ವಿವಾದಗಳ ಗೂಡಾಗಿರುವ ಪಾಕ್-ಭಾರತದ ಪಂದ್ಯದಲ್ಲಿ ಗೆಲುವಿಕ ಬಳಿಕ ಅಗ್ರೇಸ್ಸಿವ್ ಆದ ದ್ರಾವಿಡ್: ದ್ರಾವಿಡ್ ಏನು ಮಾಡಿದ್ದಾರೆ ಗೊತ್ತೇ??

ವಿವಾದಗಳ ಗೂಡಾಗಿರುವ ಪಾಕ್-ಭಾರತದ ಪಂದ್ಯದಲ್ಲಿ ಗೆಲುವಿಕ ಬಳಿಕ ಅಗ್ರೇಸ್ಸಿವ್ ಆದ ದ್ರಾವಿಡ್: ದ್ರಾವಿಡ್ ಏನು ಮಾಡಿದ್ದಾರೆ ಗೊತ್ತೇ??

ಭಾನುವಾರ ನಡೆದ ಇಂಡಿಯಾ ಪಾಕಿಸ್ತಾನ್ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿದೆ, ಪಂದ್ಯದಲ್ಲಿ ಭಾರತ ಗೆದ್ದ ರೀತಿ, ಕೊನೆಯ ಮೂರು ಓವರ್ ಗಳಲ್ಲಿ ವಿರಾಟ್ ಕೋಹ್ಲಿ ಅವರ ಮ್ಯಾಜಿಕ್ ಅನ್ನು ಅಭಿಮಾನಿಗಳು ಮರೆಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಭಾನುವಾರದ ಮ್ಯಾಚ್ ನಲ್ಲಿ ನಡೆದ ಕೆಲವು ವಿವಾದಾತ್ಮಕ ಘಟನೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಚರ್ಚೆಯಾಗುತ್ತಿರುವ ಮೊದಲ ವಿಚಾರ ಏನೆಂದರೆ, 6ನೇ ಓವರ್ ನಲ್ಲಿ ಅಕ್ಷರ್ ಪಟೇಲ್ ಅವರ ರನೌಟ್, ಮೊಹಮ್ಮದ್ ರಿಜ್ವಾನ್ ಅವರು, ವಿಕೆಟ್ಸ್ ಗೆ ಬಾಲ್ ತಾಗುವ ಮೊದಲೇ ಸ್ಟಂಪ್ ತೆಗೆದಿದ್ದರು, ಅದಾದ ಬಳಿಕವೇ ಬಾಲ್ ಸ್ಟಂಪ್ಸ್ ಗೆ ತಗುಲಿದೆ, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರಿಯರು ಪ್ರಶ್ನೆ ಮಾಡುತ್ತಿದ್ದಾರೆ.

ಮತ್ತೊಂದು ಘಟನೆ 19ನೇ ಓವರ್ ನಲ್ಲಿ ನಡೆದದ್ದು, ನವಾಜ್ ಅವರು ಬೌಲಿಂಗ್ ಮಾಡುವಾಗ, ಅದು ನೋ ಬಾಲ್ ಆಯಿತು, ಕೋಹ್ಲಿ ಅವರು ನೋ ಬಾಲ್ ಗೆ ಮನವಿ ಮಾಡುವವರೆಗೂ, ಅಂಪೈರ್ ನೋ ಬಾಲ್ ಕೊಟ್ಟಿರಲಿಲ್ಲ, ನೋಬಾಲ್ ಕೊಟ್ಟಿದ್ದಕ್ಕೆ ಪಾಕಿಸ್ತಾನ್ ಆಟಗಾರರು ಅಂಪೈರ್ ಜೊತೆಗೆ ವಾದ ಮಾಡುತ್ತಿದ್ದರು. ನಂತರ ಫ್ರೀ ಹಿಟ್ ನಲ್ಲಿ ವೈಡ್ ಆಯಿತು, ಮತ್ತೊಂದು ಎಸೆತಕ್ಕೆ ಫ್ರೀ ಹಿಟ್ ಮುಂದುವರೆಯಿತು, ಮುಂದಿನ ಎಸೆತದಲ್ಲಿ ಕೋಹ್ಲಿ ಬೌಲ್ಡ್ ಆದರು, ಚೆಂಡು ಸ್ಟಂಪ್ಸ್ ಗೆ ತಾಗಿ, ಬೌಂಡರಿ ಕಡೆಗೆ ಸಾಗಿದಾಗ, ಕೋಹ್ಲಿ ಅವರು ಮತ್ತು ದಿನೇಶ್ ಕಾರ್ತಿಕ್ ಅವರು ರನ್ ಗಾಗಿ ಓಟ ನಡೆಸಿ, ಮೂರು ರನ್ ಪಡೆದರು. ಕ್ರಿಕೆಟ್ ನಿಯಮದ ಪ್ರಕಾರ ಇದು ಬೈಸ್ ರನ್, ಇದರಿಂದಾಗಿ ಪಾಕಿಸ್ತಾನ್ ಆಟಗಾರರು ಅಂಪೈರ್ ಗಳ ಬಳಿ ಪ್ರಶ್ನೆ ಕೇಳಿದರು.

ಇಷ್ಟೆಲ್ಲಾ ಹೈಡ್ರಾಮ ಕಾಂಟ್ರಾವರ್ಸಿ ಜೊತೆಗೆ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಅದ್ಧೂರಿಯಾಗಿ ಗೆಲುವು ಸಾಧಿಸಿತು. ಈ ಗೆಲುವು ಭಾರತದ ಪಾಲಿಗೆ ಬಹಳ ಮುಖ್ಯವಾದ ಗೆಲುವು ಆಗಿತ್ತು. ತಂಡದ ಗೆಲುವು ಎಲ್ಲರನ್ನು ಬಹಳ ಸಂತೋಷಪಡಿಸಿತು, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಸಹ ಅಗ್ರೆಸಿವ್ ಆಗಿ ಸೆಲೆಬ್ರೇಷನ್ ಮಾಡಿದರು. ದ್ರಾವಿಡ್ ಅವರು ಪ್ಲೇಯರ್ ಆಗಿದ್ದಾಗ, ಕೋಚ್ ಆಗಿದ್ದಾಗ ಯಾವಾಗಲೂ ಕಾಮ್ ಆಗಿಯೇ ಇದ್ದವರು, ಆದರೆ ಮೊನ್ನೆಯ ಪಂದ್ಯದ ಗೆಲುವು ಎಷ್ಟರ ಮಟ್ಟಿಗೆ ರೋಚಕವಾಗಿತ್ತು ಎಂದರೆ, ದ್ರಾವಿಡ್ ಅವರು ಕೂಡ ಅಗ್ರೆಸಿವ್ ಆಗುವ ಹಾಗೆ ಮಾಡಿತು, ದ್ರಾವಿಡ್ ಅವರ ಈ ವಿಡಿಯೋ ಅನ್ನು ನೀವು ಕೂಡ ತಪ್ಪದೇ ನೋಡಿ..