ಕಳಪೆ ಫಾರ್ಮ್ ನಲ್ಲಿರುವ ರಾಹುಲ್ ರವರ ಸ್ಥಾನವನ್ನು ಸಮರ್ಥವಾಗಿ ತುಂಬವಾಗಿ ಏಕೈಕ ಆಟಗಾರ ಯಾರು ಗೊತ್ತಾ ದೀಪಕ್ ಹೂಡಾ ಅಲ್ಲ ಮತ್ಯಾರು?
ಕಳಪೆ ಫಾರ್ಮ್ ನಲ್ಲಿರುವ ರಾಹುಲ್ ರವರ ಸ್ಥಾನವನ್ನು ಸಮರ್ಥವಾಗಿ ತುಂಬವಾಗಿ ಏಕೈಕ ಆಟಗಾರ ಯಾರು ಗೊತ್ತಾ ದೀಪಕ್ ಹೂಡಾ ಅಲ್ಲ ಮತ್ಯಾರು?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ನಲ್ಲಿ ಕೆ ಎಲ್ ರಾಹುಲ್ ರವರ ಫಾರ್ಮ್ ನಿಜಕ್ಕೂ ಆತಂಕ ತರಿಸಿದೆ. ವಿಶ್ವ ಕಪ್ ಟೂರ್ನಿಗೂ ಮುನ್ನವೇ ಫಾಮ್ ಕಳೆದುಕೊಂಡಿದ್ದ ಕೆ ಎಲ್ ರಾಹುಲ್ ರವರು ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಖಂಡಿತ ವಿಶ್ವಕಪ್ ನಲ್ಲಿ ಮಿಂಚುತ್ತಾರೆ ಎನ್ನುವ ಭರವಸೆ ಮೂಡಿತು.
ಆದರೆ ಅದು ಕೂಡ ನಿರಾಸೆಯಾಗಿದೆ ಆಟವಾಡಿದ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಎಲ್ ರಾಹುಲ್ ರವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇನ್ನು ಎರಡನೇ ಪಂದ್ಯ ನೆದರ್ಲ್ಯಾಂಡ್ ವಿರುದ್ಧ ನಡೆಯಲಿದ್ದು ಕೆ ಎಲ್ ರಾಹುಲ್ ರವರಿಗೆ ಅವಕಾಶ ನೀಡಿದರೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಲೇಖನವನ್ನು ಬರೆಯುವ ಹೊತ್ತಿಗೆ ನೆದರ್ಲ್ಯಾಂಡ್ ತಂಡದ ಜೊತೆಗಿನ ಪಂದ್ಯ ಆರಂಭವಾಗಿಲ್ಲ, ಒಂದು ವೇಳೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ರವರು ಫಾರ್ಮ್ ಕಂಡುಕೊಂಡರೆ ನಿಜಕ್ಕೂ ಭಾರತಕ್ಕೆ ಅದು ಸಿಹಿ ಸುದ್ದಿಯೇ ಆಗಿರಲಿದೆ
ಒಂದು ವೇಳೆ ಕೆ ಎಲ್ ರಾಹುಲ್ ರವರು ಈ ಪಂದ್ಯದಲ್ಲಿ ಕೂಡ ವಿಫಲವಾದರೇ ಭಾರತ ಖಂಡಿತ ಮುಂದಿನ ಪಂದ್ಯಗಳಲ್ಲಿ ಕೆ ಎಲ್ ರಾಹುಲ್ ರವರ ತಂಡಕ್ಕೆ ಮತ್ತೊಬ್ಬ ಆಟಗಾರರನ್ನು ಕರೆತರುವ ಆಲೋಚನೆ ನಡೆಸಲಿದೆ ಹಾಗೂ ಈ ಸಾಲಿನಲ್ಲಿ ಎರಡು ಆಟಗಾರರ ನಡುವೆ ಬಾರಿ ಪೈಪೋಟಿ ಇದ್ದು ದೀಪಕ್ ಹೂಡಾ ರವರು ಮೊದಲನೇ ಆಯ್ಕೆಯಾಗಿದ್ದರೂ ಕೂಡ ಭಾರತ ತಂಡ ಶೇಕಡ 90 ರಷ್ಟು ಭಾಗ ದೀಪಕ್ ಹೂಡಾ ರವರಿಗೆ ಅವಕಾಶ ನೀಡುವುದು ಅನುಮಾನವೇ ಸರಿ. ದೀಪಕ್ ಹೂಡಾ ರಾವರಿಗಿಂತ ರಿಷಬ್ ಪಂತ್ ರವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದರೆ ರಿಷಬ್ ಪಂತ್ ರವರು ಎಡಗೈ ಬ್ಯಾಟ್ಸ್ಮನ್ ಆಗಿದ್ದು ಖಂಡಿತವಾಗಲೂ ಪವರ್ ಪ್ಲೇನಲ್ಲಿ ಉತ್ತಮ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ, ಇವರು ಎಡಗೈ ಬ್ಯಾಟ್ಸಮನ್ ಆಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿರಲಿದೆ.