಕಾರಣವನ್ನು ಕೂಡ ವಿವರಿಸಿದ್ದಾರೆ. “ಆರಂಭದಿಂದಲೂ ರಿಷಬ್ ಪಂತ್ (Rishab Pant) ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಕೊಡಬೇಕಿತ್ತು, ರಿಷಬ್ ಅವರು ಆಸ್ಟ್ರೇಲಿಯಾದಲ್ಲಿ ಹಲವು ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್ ಆಡಿ ತಂಡದ ಗೆಲುವಿಗೆ ಕಾರಣವಾಗಿದ್ದಾರೆ. ಇದನ್ನು ಓದಿ.. T20 World Cup: ವಿಶ್ವಕಪ್ ನಂತರ ನಡೆಯುವ ನ್ಯೂಜಿಲ್ಯಾಂಡ್ ಸರಣಿಗೆ ತಂಡ ಘೋಷಣೆ ಮಾಡಿದ ಆಯ್ಕೆ ಸಮಿತಿ: ಸ್ಥಾನ ಪಡೆದವರು ಯಾರ್ಯಾರು ಗೊತ್ತೇ??

ಇದು ಬೆಂಗಳೂರಿನ ಪಿಚ್ ಅಲ್ಲ. ಆಸ್ಟ್ರೇಲಿಯಾದಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಅವರ ಕೊನೆಯ ಪಂದ್ಯ ನಡೆದದ್ದು ಯಾವಾಗ? ಭಾರತ ವರ್ಸಸ್ ಸೌತ್ ಆಫ್ರಿಕಾ (India vs South Africa) ಪಂದ್ಯದಲ್ಲಿ ದೀಪಕ್ ಹೂಡಾ (Deepak Hooda) ಅವರ ಬದಲು ರಿಷಬ್ ಪಂತ್ (Rishab Pant) ಅವರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಈಗಲೂ ನನಗೆ ಅನ್ನಿಸುತ್ತದೆ. ಅದಕ್ಕೆ ಕಾರಣ, ಆಸ್ಟ್ರೇಲಿಯಾದಲ್ಲಿ ಆಡಿರುವ ಅನುಭ ಅವರಿಗೆ ಇದೆ. ದಿ ಗಬ್ಬಾದಲ್ಲಿ ರಿಷಬ್ ಅವರು ಆಡಿದ ಅದ್ಬುತ ಇನ್ನಿಂಗ್ಸ್ ಯಾರು ಮರೆಯುವಂಥದ್ದಲ್ಲ..” ಎಂದು ಸೆಹ್ವಾಗ್ ಅವರು ರಿಷಬ್ ಪಂತ್ ಅವರನ್ನು ವಹಿಸಿಕೊಂಡು ಮಾತನಾಡಿದ್ದಾರೆ. ಸೆಹ್ವಾಗ್ ಅವರ ಸಲಹೆಯನ್ನು ಬಿಸಿಸಿಐ (BCCI), ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. T20 World Cup: ಸೋತ ಮೇಲೆ ಕಠಿಣ ನಿರ್ಧಾರ: ಒಬ್ಬರು ಇಬ್ಬರು ಅಲ್ಲ, ಮೂವರಿಗೆ ಗೇಟ್ ಪಾಸ್?? ಹೊರಹೋಗಬಹುದಾದ ಆಟಗಾರರು ಯಾರು ಗೊತ್ತೇ??