ರಾಹುಲ್ ಬಹುಬೇಗನೆ ಔಟ್ ಆದಾಗ ಕೊಹ್ಲಿ ರವರು ರೋಹಿತ್ ಬಳಿ ಹೋಗಿ ಹೇಳಿದ್ದೇನು ಗೊತ್ತೇ? ಪಂದ್ಯ ಮುಗಿದ ಬಳಿಕ ರೋಹಿತ್ ಬಹಿರಂಗಪಡಿಸಿದರು

ರಾಹುಲ್ ಬಹುಬೇಗನೆ ಔಟ್ ಆದಾಗ ಕೊಹ್ಲಿ ರವರು ರೋಹಿತ್ ಬಳಿ ಹೋಗಿ ಹೇಳಿದ್ದೇನು ಗೊತ್ತೇ? ಪಂದ್ಯ ಮುಗಿದ ಬಳಿಕ ರೋಹಿತ್ ಬಹಿರಂಗಪಡಿಸಿದರು

ಟಿ20 ವಿಶ್ವಕಪ್ ನ ಸೂಪರ್ 12 ಹಂತದಲ್ಲಿ ಎರಡು ಪಂದ್ಯಗಳನ್ನಾಡಿರುವ ಭಾರತ ತಂಡ, ಪಾಕಿಸ್ತಾನ್ ಮತ್ತು ನೆದರ್ ಲ್ಯಾಂಡ್ಸ್ ಎರಡು ತಂಡಗಳ ವಿರುದ್ಧ ಆಡಿದ ಪಂದ್ಯಗಳನ್ನು ಗೆದ್ದು, ಬೀಗಿದೆ. ಈ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ ಭಾರತ. ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಗೆದ್ದರು ಸಹ, ಓಪನರ್ ಕೆ.ಎಲ್.ರಾಹುಲ್ ಅವರು ಬಹಳ ಬೇಗ 9 ರನ್ ಗಳಿಸಿ ಔಟ್ ಆದರು, ವಿರಾಟ್ ಅವರು ಮತ್ತು ಸೂರ್ಯಕುಮಾರ್ ಯಾದವ್ ಅವರು ಉತ್ತಮ ಪ್ರದರ್ಶನ ನೀಡಿದರು. ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮಾತನಾಡಿ, ನಿಜಕ್ಕೂ ನಡೆದಿದ್ದೇನು ಎಂದು ತಿಳಿಸಿದ್ದಾರೆ.

ಮೊದಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಹೇಳಿದ್ದು ಹೀಗೆ, “ಮೊದಲ 10 ಓವರ್ ಗಳಲ್ಲಿ ನಮ್ಮ ತಂಡದ ಆಟ ಇನ್ನು ಚೆನ್ನಾಗಿರಬಹುದಿತ್ತು. ಕೆ.ಎಲ್.ರಾಹುಲ್ ಬಹಳ ಬೇಗ, 9 ರನ್ ಗಳಿಸಿ ಔಟ್ ಆದರು, ತಂಡದ ಸ್ಕೋರ್ 11 ಇರುವಾಗ ರಾಹುಲ್ ಅವರ ವಿಕೆಟ್ ಬಿತ್ತು. ಆಗ ನಾನು ವಿರಾಟ್ ಅವರಿಗೆ ಹೇಳಿದ್ದು ಒಂದೇ ಮಾತು, ಆರಂಭದ 10 ಓವರ್ ಗಳಲ್ಲಿ ರನ್ ರೇಟ್ ಕಡಿಮೆ ಇದ್ದರೂ ಪರವಾಗಿಲ್ಲ, ನಾವು ಪಾರ್ಟ್ನ್ಸರ್ಶಿಪ್ ಬೆಳೆಸಬೇಕು. ನೆದರ್ ಲ್ಯಾಂಡ್ಸ್ ತಂಡದ ಬೌಲಿಂಗ್ ಅಟ್ಯಾಕ್ ತುಂಬಾ ಚೆನ್ನಾಗಿದೆ. ಈಗ ನಾವು ಚೆನ್ನಾಗಿ ಆಡಿದರೆ, ಮುಂದೆ ಬರುವ ಆಟಗಾರರು ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇದರ ಜವಾಬ್ದಾರಿಯನ್ನು ಚೆನ್ನಾಗಿ ಮುಂದುವರೆಸಿಕೊಂಡು ಹೋಗುತ್ತಾರೆ. ನಾವು 150 ಕ್ಕಿಂತ ಹೆಚ್ಚು ರನ್ಸ್ ಗಳಿಸಬೇಕು ಎಂದು ಗುರಿ ಇಟ್ಟುಕೊಂಡು ಬಿಗ್ ಹಿಟ್ಸ್ ಹೊಡೆಯಲು ಶುರು ಮಾಡಿದರೆ ಉತ್ತಮ ರನ್ಸ್ ಕಲೆಹಾಕಬಹುದು.

