ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನೆದರ್ಲ್ಯಾಂಡ್ ಪಂದ್ಯದಲ್ಲೂ ವಿಫಲವಾದ ರಾಹುಲ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿರುವಾಗ ವಾಸಿಂ ಜಾಫರ್ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ??

194

Get real time updates directly on you device, subscribe now.

ಭಾರತ ತಂಡದಲ್ಲಿರುವ ಕರ್ನಾಟಕದ ಹೆಮ್ಮೆಯ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಅವರು ಈಗ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಸುತ್ತಿದ್ದಾರೆ. ಇಂಜುರಿ ಬಳಿಕ ಚೇತರಿಸಿಕೊಂಡು ಭಾರತ ತಂಡಕ್ಕೆ ಮರಳಿ ಬಂದಿರುವ ರಾಹುಲ್ ಅವರು ಮೊದಲಿನ ಹಾಗೆ ಅತ್ಯುತ್ತಮ ಇನ್ನಿಂಗ್ಸ್ ನೀಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಎಲ್ಲಾ ಮ್ಯಾಚ್ ಗಳಲ್ಲೂ ರಾಹುಲ್ ಅವರು ಹೆಚ್ಚು ರನ್ಸ್ ಗಳಿಸಲು ಸಾಧ್ಯವಾಗುತ್ತಿಲ್ಲ. ವಿಶ್ವಕಪ್ ನಲ್ಲಿ ಸಹ ರಾಹುಲ್ ಅವರು ವೈಫಲ್ಯ ಅನುಭವಿಸುತ್ತಿದ್ದಾರೆ. ಪಾಕಿಸ್ತಾನ್ ವಿರುದ್ಧ 8 ಎಸೆತಗಳಲ್ಲಿ 4 ರನ್ ಸ್ಕೋರ್ ಮಾಡಿ ಔಟ್ ಆಗಿದ್ದರು. ನೆದರ್ ಲ್ಯಾಂಡ್ಸ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ 12 ಎಸೆತಗಳಲ್ಲಿ 9 ರನ್ಸ್ ಗಳಿಸಿ ಔಟ್ ಆದರು.

ರಾಹುಲ್ ಅವರ ಈ ವೈಫಲ್ಯದಿಂದ ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಅವರು ಸಿಕ್ಕಾಪಟ್ಟೆ ಟೀಕೆಗೆ ಒಳಗಾಗಿದ್ದಾರೆ. ಎಲ್ಲರೂ ಕೆ.ಎಲ್.ರಾಹುಲ್ ಅವರನ್ನು ಟ್ರೋಲ್ ಮಾಡುತ್ತಿರುವಾಗ, ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ಅವರು ಕೆ.ಎಲ್.ರಾಹುಲ್ ಅವರ ಪರವಾಗಿ ಮಾತನಾಡಿದ್ದಾರೆ, ಅವರು ಸ್ಕೋರ್ ಮಾಡಿರುವ ರನ್ ಗಳಿಗಿಂತ ಅವರ ಸಾಮರ್ಥ್ಯ ದೊಡ್ಡದು ಎಂದು ಹೇಳಿದ್ದಾರೆ ವಾಸಿಂ ಜಾಫರ್. “ಕೆ.ಎಲ್.ರಾಹುಲ್ ಅವರು ಸ್ಕೋರ್ ಮಾಡಿರುವ ರನ್ ಗಿಂತ ಅವರು ಒಳ್ಳೆಯ ಪ್ಲೇಯರ್ ಎನ್ನುವುದು ನನ್ನ ಅಭಿಪ್ರಾಯ. ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಮ್ಯಾಚ್ ಗಳಲ್ಲಿ ಅವರು ಒಳ್ಳೆಯ ಫಾರ್ಮ್ ನಲ್ಲಿ ಇದ್ದಿದ್ದನ್ನು ನಾವೆಲ್ಲರೂ ನೋಡಿದ್ದೇವೆ.

ಇಂಜುರಿ ಆದ ನಂತರ ಕಂಬ್ಯಾಕ್ ಮಾಡಲು ಫಾರ್ಮ್ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ನಿಮಗೆಲ್ಲ ಈಗಾಗಲೇ ಗೊತ್ತಿರುವ ಹಾಗೆ, ಕೆ.ಎಲ್.ರಾಹುಲ್ ಅವರು ಹಲವು ಸಾರಿ ಇಂಜುರಿಗೆ ಒಳಗಾಗಿ, ಅದರಿಂದ ನೋವು ತಿಂದಿದ್ದಾರೆ. ಹಾಗಾಗಿ ಆ ನೋವುಗಳು ಅವರ ಮೇಲೆ ಪರಿಣಾಮ ಬೀರಿರುವ ಹಾಗೆ ಅನ್ನಿಸುತ್ತದೆ. ಆದರೆ ರಾಹುಲ್ ಅವರು ತಮ್ಮ ಸ್ಕೋರ್ ಇಂಪ್ರೂವ್ ಮಾಡಿಕೊಳ್ಳಬಹುದು. ಅವರೊಬ್ಬ ಅದ್ಭುತ ಆಟಗಾರ, ಟಿ20, ಓಡಿಐ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನವನ್ನು ರಾಹುಲ್ ಅವರು ಕೊಡಬಹುದು..”ಎಂದು ರಾಹುಲ್ ಅವರ ಪರವಾಗಿ ಮಾತನಾಡಿದ್ದಾರೆ ವಾಸಿಂ ಜಾಫರ್ ಅವರು.

Get real time updates directly on you device, subscribe now.