ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಯಂಕರ ಗ್ರಹಣ ಅಮವ್ಯಾಸೆ ಮುಗಿದ ಕೂಡ ಸೃಷ್ಟಿಯಾಗುತ್ತಿದೆ ಲಕ್ಷ್ಮಿ-ನಾರಾಯಣ ಯೋಗ: ಇದರಿಂದ ಅದೃಷ್ಟವನ್ನು ಪಡೆಯುತ್ತಿರುವ ಮೂರು ರಾಶಿಗಳು ಯಾವುವು ಗೊತ್ತೆ??

ಭಯಂಕರ ಗ್ರಹಣ ಅಮವ್ಯಾಸೆ ಮುಗಿದ ಕೂಡ ಸೃಷ್ಟಿಯಾಗುತ್ತಿದೆ ಲಕ್ಷ್ಮಿ-ನಾರಾಯಣ ಯೋಗ: ಇದರಿಂದ ಅದೃಷ್ಟವನ್ನು ಪಡೆಯುತ್ತಿರುವ ಮೂರು ರಾಶಿಗಳು ಯಾವುವು ಗೊತ್ತೆ??

343

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ಜೀವರಾಶಿಗಳ ಮೇಲೆ, ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಬದಲಾವಣೆ ಇಂದ ರಾಶಿಗಳ ಜೀವನವೇ ಬದಲಾಗಬಹುದು. ಮೊನ್ನೆಯಷ್ಟೇ ಸೂರ್ಯಗ್ರಹಣ ಮುಗಿದಿದ್ದು, ಗ್ರಹಣದ ಬಳಿಕ ಬುಧಗ್ರಹವು ತನ್ನ ಸ್ಥಾನ ಬದಲಾವಣೆ ಮಾಡಿದೆ. ಅಕ್ಟೋಬರ್ 26ರಂದು ನಿನ್ನೆ, ಬುಧ ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಿದೆ. ಈಗಾಗಲೇ ತುಲಾ ರಾಶಿಯಲ್ಲಿ ಶುಕ್ರ, ಸೂರ್ಯ ಮತ್ತು ಕೇತು ಗ್ರಹ ಇದ್ದು, ಬುಧ ರಾಶಿಯು ಪ್ರವೇಶ ಮಾಡುತ್ತಿರುವುದರಿಂದ, ತುಲಾ ರಾಶಿಯಲ್ಲಿ ಶುಕ್ರ ಮತ್ತು ಬುಧನ ಸಂಯೋಗ ಉಂಟಾಗುತ್ತದೆ. ಇದರಿಂದಾಗಿ, ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತಿದ್ದು, ಈ ಯೋಗದಿಂದ ಮೂರು ರಾಶಿಯವರಿಗೆ ಮಂಗಳಕರ ಫಲ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

Follow us on Google News

ಕನ್ಯಾ ರಾಶಿ :- ಬುಧ ಮತ್ತು ಶುಕ್ರರಿಂದ ರೂಪುಗೊಂಡಿರುವ ಲಕ್ಷ್ಮೀನಾರಾಯಣ ಯೋಗವು ಕನ್ಯಾ ರಾಶಿಗೆ ಶುಭಫಲಗಳನ್ನು ತಂದುಕೊಡುತ್ತದೆ. ಇದರಿಂದ ನಿಮ್ಮ ಆದಾಯದ ಮೂಲ ಹೆಚ್ಚಾಗುತ್ತದೆ, ಬಹಳಷ್ಟು ಧನಲಾಭ ಪಡೆಯುತ್ತೀರಿ. ಸಾಲದ ತೊಂದರೆಯಿಂದ ಮುಕ್ತಿ ಪಡೆಯುತ್ತೀರಿ. ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣ ವಾಪಸ್ ನಿಮ್ಮ ಕೈ ಸೇರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಹಣಗಳಿಸಲು ಹೊಸ ಮಾರ್ಗಗಳು ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ವರ್ಕ್ ಲೋಡ್ ಹೆಚ್ಚಾಗಬಹುದು.

ಧನು ರಾಶಿ :- ತುಲಾ ರಾಶಿಗೆ ಬುಧನ ಪ್ರವೇಶ ಆಗಿರುವುದರಿಂದ ರೂಪುಗೊಂಡಿರುವ ಲಕ್ಷ್ಮೀನಾರಾಯಣ ಯೋಗ ಧನು ರಾಶಿಯವರಿಗೆ ವರದಾನದ ಹಾಗೆ ಫಲ ಕೊಡುತ್ತದೆ. ಈ ಸಮಯದಲ್ಲಿ ನಿರೀಕ್ಷೆ ಮಾಡದೆ ಏಳಿಗೆ ಕಾಣುತ್ತೀರಿ, ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಜಾಸ್ತಿಯಾಗುತ್ತದೆ. ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದಲ್ಲಿ ಸಂತೋಷ ಇರುತ್ತದೆ, ಬ್ಯುಸಿನೆಸ್ ವೃದ್ಧಿಯಾಗುತ್ತದೆ. ಅದೃಷ್ಟ ನಿಮ್ಮ ಕೈಹಿಡಿಯುತ್ತದೆ.

ಮಕರ ರಾಶಿ :- ಬುಧ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಂಡಿರುವ ಲಕ್ಷ್ಮೀನಾರಾಯಣ ಯೋಗ ಮಕರ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಲಾಭ ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ದೃಢವಾಗಿರುತ್ತೀರಿ, ಬೇರೆ ಕಡೆ ಸಿಕ್ಕಿಕೊಂಡಿದ್ದ ನಿಮ್ಮ ಹಣ ವಾಪಸ್ ಬರುತ್ತದೆ. ಉನ್ನತ ಅಧಿಕಾರಿಗಳ ಮೆಚ್ಚುಗೆ ಸಿಗುತ್ತದೆ. ನಿಮ್ಮ ಮನೆಯಲ್ಲಿ ಆನಂದ ಇರುತ್ತದೆ.