ಪಂದ್ಯಕ್ಕೂ ಮುನ್ನ ಎಚ್ಚರಿಕ್ಕೆ ನೀಡಿದ್ದವನ ಚಳಿ ಬಿಡಿಸಿದ ಕಿಂಗ್: ತಡವಾಗಿ ಬೆಳಕಿಗೆ ಬಂದ ವಿಚಾರ ಏನು ಗೊತ್ತೇ?? ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಮಾಡಿದ ಕೆಲಸ ಏನು ಗೊತ್ತೇ??
ಪಂದ್ಯಕ್ಕೂ ಮುನ್ನ ಎಚ್ಚರಿಕ್ಕೆ ನೀಡಿದ್ದವನ ಚಳಿ ಬಿಡಿಸಿದ ಕಿಂಗ್: ತಡವಾಗಿ ಬೆಳಕಿಗೆ ಬಂದ ವಿಚಾರ ಏನು ಗೊತ್ತೇ?? ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಮಾಡಿದ ಕೆಲಸ ಏನು ಗೊತ್ತೇ??
ಮೊನ್ನೆ ಭಾನುವಾರ ಮೆಲ್ಬೋರ್ನ್ ನ ಎಂಸಿಜಿ ಯಲ್ಲಿ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯ ಶುರು ಆಗುವುದಕ್ಕಿಂತ ಮೊದಲು, ಪಾಕಿಸ್ತಾನ್ ಆಟಗಾರ ಹ್ಯಾರಿಸ್ ರೌಫ್ ಅವರು ಭಾರತ ಆಟಗಾರರಿಗೆ ಇಂಡೈರೆಕ್ಟ್ ಆಗಿ ಎಚ್ಚರಿಕೆ ನೀಡಿದ್ದರು, ಎಂಸಿಜಿ ನನ್ನ ತವರು ಮನೆ ಇದ್ದ ಹಾಗೆ ಎಂದಿದ್ದರು,. ಈ ರೀತಿ ಹೇಳಲು ಕಾರಣ ಏನು ಎಂದರೆ, ಹ್ಯಾರಿಸ್ ಅವರು ಪಾಕಿಸ್ತಾನ್ ತಂಡದಲ್ಲಿ ಸ್ಥಾನ ಪಡೆದಿದ್ದು, ಮೆಲ್ಬೋರ್ನ್ ನಲ್ಲಿ ನಡೆಯುವ ಬಿಗ್ ಬ್ಯಾಶ್ ಲೀಗ್ ನಲ್ಲಿ ಆಡುವ ಮೂಲಕ, ಬಿಬಿಎಲ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪ್ಲೇಯರ್ ಆಗಿರುವ ಹ್ಯಾರಿಸ್ ರೌಫ್ ಅವರಿಗೆ ಅಲ್ಲಿನ ಗ್ರೌಂಡ್ ನ ಬಗ್ಗೆ ಚೆನ್ನಾಗಿ ತಿಳಿದಿತ್ತು, ಹಾಗಾಗಿ ಎಂಸಿಜಿ ತನ್ನ ತವರು ಎಂದು ಹೇಳಿ ಭಾರತದ ಆಟಗಾರರಿಗೆ ವಾರ್ನಿಂಗ್ ಕೊಟ್ಟಿದ್ದರು.
ಎಂಸಿಜಿಯಲ್ಲಿ ಪಂದ್ಯ ನಡೆಯುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ಮೆಲ್ಬೋರ್ನ್ ಸ್ಟಾರ್ಸ್ ತಂಡದಲ್ಲಿ ಆಡಿರುವ ನನಗೆ ಇದು ತವರು ಮನೆ ಇದ್ದ ಹಾಗೆ, ಈ ಗ್ರೌಂಡ್ ನ ಪಿಚ್ ಮತ್ತು ಸ್ಥಿತಿಗತಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಭಾರತ ತಂಡದ ವಿರುದ್ಧ ಹೇಗೆ ಬೌಲಿಂಗ್ ಮಾಡಬೇಕು ಎಂದು ಪ್ಲಾನ್ ಮಾಡಿದ್ದೇನೆ.. ಎಂದು ಹೇಳಿ, ಭಾರತ ತಂಡವನ್ನು ಸೋಲಿಸಲು ಬಹಳ ಆತ್ಮವಿಶ್ವಾಸ ಹೊಂದಿದ್ದರು. ಆದರೆ 19ನೇ ಓವರ್ ನಲ್ಲಿ ಇವರ ಆತ್ಮವಿಶ್ವಾಸ ತಲೆಕೆಳಗಾಯಿತು. ಆಗ 12 ಬಾಲ್ ಗಳಲ್ಲಿ 31 ರನ್ ಗಳ ಅವಶ್ಯಕತೆ ಇತ್ತು. 19ನೇ ಓವರ್ ನಲ್ಲಿ ಬೌಲಿಂಗ್ ಗೆ ಬಂದ ಹ್ಯಾರಿಸ್ ಅವರ ಎಸೆತಗಳಿಗೆ, ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಅವರು ಸಿಂಗಲ್ ಪಡೆದರು, ಎರಡನೇ ಎಸೆತದಲ್ಲಿ ಕೋಹ್ಲಿ ಸಿಂಗಲ್ ಪಡೆದರು, 3ನೇ ಎಸೆತದಲ್ಲಿ ರನ್ ಬರಲಿಲ್ಲ.
4ನೇ ಎಸೆತದಲ್ಲಿ ಮತ್ತೊಂದು ಸಿಂಗಲ್ ಬಂದಿತು. 5ನೇ ಎಸೆತದಲ್ಲಿ 8 ಬಾಲ್ ಗೆ 28 ರನ್ ಗಳ ಅಗತ್ಯವಿದ್ದಾಗ, ಹ್ಯಾರಿಸ್ ಅವರು ಹಾಕಿದ ಐದನೇ ಬಾಲ್ ನಲ್ಲಿ ಸಿಕ್ಸರ್ ಸಿಡಿಸಿದ ಕೋಹ್ಲಿ ಅವರು, 6ನೇ ಬಾಲ್ ನಲ್ಲಿ ಮತ್ತೊಂದು ಸಿಕ್ಸರ್ ಭಾರಿಸಿ, 6 ಬಾಲ್ ಗಳಿಗೆ 16 ರನ್ ಹಂತಕ್ಕೆ ತಂದು ನಿಲ್ಲಿಸಿದರು. ಈ ಮೂಲಕ ಹ್ಯಾರಿಸ್ ಪ್ಲಾನ್ ಅನ್ನು ತಲೆಕೆಳಗೆ ಮಾಡಿದರು ಕೋಹ್ಲಿ, ವಿರಾಟ್ ಅವರ ಈ ಬಿಗ್ ಹಿಟ್ಸ್ ನೋಡಿ ಶಾಕ್ ಆದ ಹ್ಯಾರಿಸ್ ಸಪ್ಪೆ ಮುಖ ಹಾಕಿಕೊಂಡು ಹೋದರು. ಕೊನೆಯ ಓವರ್ ನಲ್ಲಿ ನಿಜಕ್ಕೂ ಮ್ಯಾಜಿಕ್ ನಡೆದು, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಗೆದ್ದು, ವಿಶ್ವಕಪ್ ಜರ್ನಿಯನ್ನು ಗೆಲುವಿನ ಮೂಲಕ ಶುರು ಮಾಡಿತು.