ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿರಾಟ್ ನಿವೃತ್ತಿಯಾಗಲಿ ಎಂದು ಸಲಹೆ ಕೊಟ್ಟ ಅಕ್ತರ್ ರವರಿಗೆ ಸರಿಯಾಗಿಯೇ ತಿರುಗೇಟು ಕೊಟ್ಟ ಫ್ಯಾನ್ಸ್. ಹೇಗಿತ್ತು ಗೊತ್ತೇ ಪ್ರತಿಕ್ರಿಯೆ??

1,067

Get real time updates directly on you device, subscribe now.

ಭಾರತ ತಂಡದ ಶ್ರೇಷ್ಠ ಆಟಗಾರ, ವಿಶ್ವಮಟ್ಟದಲ್ಲಿ ಬೆಸ್ಟ್ ಪ್ಲೇಯರ್ ಎಂದು ಗುರುತಿಸಿಕೊಂಡಿರುವ ವಿರಾಟ್ ಕೋಹ್ಲಿ ಅವರ ಬಗ್ಗೆ ಇಂದು ಇಡೀ ವಿಶ್ವವೇ ಮಾತನಾಡುತ್ತಿದೆ. ವಿರಾಟ್ ಅವರು ಭಾನುವಾರ ನಡೆದ ಪಂದ್ಯದಲ್ಲಿ ಸಿಡಿಸಿದ ಇನ್ನಿಂಗ್ಸ್ ಆ ರೀತಿ ಇತ್ತು. ವಿರಾಟ್ ಅವರು ಭಾರತ ತಂಡ ಒತ್ತಡದಲ್ಲಿದ್ದಾಗ, ಅದ್ಭುತವಾಗಿ ಸಿಕ್ಸರ್ ಬೌಂಡರಿ ಭಾರಿಸಿ, 53 ಎಸೆತಗಳಲ್ಲಿ ಬರೋಬ್ಬರಿ 82 ರನ್ ಭಾರಿಸಿ, ಭಾರತ ತಂಡಕ್ಕೆ ಗೆಲುವು ತಂದುಕೊಟ್ಟರು. ಬಹಳ ಸಮಯದ ನಂತರ ಫಾರ್ಮ್ ಗೆ ಮರಳಿರುವ ಕೋಹ್ಲಿ ಅವರು, ಮುಂಬರುವ ಪಂದ್ಯಗಳಲ್ಲಿ ಇನ್ನು ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ.

ಕೋಹ್ಲಿ ಅವರ ಬಗ್ಗೆ ಕ್ರಿಕೆಟ್ ಪಂಡಿತರು, ಹಿರಿಯ ಕ್ರಿಕೆಟ್ ಆಟಗಾರರು ಮತ್ತು ವಿಶ್ವಮಟ್ಟದಲ್ಲಿ ಎಲ್ಲರೂ ಕೋಹ್ಲಿ ಅವರಿಗೆ ಪ್ರಶಂಸೆ ನೀಡುತ್ತಿರುವಾಗ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಕ್ತರ್ ಅವರು, ವಿರಾಟ್ ಕೋಹ್ಲಿ ಅವರು ಟಿ20 ಪಂದ್ಯಳಿಂದ ನಿವೃತ್ತಿ ಹೊಂದಲಿ ಎಂದು ನಾನು ಬಯಸುತ್ತೇನೆ, ಅವರು ಪೂರ್ತಿ ಶಕ್ತಿಯನ್ನು ಈ ಪಂದ್ಯಗಳ ಮೇಲೆ ಹಾಕುತ್ತಿದ್ದಾರೆ, ಇದರ ಬದಲಾಗಿ ಓಡಿಐ ಮತ್ತು ಟೆಸ್ಟ್ ಕ್ರಿಕೆಟ್ ಗೆ ಇದೇ ಎಫರ್ಟ್ಸ್ ಹಾಕಿದರೆ 3 ಸೆಂಚುರಿ ಭಾರಿಸಬಹುದು ಎಂದು ತಮ್ಮ ಯೂಟ್ಯೂಬ್ ಚಾನೆಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದರು. ಶೋಯೆಬ್ ಅಕ್ತರ್ ಅವರು ಈ ಹೇಳಿಕೆ ಇಂದ, ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ, ರನ್ ಮಷಿನ್ ಅಭಿಮಾನಿಗಳು ಪಾಕಿಸ್ತಾನಿ ಆಟಗಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ವೀಟ್ ಮೂಲಕ ಅಭಿಮಾನಿಗಳು ಶೋಯೆಬ್ ಅಕ್ತರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. “ವಿರಾಟ್ ಕೋಹ್ಲಿ ರಿಟೈರ್ ಆಗುವವರೆಗು ಪಾಕಿಸ್ತಾನ್ ತಂಡ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಆತನಿಗೆ ಗೊತ್ತಿದೆ. ಅದರಿಂದಲೇ ಹೀಗೆಲ್ಲಾ ಹೇಳುತ್ತಿದ್ದಾನೆ. ಇಷ್ಟು ಅವಸರ ಯಾಕೆ, ನಿಮ್ಮ ವಿರುದ್ಧ ಆಡುವುದು ಇನ್ನು ಬಾಕಿ ಇದೆ..” ಎಂದಿದ್ದಾರೆ ಒಬ್ಬ ಅಭಿಮಾನಿ. ಮತ್ತೊಬ್ಬರು, “ಚಿಂತೆ ಮಾಡಬೇಡಿ ಶೋಯೆಬ್..ಇಡೀ ಪ್ರಪಂಚದಲ್ಲಿ ಅತಿಹೆಚ್ಚು ಎನರ್ಜಿ ಹೊಂದಿರುವ ಪ್ಲೇಯರ್ ವಿರಾಟ್ ಅವರು.. ತಮ್ಮ ವರ್ಕ್ ಲೋಡ್ ಮ್ಯಾನೇಜ್ ಮಾಡಲು, ಕ್ಯಾಪ್ಟನ್ಸಿ ಇಂದ ಹೊರಬಂದಿದ್ದಾರೆ. ಪಾಕಿಸ್ತಾನ್ ವಿರುದ್ಧ ಓಡಿಐ ನಲ್ಲಿ ಮತ್ತು ಟಿ20 ಯಲ್ಲಿ ರನ್ ಸಿಡಿಸುತ್ತಾರೆ..” ಎಂದಿದ್ದಾರೆ. ಇನ್ನೊಬ್ಬ ಅಭಿಮಾನಿ, “ಅವರು ಆಡುವುದು ರೆಕಾರ್ಡ್ ಮಾಡುವ ಸಲುವಾಗಿ ಅಲ್ಲ, ದೇಶಕ್ಕಾಗಿ..” ಎಂದಿದ್ದಾರೆ. ಈ ರೀತಿ ಶೋಯೆಬ್ ಅಕ್ತರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಅಭಿಮಾನಿಗಳು.

Get real time updates directly on you device, subscribe now.