ಪಂದ್ಯ ಗೆದ್ದಿರಬಹುದು,ಅ ಆದರೆ ಆತನೊಬ್ಬ ಹೊರಹೋಗಿ, ಖಡಕ್ ಬ್ಯಾಟ್ಸಮನ್ ಎಂಟ್ರಿ ತಂಡ ಸೇರಿದರೆ ವಿಶ್ವಕಪ್ ನಮ್ಮದೇ. ಯಾರು ಹೋಗಿ ಯಾರು ಬರಬೇಕು ಗೊತ್ತೆ?
ಪಂದ್ಯ ಗೆದ್ದಿರಬಹುದು,ಅ ಆದರೆ ಆತನೊಬ್ಬ ಹೊರಹೋಗಿ, ಖಡಕ್ ಬ್ಯಾಟ್ಸಮನ್ ಎಂಟ್ರಿ ತಂಡ ಸೇರಿದರೆ ವಿಶ್ವಕಪ್ ನಮ್ಮದೇ. ಯಾರು ಹೋಗಿ ಯಾರು ಬರಬೇಕು ಗೊತ್ತೆ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲಿ ಬಗ್ಗು ಬಡಿಯುವ ಮೂಲಕ ವಿಶ್ವ ಟೂರ್ನಿಯನ್ನು ಶುಭಾರಂಭ ಮಾಡಿದೆ. ಬಹಳ ರೋಚಕ ಅಂತ ತಲುಪಿದ ಪಂದ್ಯವನ್ನು ಕೊನೆಯಲ್ಲಿ ವಿರಾಟ್ ಕೊಹ್ಲಿ ರವರು ಹಾಗೂ ಹಾರ್ದಿಕ ಪಾಂಡ್ಯ ರವರ ಪ್ರಬುದ್ಧ ಆಟ ಭಾರತ ಕ್ರಿಕೆಟ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಭಾರತ ಪಂದ್ಯ ಗೆದ್ದಿದ್ದರೂ ಕೂಡ ಭಾರತ ತಂಡ ಎದುರಿಸಿದ ಸಮಸ್ಯೆಗಳು ಎದ್ದು ಕಾಣುತ್ತಿತ್ತು.
ಅದರಲ್ಲಿಯೂ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟ ಪಡೆಯಬೇಕು ಎಂದರೆ ಎಲ್ಲಾ ವಿಭಾಗಗಳಲ್ಲಿಯೂ ಕೂಡ ಭಾರತ ತಂಡ ಬಲಿಷ್ಠವಾಗಿರಬೇಕು. ಆದ ಕಾರಣ ಪ್ರತಿಯೊಂದು ಆಟಗಾರರ ವೈಯಕ್ತಿಕ ಪ್ರದರ್ಶನ ನೋಡಿ ಮುಂದಿನ ಪಂದ್ಯಗಳಿಗೆ ಆಟಗಾರರನ್ನು ಬದಲಾಯಿಸಿ ಪ್ರಯೋಗ ಮಾಡಿದರೆ ಭಾರತ ತಂಡ ಮತ್ತಷ್ಟು ಸುಲಭವಾಗಿ ಗೆಲುವು ಕಾಣಬಹುದು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
ಹೌದು ಸ್ನೇಹಿತರೇ, ಭಾರತ ಕ್ರಿಕೆಟ್ ತಂಡ ಮೊದಲ ಪಂದ್ಯ ಗೆದ್ದ ಬಳಿಕ ಸಂಭ್ರಮ ಮನೆ ಮಾಡಿತ್ತು. ಇದಾದ ಬಳಿಕ ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳು ಆರಂಭವಾಗಿದ್ದು ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಬದಲಾಯಿಸಬೇಕು ಹಾಗೂ ಇನ್ನೂ ಕೆಲವು ಆಟಗಾರರ ಕ್ರಮಾಂಕ ಬದಲಾಯಿಸಿದರೆ ಭಾರತ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡಬಹುದು ಎಂಬ ಲೆಕ್ಕಾಚಾರಗಳು ಈಗಾಗಲೇ ಆರಂಭಗೊಂಡಿದೆ. ಅದರಲ್ಲಿಯೂ ಪ್ರಮುಖವಾಗಿ ಕೇಳಿ ಬರುತ್ತಿರುವ ಪ್ರಶ್ನೆಗಳ ಕುರಿತು ಇಂದು ನಾವು ತಿಳಿಸುತ್ತೇವೆ.
