T20 world cup: 2 ಕ್ಕೆ ಎರಡು ಪಂದ್ಯಗಳು ಗೆದ್ದರೂ ಕೂಡ ಭಾರತಕ್ಕೆ ಅದೊಂದು ಸಮಸ್ಯೆ ಇದೆ ಎಂದ ಗವಾಸ್ಕರ್. ಹೇಳಿದ್ದೇನು ಗೊತ್ತೇ??

T20 world cup: 2 ಕ್ಕೆ ಎರಡು ಪಂದ್ಯಗಳು ಗೆದ್ದರೂ ಕೂಡ ಭಾರತಕ್ಕೆ ಅದೊಂದು ಸಮಸ್ಯೆ ಇದೆ ಎಂದ ಗವಾಸ್ಕರ್. ಹೇಳಿದ್ದೇನು ಗೊತ್ತೇ??

T20 world cup: ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಸೂಪರ್ 12 ಹಂತದಲ್ಲಿ ಆಡಿದ ಎರಡು ಪಂದ್ಯಗಳನ್ನು ಗೆದ್ದು, ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ. ತಂಡದ ಆತ್ಮವಿಶ್ವಾಸ ಜಾಸ್ತಿಯಾಗಿದ್ದು, ನಾಳೆ ನಡೆಯಲಿರುವ ಭಾತರ ವರ್ಸಸ್ ಸೌತ್ ಆಫ್ರಿಕಾ (India vs South Africa) ವಿರುದ್ಧದ ಮ್ಯಾಚ್ ನಲ್ಲಿ ಸಹ ಗೆಲ್ಲುವ ವಿಶ್ವಾಸಗವಿದ್ದು ಅದಕ್ಕಾಗಿ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಭಾರತ ತಂಡ ಬ್ಯಾಕ್ ಟು ಬ್ಯಾಕ್ ಗೆದ್ದು ಉತ್ತಮ ಅಂಕ ಪಡೆದಿದ್ದರು ಸಹ ಕೆ.ಎಲ್.ರಾಹುಲ್ (KL Rahul) ಅವರ ಫಾರ್ಮ್ ಗೆ ಕಳವಳ ಇದೆ. ಆಡಿದ ಎರಡು ಪಂದ್ಯಗಳಲ್ಲೂ ರಾಹುಲ್ ಅವರು ವೈಫಲ್ಯ ಅನುಭವಿಸಿದ್ದಾರೆ.

ಪಾಕಿಸ್ತಾನ್ ವಿರುದ್ಧ ನಡೆದ ಪಂದ್ಯದಲ್ಲಿ 4 ರನ್ ಗಳಿಸಿ, ನಸೀಮ್ ಶಾ (Naseem Shah) ಬೌಲಿಂಗ್ ನಲ್ಲಿ ಔಟ್ ಆದ ಕೆ.ಎಲ್.ರಾಹುಲ್ ಅವರು, ಮೊನ್ನೆ ನಡೆದ ನೆದರ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 9 ರನ್ ಗಳಿಸಿ ವ್ಯಾನ್ ಮೀಕೆರೆನ್ ಅವರ ಬೌಲಿಂಗ್ ನಲ್ಲಿ ಔಟ್ ಆದರು. ರಾಹುಲ್ ಅವರು ಎರಡು ಅಂಕಿಗಳ ಸ್ಕೋರ್ ಸಹ ಮಾಡದೆ ಇರುವುದು, ಚಿಂತೆಗೆ ಕಾರಣವಾಗಿದೆ. ಈ ವಿಷಯದ ಬಗ್ಗೆ ಮತ್ತು ತಂಡ ರೂಪುಗೊಳ್ಳುತ್ತಿರುವ ಬಗ್ಗೆ ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ (Sunil Gavaskar) ಅವರು ಮಾತನಾಡಿದ್ದಾರೆ, “ಭಾರತ ತಂಡ ರೆಡಿ ಆಗುತ್ತಿರುವ ಬಗ್ಗೆ ಮಾತನಾಡಿದರೆ, ನೆದರ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ (Rohit Sharma) ಅವರು ರನ್ ಗಳಿಸಿದ್ದು ನೋಡಿ ಸಂತೋಷ ಆಯಿತು. ಹಾಗೆಯೇ ಅರ್ಷದೀಪ್ ಸಿಂಗ್ (Arshdeep Singh) ಉತ್ತಮ ಪ್ರದರ್ಶನ ನೀಡಿದ್ದಾರೆ. ಅಶ್ವಿನ್ (R.Ashwin) ಮತ್ತು ಅಕ್ಷರ್ ಪಟೇಲ್ (Axar Patel) ವಿಕೆಟ್ಸ್ ಪಡೆಯುವಲ್ಲಿ ಯಶಸ್ವಿಯಾದರು. ಇದನ್ನು ಓದಿ..T20 world cup: ನಾಯಕ ರೋಹಿತ್ ಮಾತನ್ನು ಕೂಡ ಧಿಕ್ಕರಿಸಿದ ರಾಹುಲ್: ಮುಂದಿನ ಪಂದ್ಯದಲ್ಲಿ ರಾಹುಲ್ ಗೆ ಶಾಕ್?? ಏನಾಗಿದೆ ಗೊತ್ತೇ??

ಎಲ್ಲರ ಪ್ರದರ್ಶನ ಚೆನ್ನಾಗಿತ್ತು.. ಆದರೆ ನಡೆದ ಎರಡು ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಅವರು ಹೆಚ್ಚು ರನ್ಸ್ ಗಳಿಸದೆ ಇರುವುದನ್ನು ನೋಡಿ ಸ್ವಲ್ಪ ಆತಂಕ ಇದೆ. ಇದೆಲ್ಲ ಏನೇ ಇದ್ದರು ಕೆ.ಎಲ್.ರಾಹುಲ್ ಕ್ಲಾಸ್ ಆಟಗಾರ..” ಎಂದು ರಾಹುಲ್ ಅವರ ಬಗ್ಗೆ ಹೇಳಿದ್ದಾರೆ ಸುನೀಲ್ ಗವಾಸ್ಕರ್. ಕೆ.ಎಲ್.ರಾಹುಲ್ ಅವರು ಇಂಜುರಿ ಇಂದ ಚೇತರಿಸಿಕೊಂಡು ಬಂದ ನಂತರ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ರಾಹುಲ್ ಅವರು ಉತ್ತಮ ಪ್ರದರ್ಶನ ಕೊಡಲೇಬೇಕಾದ ಒತ್ತಡ ಇದೆ. ಇನ್ನು ಭಾರತ ತಂಡವು ಎರಡು ಪಂದ್ಯ ಗೆದ್ದು, ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದ ನೆಟ್ ರನ್ ರೇಟ್ +1.425 ಇದೆ. ಮುಂದಿನ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸ ಹೊಂದಿರುವ ಭಾರತ, ಹೇಗೆ ಆಡುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ನೆದರ್ಲ್ಯಾಂಡ್ ಪಂದ್ಯದಲ್ಲೂ ವಿಫಲವಾದ ರಾಹುಲ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿರುವಾಗ ವಾಸಿಂ ಜಾಫರ್ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ??