ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತಾನೇ ಗಳಿಸಿದ ಸಿಕ್ಸರ್ ನೋಡಿ ದಂಗಾದ ಕೊಹ್ಲಿ: ನೆದರ್ಲ್ಯಾಂಡ್ ವಿರುದ್ಧ ಹೇಗಿತ್ತು ಗೊತ್ತೇ ಆ ಖಡಕ್ ಸಿಕ್ಸರ್. ವಿಡಿಯೋ ಸಮೇತ ನೀವೇ ನೋಡಿ.

1,411

Get real time updates directly on you device, subscribe now.

ನಿನ್ನೆ ಸಿಡ್ನಿಯಲ್ಲಿ ನಡೆದ ಭಾರತ ವರ್ಸಸ್ ನೆದರ್​ ಲ್ಯಾಂಡ್ಸ್​ ಪಂದ್ಯದಲ್ಲಿ ಭಾರತ ತಂಡ ಬರೋಬ್ಬರಿ 56 ರನ್ ಗಳ ಭೃಹತ್ ಜಯ ಸಾಧಿಸಿತು. ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯದ ಶುರುವಿನಲ್ಲಿ ಕೆ.ಎಲ್.ರಾಹುಲ್ ಅವರು 9 ರನ್ ಗಳಿಸಿ ಪೆವಿಲಿಯನ್ ಸೇರಿದ ಬಳಿಕ ವಿರಾಟ್ ಕೋಹ್ಲಿ ಅವರು ಕ್ರೀಸ್ ಗೆ ಬಂದರು, ರೋಹಿತ್ ಮತ್ತು ವಿರಾಟ್ ಅವರ ಜೊತೆಯಾಟ ತಂಡಕ್ಕೆ ಸಹಾಯವಾಯಿತು, ಈ ಜೊತೆಯಾಟದಲ್ಲಿ ಬಂದದ್ದು ಬರೋಬ್ಬರಿ 73 ರನ್ ಗಳು. ರೋಹಿತ್ ಶರ್ಮಾ ಅವರು 39 ಎಸೆತಗಳಲ್ಲಿ 53 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ ಅವರು ಸಹ ವಿರಾಟ್ ಅವರೊಡನೆ ಉತ್ತಮ ಜೊತೆಯಾಟವಾಡಿದರು.

ರೋಹಿತ್ ಅವರು ಔಟ್ ಆದ ಬಳಿಕ ವಿರಾಟ್ ಕೋಹ್ಲಿ ಅವರು ಬಿಗ್ ಹಿಟ್ಸ್ ಹೊಡೆಯಲು ನಿರ್ಧಾರ ಮಾಡಿ, ಬೌಂಡರಿ ಮತ್ತು ಸಿಕ್ಸರ್ ಭಾರಿಸುತ್ತಿದ್ದರು. ಆಗ 17ನೇ ಓವರ್ ನಲ್ಲಿ, ಲೆಫ್ಟ್ ಹ್ಯಾಂಡ್ ಬೌಲರ್ ಫ್ರೆಡ್ ಕ್ಲಾಸೆನ್ ಅವರು ಬೌಲಿಂಗ್ ಮಾಡಿದಾಗ, ಕೋಹ್ಲಿ ಅವರು ಅದ್ಭುತವಾದ ಸಿಕ್ಸರ್ ಭಾರಿಸಿದರು. ಆಫ್ ಸ್ಟಂಪ್ ಇಂದ ಬಾಲ್ ಅನ್ನು ಕವರ್ ನತ್ತ ಭಾರಿಸಿದ್ದು, ಆ ಬಾಲ್ ಬೌಂಡರಿ ಲೈನ್ ಇಂದ ವೇಗದಲ್ಲಿ ಮುಂದಕ್ಕೆ ಹೋಗಿ ಸಿಕ್ಸರ್ ಆಗಿತ್ತು. ಈ ಸಿಕ್ಸರ್ ಕೋಹ್ಲಿ ಅವರಿಗೆ ಆಶ್ಚರ್ಯ ತಂದಿದ್ದಂತೂ ಖಂಡಿತ. ಸ್ವತಃ ವಿರಾಟ್ ಕೋಹ್ಲಿ ಅವರೇ ಈ ಬಾಲ್ ಗೆ ಬ್ಯಾಟ್ ಬೀಸಿದ ನಂತರ ಆಶ್ಚರ್ಯವಾಗಿ ದೊಡ್ಡದಾಗಿ ಕಣ್ಣು ಬಿಟ್ಟು ಬಾಲ್ ನತ್ತ ನೋಡಿದರು. ವಿರಾಟ್ ಅವರು ಸಿಡಿಸಿದ ಈ ಸಿಕ್ಸರ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇಂತಹ ಬಿಗ್ ಹಿಟ್ಸ್ ಗಳು ಮತ್ತು ಸಮಯೋಚಿತವಾಗಿ ವಿರಾಟ್ ಕೋಹ್ಲಿ ಅವರು ಮತ್ತು ಸೂರ್ಯಕುಮಾರ್ ಯಾದವ್ ಅವರು ರನ್ ಕಲೆಹಾಕಿದ ಕಾರಣ ಭಾರತ ತಂಡ 179 ರನ್ ಗಳಿಸಲು ಸಾಧ್ಯವಾಯಿತು. ನಂತರ 2ನೇ ಇನ್ನಿಂಗ್ಸ್ ನಲ್ಲಿ ನೆದರ್​ ಲ್ಯಾಂಡ್ಸ್​ ತಂಡ ಬ್ಯಾಟಿಂಗ್ ಮಾಡಲು ಶುರು ಮಾಡಿ, ಭಾರತ ತಂಡದ ಬೌಲಿಂಗ್ ದಾಳಿಗೆ ಬಳಲಿದ ನೆದರ್​ ಲ್ಯಾಂಡ್ಸ್​ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಅಷ್ಟೇ ಗಳಿಸಲು ಸಾಧ್ಯವಾಯಿತು. ಈ ರೀತಿಯಾಗಿ ಭಾರತ ತಂಡಕ್ಕೆ 56 ರನ್ ಗಳ ಅದ್ಧೂರಿ ಜಯ ಸಾಧಿಸಿತು. ಏಷ್ಯಾಕಪ್ ನಲ್ಲಿ ಫಾರ್ಮ್ ಕಳೆದುಕೊಂಡಿದ್ದ ಭಾರತ ತಂಡ, ಈಗ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎಲ್ಲದರಲ್ಲೂ ಸುಧಾರಿಸಿ ಉತ್ತಮವಾಗಿ ರನ್ ಗಳಿಸುತ್ತಿದೆ.

Get real time updates directly on you device, subscribe now.