ಪಂದ್ಯ ಸೋತ ಬಳಿಕ ಶುರುವಾಯಿತು ಪಾಕ್ ನ ಹೊಸ ನಾಟಕ: ಪಂದ್ಯದಲ್ಲಿ ಅನ್ಯಾಯವಾಗಿದೆ ಎಂದ ಪಾಕ್ ಸಂಸ್ಥೆ ಅಧ್ಯಕ್ಷ. ಹೇಗೆ ಅಂತೇ ಗೊತ್ತೇ??

ಪಂದ್ಯ ಸೋತ ಬಳಿಕ ಶುರುವಾಯಿತು ಪಾಕ್ ನ ಹೊಸ ನಾಟಕ: ಪಂದ್ಯದಲ್ಲಿ ಅನ್ಯಾಯವಾಗಿದೆ ಎಂದ ಪಾಕ್ ಸಂಸ್ಥೆ ಅಧ್ಯಕ್ಷ. ಹೇಗೆ ಅಂತೇ ಗೊತ್ತೇ??

ಭಾನುವಾರ ನಡೆದ ಇಂಡಿಯಾ ಪಾಕಿಸ್ತಾನ್ ಪಂದ್ಯದಲ್ಲಿ ಭಾರತ ತಂಡ ಸಾಧಿಸಿದ ರೋಚಕ ಗೆಲುವನ್ನು ಇಂದಿಗೂ ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ವಿರಾಟ್ ಕೋಹ್ಲಿ ಅವರ ಅದ್ಭುತವಾದ ಇನ್ನಿಂಗ್ಸ್ ಭಾರತ ತಂಡ ಗೆಲುವು ಸಾಧಿಸಲು ಸಾಧ್ಯವಾಯಿತು. 53 ಎಸೆತಗಳಲ್ಲಿ 82 ರನ್ ಸಿಡಿಸಿ, ಕೊನೆಯ ಮೂರು ಓವರ್ ಗಳಲ್ಲಿ, ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ವಿರಾಟ್ ಕೋಹ್ಲಿ ಅವರು ಬ್ಯಾಟಿಂಗ್ ನಲ್ಲಿ ಜಾದು ಮಾಡಿ, ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಭಾರತ ತಂಡದ ಗೆಲುವಿಗೆ ಕಾರಣವಾದರು, ರನ್ ಮಷಿನ್, ಚೇಸ್ ಕಿಂಗ್ ಎಂದಿಗೂ ಬದಲಾಗುವುದಿಲ್ಲ ಎಂದು ಮತ್ತೊಮ್ಮೆ ನಿರೂಪಿಸಿದರು.

ಆದರೆ ಪಂದ್ಯ ಮುಗಿದ ಬಳಿಕ, ಪಾಕಿಸ್ತಾನ್ ಅಭಿಮಾನಿಗಳು, ಮತ್ತು ಆಟಗಾರರು ಇದು ಅನ್ಯಾಯ ಭಾರತ ತಂಡ ಮೋಸದಿಂದ ಗೆದ್ದಿತು ಎನ್ನುತ್ತಿದ್ದಾರೆ. ಭಾರತ ಬ್ಯಾಟಿಂಗ್ ಮಾಡುವಾಗ, ಕೊನೆಯ ಓವರ್ ನಲ್ಲಿ ಗೋಲ್ ಮಾಲ್ ನಡೆಯಿತು ಎನ್ನುತ್ತಿದ್ದಾರೆ ಪಾಕಿಸ್ತಾನಿಗಳು. 19ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಭಾರಿಸಿದರು ಕೋಹ್ಲಿ, ಬಳಿಕ ಅದು ನೋ ಬಾಲ್ ಎಂದು ಅಂಪೈರ್ ನಿರ್ಣಯ ಕೊಟ್ಟರು, ಇದನ್ನು ಪಾಕಿಸ್ತಾನ್ ತಂಡ ಮೈದಾನದಲ್ಲೇ ಪ್ರಶ್ನಿಸಿತು, ಆದರೆ ಅಂಪೈರ್ ನಿರ್ಣಯ ಸರಿಯಾಗಿಯೇ ಇತ್ತು, ಬಳಿಕ ವೈಡ್ ಬಾಲ್ ಹಾಕಿದ್ದು, ಈ ಎಲ್ಲಾ ಸಂದರ್ಭದಿಂದ ಭಾರತ ತಂಡ ಗೆದ್ದಿದೆ, ಆದರೆ ಪಾಕಿಸ್ತಾನ್ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಭಾರತ ಗೆದ್ದಿದ್ದು ಮೋಸ ಎಂದು ಪಾಕಿಸ್ತಾನ್ ಮಾಜಿ ಆಟಗಾರರು ಅಭಿಪ್ರಾಯ ತಿಳಿಸುತ್ತಿದ್ದು, ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜ ಅವರು ಸಹ ಟ್ವೀಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. “ಇದೊಂದು ಕ್ಲಾಸಿಕ್ ಪಂದ್ಯ.. ಕೆಲ ಪಂದ್ಯಗಳಲ್ಲಿ ನೀವು ಗೆಲುವು ನೋಡುತ್ತೀರಿ, ಇನ್ನು ಕೆಲವು ಪಂದ್ಯಗಳಲ್ಲಿ ಸೋಲು ನೋಡುತ್ತೀರಿ..ಈ ಪಂದ್ಯ ಕ್ರೂರವಾಗಿತ್ತು ಮತ್ತು ಅನ್ಯಾಯವಾಗಿತ್ತು ಎಂದು ನಮಗೆಲ್ಲ ಗೊತ್ತಿದೆ. ಟೀಮ್ ಪಾಕಿಸ್ತಾನ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಇನ್ನು ಹೆಚ್ಚಿನ ಕೊಡುಗೆ ನೀಡಬಹುದಿತ್ತು. ಆದರೆ ನಮ್ಮ ಆಟಗಾರರ ಪರಿಶ್ರಮದ ಬಗ್ಗೆ ಹೆಮ್ಮೆ ಇದೆ..” ಎಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರ ಈಗ ತೀವ್ರವಾಗಿ ಚರ್ಚೆಯಾಗುತ್ತಿದೆ.