T20 world cup: ನಾಯಕ ರೋಹಿತ್ ಮಾತನ್ನು ಕೂಡ ಧಿಕ್ಕರಿಸಿದ ರಾಹುಲ್: ಮುಂದಿನ ಪಂದ್ಯದಲ್ಲಿ ರಾಹುಲ್ ಗೆ ಶಾಕ್?? ಏನಾಗಿದೆ ಗೊತ್ತೇ??

T20 world cup: ನಾಯಕ ರೋಹಿತ್ ಮಾತನ್ನು ಕೂಡ ಧಿಕ್ಕರಿಸಿದ ರಾಹುಲ್: ಮುಂದಿನ ಪಂದ್ಯದಲ್ಲಿ ರಾಹುಲ್ ಗೆ ಶಾಕ್?? ಏನಾಗಿದೆ ಗೊತ್ತೇ??

T20 world cup: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್(T20 World Cup) ಟೂರ್ನಿಯಲ್ಲಿ ಭಾರತ ತಂಡ ಅದ್ಭುತವಾದ ಆರಂಭ ಪಡೆದುಕೊಂಡಿದೆ. ಪಾಕಿಸ್ತಾನ್ ವಿರುದ್ಧ ಒಂದು ರೋಚಕ ಗೆಲುವು ಸಾಧಿಸಿದ ನಂತರ ಭಾರತ ತಂಡವು ನೆದರ್ ಲ್ಯಾಂಡ್ ತಂಡದ ವಿರುದ್ಧ ಸಹ ಬಹಳ ಸುಲಭವಾಗಿ ಮತ್ತು ಅತ್ಯುತ್ತಮ ಅಂತರದಲ್ಲಿ ಗೆಲುವು ಸಾಧಿಸಿತು. ಎರಡು ಪಂದ್ಯಗಳನ್ನು ಗೆದ್ದ ಭಾರತ ಸೂಪರ್ 12 ಹಂತದಲ್ಲಿ ಬಿ ಗ್ರೂಪ್ ನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನಪ್ ಎರಡು ಚೆನ್ನಾಗಿದ್ದರು ಸಹ, ಕೆ.ಎಲ್.ರಾಹುಲ್(K L Rahul) ಅವರ ವೈಫಲ್ಯ ಭಾರತ ತಂಡ ಚಿಂತೆಗೆ ಒಳಗಾಗುವ ಜಾಗೆ ಮಾಡಿದೆ.

ಕೆ.ಎಲ್.ರಾಹುಲ್ ಅವರು ಇಂಜುರಿಗೆ ಒಳಗಾದ ಬಳಿಕ, ಅವರು ಲಯ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ವಿಶ್ವಕಪ್ ನ ಎರಡು ಪಂದ್ಯಗಳಲ್ಲಿ ರಾಹುಲ್ ಅವರು ಬಹಳ ಬೇಗ ಔಟ್ ಆದರು, ಪಾಕಿಸ್ತಾನ್(Pakistan) ವಿರುದ್ಧ 4 ರನ್ ಗಳಿಸಿ ಔಟ್ ಆದ ರಾಹುಲ್ ಅವರು, ನಿನ್ನೆ ನಡೆದ ನೆದರ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ವ್ಯಾನ್ ಮೀಕೆರನ್ ಅವರ ಬೌಲಿಂಗ್ ದಾಳಿಗೆ ಎಲ್ಬಿಡಬಲ್ಯೂ ಮೂಲಕ ಔಟ್ ಆದರು. ಆದರೆ ಔಟ್ ಆದ ಬಳಿಕ ರಾಹುಲ್ ಅವರಿಗೆ ರೋಹಿತ್ ಶರ್ಮಾ(Rohit Sharma) ಅವರು ಡಿ.ಆರ್.ಎಸ್ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಆದರೆ ರಾಹುಲ್ ಅವರು ಈ ಮಾತು ಕೇಳಲಿಲ್ಲ. ನಾಯಕ ಹೇಳಿದರು ಕೂಡ ಆತ್ಮವಿಶ್ವಾಸ ದಿಂದ ರಾಹುಲ್ DRS ತೆಗೆದುಕೊಳ್ಳಲಿಲ್ಲ. ಆತ್ಮವಿಶ್ವಾಸದ ಕೊರತೆಯಿಂದ ರಾಹುಲ್ ಅವರು ಔಟ್ ಎಂದು ಪೆವಿಲಿಯನ್ ಗೆ ನಡೆದರು. ಇದನ್ನು ಓದಿ.. ನೆದರ್ಲ್ಯಾಂಡ್ ಪಂದ್ಯದಲ್ಲೂ ವಿಫಲವಾದ ರಾಹುಲ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿರುವಾಗ ವಾಸಿಂ ಜಾಫರ್ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ??

ಆದರೆ ರಾಹುಲ್ ಅವರು ಔಟ್ ಆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರೀ ಪ್ಲೇ ಮಾಡಿದಾಗ, ಬಾಲ್ ಲೆಗ್ ಸ್ಟಂಪ್ ಇಂದ ಹೊರಗೆ ಹೋಗುತ್ತಿರುವುದು ಕ್ಲಿಯರ್ ಆಗಿ ಕಾಣಿಸುತ್ತಿದೆ. ಇದರ ಬಗ್ಗೆ ರೋಹಿತ್ ಶರ್ಮ ಅವರಿಗು ಸಹ ಅರಿವಿತ್ತು, ಆದರೆ ರಾಹುಲ್ ಅವರು ಕ್ಯಾಪ್ಟನ್ ಮಾತು ಕೇಳಲಿಲ್ಲ. ಅಷ್ಟೇ ಅಲ್ಲದೆ, ರಾಹುಲ್ ಅವರು ಬ್ಯಾಟಿಂಗ್ ಮಾಡುವಾಗ ಕೂಡ ಆತ್ಮವಿಶ್ವಾಸ ಕಾಣಿಸುತ್ತಿರಲಿಲ್ಲ. ರಾಹುಲ್ ಅವರು ಹೀಗೆ ಆಡುತ್ತಿರುವುದಕ್ಕೆ ಕಾರಣ ಏನು ಎನ್ನುವುದೇ ಕಗ್ಗಂಟಾಗಿ ಉಳಿದಿದೆ. ಅವರಿಗೆ ಆತ್ಮವಿಶ್ವಾಸ ಮರಳಿ ಬರಲು ಬಹುಶಃ ಮುಂದಿನ ಒಂದು ಪಂದ್ಯಕ್ಕೆ ರಾಹುಲ್ ಗೆ ರೆಸ್ಟ್ ನೀಡುವ ಆಲೋಚನೆ ಮಾಡಬಹುದು, ಆದರೆ ಇದು ತಾತ್ಕಾಲಿಕ ಮಾತ್ರ ಮುಂದಿನ ಪಂದ್ಯಗಳಿಗೆ ರಾಹುಲ್ ಮತ್ತೆ ವಾಪಾಸ್ ಬರುತ್ತಾರೆ ಎನ್ನುವ ಆಲೋಚನೆಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಇದ್ದಾರೆ. ಇದನ್ನು ಓದಿ.. ತಾನೇ ಗಳಿಸಿದ ಸಿಕ್ಸರ್ ನೋಡಿ ದಂಗಾದ ಕೊಹ್ಲಿ: ನೆದರ್ಲ್ಯಾಂಡ್ ವಿರುದ್ಧ ಹೇಗಿತ್ತು ಗೊತ್ತೇ ಆ ಖಡಕ್ ಸಿಕ್ಸರ್. ವಿಡಿಯೋ ಸಮೇತ ನೀವೇ ನೋಡಿ.