ಪಾಕ್ ಪಂದ್ಯದಲ್ಲಿ ಕೊನೆಯ ವೈಡ್ ಎಸೆತ ಪ್ಯಾಡ್ ಗೆ ತಗುಲಿ ಪಂದ್ಯ ಸೋತಿದ್ದರೇ ಏನು ಮಾಡುತ್ತಿದ್ದೀರಿ ಎಂದಿದ್ದಕ್ಕೆ ಅಚ್ಚರಿಯ ವಿಷಯ ಕೊಟ್ಟ ಅಶ್ವಿನ್ ಹೇಳಿದ್ದೇನು ಗೊತ್ತೇ??
ಪಾಕ್ ಪಂದ್ಯದಲ್ಲಿ ಕೊನೆಯ ವೈಡ್ ಎಸೆತ ಪ್ಯಾಡ್ ಗೆ ತಗುಲಿ ಪಂದ್ಯ ಸೋತಿದ್ದರೇ ಏನು ಮಾಡುತ್ತಿದ್ದೀರಿ ಎಂದಿದ್ದಕ್ಕೆ ಅಚ್ಚರಿಯ ವಿಷಯ ಕೊಟ್ಟ ಅಶ್ವಿನ್ ಹೇಳಿದ್ದೇನು ಗೊತ್ತೇ??
ಕಳೆದ ಭಾನುವಾರ ನಡೆದ ಟಿ20 ವಿಶ್ವಕಪ್ ನ ಸೂಪರ್ 12 ಹಂತದಲ್ಲಿ, ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಗಳ ಜಯ ಸಾಧಿಸಿತು. ರೋಚಕ ಪಂದ್ಯದಲ್ಲಿ ಭಾರತ ಗಂಡ ಗೆದ್ದ ಪರಿಯನ್ನು ಇಂದಿಗೂ ಯಾರು ಮರೆಯಲು ಸಾಧ್ಯವಾಗಿಲ್ಲ. ಪಾಕಿಸ್ತಾನ್ ತಂಡದ ಆಕ್ರಮಣಕಾರಿ ಬೌಲಿಂಗ್ ನಡುವೆ, ಅತಿ ಹೆಚ್ಚು ಒತ್ತಡದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರ ಅದ್ಭುತ ಪ್ರದರ್ಶನ ಒಂದು ಕಡೆಯಾದರೆ, ಮತ್ತೊಂದು ಕಡೆ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ಅಶ್ವಿನ್ ಅವರ ಬುದ್ಧಿವಂತ ಬ್ಯಾಟಿಂಗ್ ಮತ್ತೊಂದು ಕಡೆ.
19ನೇ ಓವರ್ ನಲ್ಲಿ 6 ಎಸೆತಕ್ಕೆ 16 ರನ್ ಬೇಕಿದ್ದಾಗ, 19ನೇ ಓವರ್ ನ ಮೊದಲ ಬಾಲ್ ನಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದರೂ, ಬಳಿಕ ದಿನೇಶ್ ಕಾರ್ತಿಕ್ ಅವರು ಬಂದರು, ವಿರಾಟ್ ಕೋಹ್ಲಿ ಅವಡಿ ಉತ್ತಮ ಪ್ರದರ್ಶನ ನೀಡುತ್ತಿದ್ದರು, 1 ಎಸೆತಕ್ಕೆ ಎರಡು ರನ್ ಬಾಕಿ ಇರುವಾಗ, ಕ್ರೀಸ್ ಗೆ ಬಂದರು ಅಶ್ವಿನ್. ಅಶ್ವಿನ್ ಅವರು ಫೇಸ್ ಮಾಡಿದ ಮೊದಲ ಬಾಲ್ ವೈಡ್ ಆಯಿತು. ಬೇರೆ ಆಟಗಾರ ಇದ್ದಿದ್ದರೆ ಆ ಬಾಲ್ ಅನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದರು, ಆದರೆ ಬಾಲ್ ಕಡೆಗೆ ಗಮನ ಹರಿಸಿದ್ದ ಅಶ್ವಿನ್ ಅವರು, ಸುಮ್ಮನೆ ನಿಂತರು. ನಂತರ ಕೊನೆಯ ಎಸೆತದಲ್ಲಿ ರನ್ ಕೊಡದ ಹಾಗೆ ಫೀಲ್ಡರ್ ಗಳು ಹತ್ತಿರವೇ ನಿಂತಿದ್ದಾಗ, ಅಶ್ವಿನ್ ಅವರು ಫೀಲ್ಡರ್ ಗಳ ಮೇಲೆ ಹೊಡೆದು, ಬಾಲ್ ಅನ್ನು ಬೌಂಡರಿ ಕಡೆಗೆ ಕಳಿಸಿದರ, ಕೊನೆಗೆ ಭಾರತ ತಂಡ ಗೆದ್ದಿತು.
ತಂಡದ ಗೆಲುವಿನ ಬಳಿಕ ಅಶ್ವಿನ್ ಅವರು ಸಂದರ್ಶನದಲ್ಲಿ ಪಾಲ್ಗೊಂಡಾಗ ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು. ಒಂದು ವೇಳೆ ವೈಡ್ ಆಗೇಬೇಕಿದ್ದ ಬಾಲ್, ಪ್ಯಾಡ್ ಗೆ ತಗುಲಿ, ಔಟ್ ಆಗಿ ಪಂದ್ಯ ಮುಗಿದು ಹೋಗಿದ್ದರೆ ಏನು ಮಾಡುತ್ತಿದ್ರಿ ಸಂದು ಕೇಳಿದರು, ಅದಕ್ಕೆ ಉತ್ತರ ಕೊಟ್ಟ ಅಶ್ವಿನ್ ಅವರು, “ಆ ರೀತಿ ಆಗಿದ್ದರೆ, ಕೂಡಲೇ ಕ್ರಿಕೆಟ್ ಗೆ ಗುಡ್ ಬೈ ಹೇಳುತ್ತಿದ್ದೆ ಎಂದಿದ್ದಾರೆ. ಔಟ್ ಆಗಿ ಪಂದ್ಯ ಸೋತಿದ್ದರೆ, ತಕ್ಷಣವೇ ಡ್ರೆಸಿಂಗ್ ರೂಮ್ ಗೆ ಹೋಗಿ, ಟ್ವಿಟರ್ ಓಪನ್ ಮಾಡಿ, “ಧನ್ಯವಾದಗಳು.. ಕ್ರಿಕೆಟ್ ನಲ್ಲಿ ನನ್ನ ವೃತ್ತಿಜೀವನದ ಪ್ರಯಾಣ ಅದ್ಭುತವಾಗಿತ್ತು, ಎಲ್ಲರಿಗೂ ಧನ್ಯವಾದ..” ಎಂದು ಟ್ವೀಟ್ ಮಾಡಿ, ವಿದಾಯ ಪಡೆದುಕೊಳ್ಳುತ್ತಿದ್ದೆ ಎಂದು ತಮಾಷೆ ಮಾಡಿದ್ದಾರೆ ಅಶ್ವಿನ್.