ಮೆರೆಯುತ್ತಿದ್ದವರಿಗೆ ಒಂದೇ ಇನ್ನಿಂಗ್ಸ್ ನಲ್ಲಿ ಠಕ್ಕರ್ ಕೊಟ್ಟ ಕೊಹ್ಲಿ: ಬಿಡುಗಡೆಯಾದ ರಾಂಕಿಂಗ್ ನಲ್ಲಿ ಕೊಹ್ಲಿ ಪಡೆದದ್ದು ಎಷ್ಟನೇ ಸ್ಥಾನ ಗೊತ್ತೇ??

ಮೆರೆಯುತ್ತಿದ್ದವರಿಗೆ ಒಂದೇ ಇನ್ನಿಂಗ್ಸ್ ನಲ್ಲಿ ಠಕ್ಕರ್ ಕೊಟ್ಟ ಕೊಹ್ಲಿ: ಬಿಡುಗಡೆಯಾದ ರಾಂಕಿಂಗ್ ನಲ್ಲಿ ಕೊಹ್ಲಿ ಪಡೆದದ್ದು ಎಷ್ಟನೇ ಸ್ಥಾನ ಗೊತ್ತೇ??

ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೋಹ್ಲಿ ಅವರು ಕೆಲವು ವರ್ಷಗಳಿಂದ ಕಳಪೆ ಫಾರ್ಮ್ ಇಂದ ಬಳಲುತ್ತಿದ್ದರು. ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಎರಡರಲ್ಲೂ ಸಹ ಕೋಹ್ಲಿ ಅವರು ವೈಫಲ್ಯ ಅನುಭವಿಸುತ್ತಿದ್ದರು. ಕೋಹ್ಲಿ ಅವರ ಬ್ಯಾಟ್ ಇಂದ ಹೆಚ್ಚು ರನ್ ಗಳು ಬರುತ್ತಿರಲಿಲ್ಲ. ಆದರೆ ಏಷ್ಯಾಕಪ್ ಶುರುವ ಆಗುವುದಕ್ಕಿಂತ ಮೊದಲು ಕೋಹ್ಲಿ ಅವರು ಒಂದು ತಿಂಗಳ ವಿಶ್ರಾಂತಿ ಪಡೆದು ತಂಡಕ್ಕೆ ಮರಳಿ ಬಂದರು. ಏಷ್ಯಾಕಪ್ ಇಂದ ಮತ್ತೆ ಫಾರ್ಮ್ ಗೆ ಮರಳಿದ ಕೋಹ್ಲಿ ಅವರು ಒಂದು ಶತಕ ಮತ್ತು ಎರಡು ಅರ್ಧಶತಕ ಸಿಡಿಸಿದರು.

ಈಗ ಟಿ20 ವರ್ಲ್ಡ್ ಕಪ್ ನಲ್ಲಿ ಸಹ ಕೋಹ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭಾನುವಾರ ಪಾಕಿಸ್ತಾನ್ ವಿರುದ್ಧ ನಡೆದ ಭಾರತದ ಮೊದಲ ಟಿ20 ಪಂದ್ಯದಲ್ಲಿ ಕೋಹ್ಲಿ ಅವರು 53 ಎಸೆತಗಳಲ್ಲಿ ಅಜೆಯ 82 ರನ್ ಗಳಿಸಿ, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡವನ್ನು ಗೆಕ್ಕಿಸಿದರು. ಈ ಉತ್ತಮ ಪ್ರದರ್ಶನಗಳಿಂದ ಕೋಹ್ಲಿ ಅವರಿಗೆ ಮೆಚ್ಚುಗೆಯ ಜೊತೆಗೆ ಒಳ್ಳೆಯ ಸ್ಥಾನ ಸಹ ಸಿಗುತ್ತಿದೆ. ಕೋಹ್ಲಿ ಅವರು ಈಗ ಐಸಿಸಿ ಬಿಡುಗಡೆ ಮಾಡಿರುವ ಟಿ20 ರಾಕಿಂಗ್ಸ್ ಟಾಪ್ 10 ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ ಕೋಹ್ಲಿ. ಆಗಸ್ಟ್ ತಿಂಗಳಿನಲ್ಲಿ 35ನೇ ಸ್ಥಾನದಲ್ಲಿದ್ದ ಕೋಹ್ಲಿ ಅವರು ಈಗ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. 635 ಅಂಕ ಪಡೆದು, 9ನೇ ಸ್ಥಾನದಲ್ಲಿದ್ದಾರೆ ಕೋಹ್ಲಿ.

ಈ ಲಿಸ್ಟ್ ನಲ್ಲಿರುವ ಭಾರತದ ಮತ್ತೊಬ್ಬ ಆಟಗಾರ ಸೂರ್ಯಕುಮಾರ್ ಯಾದವ್ ಅವರು. 828 ಅಂಕ ಪಡೆದು 3ನೇ ಸ್ತಾನದಲ್ಲಿದ್ದಾರೆ ಸೂರ್ಯಕುಮಾರ್ ಯಾದವ್. ಪಾಕಿಸ್ತಾನ್ ಕ್ಯಾಪ್ಟನ್ ಬಾಬರ್ ಅಜಂ ಅವರಿಗೆ ಹಿನ್ನಡೆ ಆಗಿದೆ, ಇವರು 4ನೇ ಸ್ಥಾನಕ್ಕೆ ಇಳಿದಿದ್ದಾರೆ. ಕಾನ್ವೆ ಅವರು ಎರಡನೇ ಸ್ತಾನದಲ್ಲಿದ್ದಾರೆ. ಸೌತ್ ಆಫ್ರಿಕಾ ತಂಡದ ಏಡನ್ ಮಾರ್ಕ್ರಮ್ 5ನೇ ಸ್ತಾನದಲ್ಲಿದ್ದಾರೆ. ಇಂಗ್ಲೆಂಡ್ ಪ್ಲೇಯರ್ ಡೇವಿಡ್ ಮಲಾನ್ 6ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಕ್ಯಾಪ್ಟನ್ ಆರೋನ್ ಫಿಂಚ್7ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ಆಟಗಾರ ಪಾತುಮ್ ನಿಸಂಕ 8ನೇ ಸ್ಥಾನದಲ್ಲಿದ್ದಾರೆ, ಯುಎಇ ಆಟಗಾರ ಮೊಹಮ್ಮದ್ ವಾಸಿಂ 10ನೇ ಸ್ಥಾನದಲ್ಲಿದ್ದಾರೆ. ಹಾಗು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು 16ನೇ ಸ್ಥಾನದಲ್ಲಿ ಹಾಗೂ ಕೆ.ಎಲ್.ರಾಹುಲ್ ಅವರು 18ನೇ ಸ್ತಾನದಲ್ಲಿದ್ದಾರೆ.