ಇನ್ನು ಮೊದಲ ಭಾರತ ವಿರುದ್ಧದ ಪಂದ್ಯದಲ್ಲಿ ಎರಡು ಆಟಗಾರರ ಪ್ರದರ್ಶನದ ಮೇಲೆ ಭಾರಿ ಪ್ರಶ್ನೆಗಳು ಎದುರಾಗಿದ್ದು ಮೊದಲನೇ ಪ್ರಶ್ನೆ ಎಲ್ಲರಿಗೂ ತಿಳಿದಿರುವಂತೆ ರೋಹಿತ್ ಶರ್ಮ ರವರ ಫಾರ್ಮ್ ಎಲ್ಲರಿಗೂ ಬಾರಿ ಆತಂಕ ಮೂಡಿಸಿದೆ. ಯಾಕೆಂದರೆ ರೋಹಿತ್ ಶರ್ಮಾ ರವರು ಹಲವಾರು ತಿಂಗಳುಗಳಿಂದ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅದೇ ಕಾರಣಕ್ಕೆ ಪಾಕ್ ವಿರುದ್ಧದ ಪಂದ್ಯದ ಬಳಿಕ ವಿರೋಹಿತ್ ಶರ್ಮಾ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡ ಪ್ರಸಂಗ ಕೂಡ ನಡೆದಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನೀವು ಈ ಲಿಂಕ್ ನಲ್ಲಿ ಓದಬಹುದಾಗಿದೆ.
ಇನ್ನು ಎರಡನೇ ಪ್ರಶ್ನೆ ಕೇಳಿ ಬಂದಿರುವುದು ಮತ್ತೊಬ್ಬ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ರವರ ಆಟದ ಬಗ್ಗೆ, ಹೌದು ಸ್ನೇಹಿತರೆ ಹಲವಾರು ದಿನಗಳಿಂದ ರಾಹುಲ್ ರವರ ಆಟದ ಬಗ್ಗೆ ಪ್ರಶ್ನೆಗಳು ಮೂಡಿ ಬರುತ್ತಿರುವಾಗ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಹುಲ್ ರವರು ವಿಶ್ವಕಪ್ ನಲ್ಲಿ ಮಿಂಚುತ್ತಾರೆ ಎಂಬ ಭರವಸೆ ಮೂಡಿಸಿದ್ದರು. ಅಭ್ಯಾಸ ಪಂದ್ಯದಲ್ಲಿ ಯಾವುದೇ ಒತ್ತಡ ಇಲ್ಲದೆ ಬಹಳ ಸುಲಭವಾಗಿ ಬ್ಯಾಟ್ ಬೀಸಿದ ಕಾರಣ ರನ್ ಗಳಿಸಿದ್ದರು. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಲ್ ಗಳನ್ನು ಟಚ್ ಮಾಡಲು ಕೂಡ ಅವರು ಹಿಂದೆ ಮುಂದೆ ನೋಡುತ್ತಿದ್ದರು ಇದು ಸ್ಪಷ್ಟವಾಗಿ ಎಲ್ಲರ ಕಣ್ಣಿಗೂ ಕಾಣುತ್ತಿತ್ತು.
ಬಾಲ್ ಗಳನ್ನು ಟಚ್ ಮಾಡಲು ಕೂಡ ಹಿಂದೆ ಮುಂದೆ ನೋಡುತ್ತಿದ್ದ ರಾಹುಲ್ ರವರು ಕೇವಲ ನಾಲ್ಕು ರನ್ ಗಳಿಸುವುದರಲ್ಲಿ ಮಾತ್ರ ಯಶಸ್ವಿಯಾದರು. ಆದ ಕಾರಣ ಮುಂದಿನ ಪಂದ್ಯದಲ್ಲಿ ರಾಹುಲ್ ರವರನ್ನು ಹೊರಕ್ಕೆ ಕಳುಹಿಸಿ ಅತ್ಯುತ್ತಮ ಫಾರ್ಮ್ ನಲ್ಲಿರುವ ದೀಪಕ್ ಕೂಡ ರವರನ್ನು ಆಯ್ಕೆ ಮಾಡಿದರೆ ಆರಂಭಿಕರಾಗಿ ಉತ್ತಮ ಪ್ರಯೋಗ ಮಾಡಬಹುದು. ಇನ್ನು ಮುಂದಿನ ಪಂದ್ಯ ನೆದರ್ಲ್ಯಾಂಡ್ ತಂಡದ ಮೇಲಿರುವ ಕಾರಣ ಭಾರತ ಖಂಡಿತವಾಗಲೂ ಸುಲಭವಾಗಿ ಜಯ ಸಾಧಿಸಬಹುದು. ಇಂತಹ ಸಮಯದಲ್ಲಿ ಅತ್ಯುತ್ತಮ ಬದಲಾವಣೆ ಮಾಡಿ ದೀಪಕ್ ಹೂಡಾ ರವರನ್ನು ಕೆ ಎಲ್ ರಾಹುಲ್ ರವರ ಸ್ಥಾನದಲ್ಲಿ ಆಟವಾಡಿಸಿದರೆ ಪ್ರಯೋಗ ಮಾಡಿದಂತೆ ಆಗುತ್ತದೆ. ಹಾಗೂ ಭಾರತಕ್ಕೆ ಪ್ರಯೋಗ ಮಾಡಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದು ಇಲ್ಲ ಎಂಬುದು ಕ್ರಿಕೆಟ್ ತಜ್ಞರ ಅಭಿಪ್ರಾಯವಾಗಿದೆ ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.