ಸಿಡ್ನಿ ಗ್ರೌಂಡ್ ತುಂಬಾ ದೊಡ್ಡದು, ಇಲ್ಲಿ ಬಿಗ್ ಹಿಟ್ಸ್ ಹೊಡೆಯುವುದು ಮತ್ತು ಹೆಚ್ಚು ರನ್ಸ್ ಗಳಿಸುವುದು ಬಹಳ ಕಷ್ಟ, ಬಿಗ್ ಹಿಟ್ಸ್ ಪ್ರಯತ್ನ ಕ್ಯಾಚ್ ಆದರು ಆಗಬಹುದು. ಈ ರೀತಿ between the runs, between the over ನಾವು ಮಾತನಾಡುತ್ತಲೇ ಇದ್ದೆವು. ಹೀಗೆ ನಮ್ಮ ಪಾರ್ಟ್ನರ್ಶಿಪ್ ಬೆಳೆಯಿತು. ನಾನು ಅರ್ಧಶತಕ ಪೂರ್ತಿ ಮಾಡಿದೆ, ಆದರೆ ವಿರಾಟ್ ಕೋಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಪಾರ್ಟ್ನರ್ಶಿಪ್ ರೋಚಕವಾಗಿತ್ತು, ಆಶ್ಚರ್ಯಕರವಾಗಿತ್ತು. ಇಬರಿಬ್ಬರು ಕೊನೆಯ 60 ಎಸೆತಗಳಲ್ಲಿ 112 ರನ್ಸ್ ಕಲೆಹಾಕಿದರು. ಇದು ನಿಜಕ್ಕೂ ಅತ್ಯುತ್ತಮವಾದ ಬ್ಯಾಟಿಂಗ್ ಪ್ರದರ್ಶನ ಆಗಿತ್ತು, ದಿನೇಶ್ ಕಾರ್ತಿಕ್ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ.

ಇದರಿಂದ ಅರ್ಥವಾದ ವಿಷಯ ಏನೆಂದರೆ, ಕೊನೆಯ 10 ಓವರ್ ಅಥವಾ 5 ಓವರ್ ಗಳಲ್ಲಿ ನಾವು ಹೇಗೆ ಬೇಕಾದರೂ, ಬ್ಯಾಟ್ ಬೀಸಿ ರನ್ಸ್ ಗಳಿಸಬಹುದು. ಜೊತೆಗೆ ನಾವು ಮೊದಲ 10 ಓವರ್ ಗಳಲ್ಲಿ ವಿಕೆಟ್ಸ್ ಗಳನ್ನು ಉಳಿಸಿಕೊಳ್ಳಬೇಕು. ನಮ್ಮ ಬ್ಯಾಟಿಂಗ್ ಲೈನಪ್ ಅದ್ಭುತವಾಗಿದೆ, ಮುಂದಿನ ಪಂದ್ಯಗಳಲ್ಲಿ ಸಹ ಉತ್ತಮ ಪ್ರದರ್ಶನ ನೀಡಿ, ಬಿಗ್ ಸ್ಕೋರ್ ಗಳಿಸಿ, ಎಲ್ಲಾ ಮ್ಯಾಚ್ ಗಳನ್ನು ಗೆಲ್ಲುವ ಪ್ರಯತ್ನ ಮಾಡುತ್ತೇವೆ..” ಎಂದು ಹೇಳಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ.