ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬದಲಾಯಿತು ಸೂರ್ಯನ ಸ್ಥಾನ: ಈ ರಾಶಿಗಳಿಗೆ ಸೂರ್ಯ ದೇವನ ಕೃಪೆಯಿಂದ ಬಾರಿ ಅದೃಷ್ಟ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??

2,360

Get real time updates directly on you device, subscribe now.

ನಮಗೆಲ್ಲ ಗೊತ್ತಿರುವ ಹಾಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಗ್ರಹಗಳ ಸ್ಥಾನ ಬದಲಾವಣೆ, ಸಂಚಾರ, ಚಲನೆ ಇದೆಲ್ಲದರ ಪರಿಣಾಮ ರಾಶಿಗಳ ಮೇಲೆ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಾನ ಬದಲಾವಣೆ ಮಾಡಿದರೆ, 12 ರಾಶಿಗಳಲ್ಲಿ, ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ, ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಈ ವರ್ಷ ಅಕ್ಟೋಬರ್ 17ರಂದು ಸೂರ್ಯದೇವನು ತುಲಾ ರಾಶಿಗೆ ಪ್ರವೇಶ ಮಾಡಿದ್ದಾನೆ, ಇದರಿಂದಾಗಿ ಹಲವು ರಾಶಿಗಳ ಮೇಲೆ ಶುಭಫಲ ಸಿಗುವುದಿಲ್ಲ. ತುಲಾ ರಾಶಿಯ ಅಧಿಪತಿ ಶುಕ್ರ ಆಗಿದ್ದು, ಶುಕ್ರ ಮತ್ತು ಸೂರ್ಯ ವೈರಿ ಗ್ರಹಗಳಾಗಿರುವ ಕಾರಣ, ತುಲಾ ರಾಶಿಯವರಿಗೆ ಮತ್ತು ಇನ್ನು ಕೆಲವು ರಾಶಿಯವರ ಮೇಲೆ ಶುಭ ಪರಿಣಾಮ ಬೀರುವುದಿಲ್ಲ. ಆದರೆ ಎರಡು ರಾಶಿಗಳು ಮಾತ್ರ, ಈ ಸಮಯದಲ್ಲಿ ಒಳ್ಳೆಯ ಪ್ರಯೋಜನ ಪಡೆಯುತ್ತಾರೆ, ವೃತ್ತಿ ಜೀವನದಲ್ಲಿ ಏಳಿಗೆ ಸಾಧಿಸುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಸೂರ್ಯದೇವನು ತುಲಾ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ, ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಮಿಥುನ ರಾಶಿಯ ಐದನೇ ಮನೆಗೆ ಸೂರ್ಯದೇವ ಪ್ರವೇಶ ಮಾಡಲಿದ್ದಾನೆ, ಈ ಮನೆಯನ್ನು ಪ್ರೀತಿ, ಮಕ್ಕಳು, ಮನೆ, ಉನ್ನತ ವಿದ್ಯಾಭ್ಯಾಸದ ಮನೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನೀವು ಮಕ್ಕಳನ್ನು ಪಡೆಯಬಹುದು. ಮಕ್ಕಳಿರುವವರಿಗೆ, ಮಕ್ಕಳ ಕಡೆಯಿಂದ ಶುಭಸುದ್ದಿ ಪಡೆಯಬಹುದು. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಹೊಸ ಕೆಲಸ ಸಿಗುತ್ತದೆ. ಈ ರಾಶಿಯ ಅಧಿಪತಿ ಬುಧ, ಸೂರ್ಯ ಮತ್ತು ಬುಧ ಸ್ನೇಹಮಯ ಗ್ರಹಗಳಾಗಿರುವ ಕಾರಣ ಈ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ.

ವೃಷಭ ರಾಶಿ :- ಸೂರ್ಯದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುವ ಹಾಗೆ ಮಾಡುತ್ತದೆ. ವೃಷಭ ರಾಶಿಯವರ 6ನೇ ಮನೆಗೆ ಸೂರ್ಯನ ಪ್ರವೇಶ ಆಗಲಿದೆ, ಈ ಮನೆ ರೋಗ ಮತ್ತು ಶತ್ರುಗಳ ಮನೆ ಆಗಿದೆ, ಅದರಿಂದಾಗಿ ಈ ಸಮಯದಲ್ಲಿ ಜನರಿಗೆ ಧೈರ್ಯ ಮತ್ತು ಶೌರ್ಯ ಜಾಸ್ತಿಯಾಗುತ್ತದೆ. ಶತ್ರುಗಳ ವಿರುದ್ಧ ಜಯ ಸಾಧಿಸುತ್ತೀರಿ. ಕೋರ್ಟ್ ಕೇಸ್ ಗಳಲ್ಲಿ ಜಯ ನಿಮ್ಮದಾಗುತ್ತದೆ.

Get real time updates directly on you device, subscribe now.